ಶಿವಮೊಗ್ಗದಲ್ಲಿ ನಿರ್ಮಲಾನಂದ ಶ್ರೀಗಳು | ಆಶೀರ್ವಾದಕ್ಕಾಗಿ ಮುಗಿಬಿದ್ದ ಮೂವರು ಅಭ್ಯರ್ಥಿಗಳು | ಯಾರಿಗೆ ಹಾರೈಕೆ?

Nirmalananda Sri at Shimoga Three Candidates for Blessing Nirmalananda Swamiji, KS Eshwarappa, BY Raghavendra, Geeta Sivarajakumar

ಶಿವಮೊಗ್ಗದಲ್ಲಿ ನಿರ್ಮಲಾನಂದ ಶ್ರೀಗಳು | ಆಶೀರ್ವಾದಕ್ಕಾಗಿ ಮುಗಿಬಿದ್ದ ಮೂವರು ಅಭ್ಯರ್ಥಿಗಳು | ಯಾರಿಗೆ ಹಾರೈಕೆ?
Nirmalananda Swamiji, KS Eshwarappa, BY Raghavendra, Geeta Sivarajakumar

SHIVAMOGGA | MALENADUTODAY NEWS | Apr 24, 2024    

ಶಿವಮೊಗ್ಗ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಕಣದಲ್ಲಿರುವ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಪ್ರಬಲ ಪೈಪೋಟಿಯೊಡ್ಡಬಲ್ಲ ಅಭ್ಯರ್ಥಿಗಳಾದ ಬಿ.ವೈ ರಾಘವೇಂದ್ರ, ಗೀತಾ ಶಿವರಾಜಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪರ ನಡುವೆ ಅಬ್ಬರದ ಕ್ಯಾಂಪೇನ್‌ ನಡೆಯುತ್ತಿದೆ. ಈ ನಡುವೆ ಶಿವಮೊಗ್ಗಕ್ಕೆ ಹಿರಿಯ ಶ್ರೀಗಳಾದ ನಿರ್ಮಲಾನಂದ ಶ್ರೀಗಳು ಆಗಮಿಸಿದ್ದರು. ಆದಿಚುಂಚನಗಿರಿ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಶ್ರೀಗಳ ಆಶೀರ್ವಾದ ಪಡೆಯಲು ಅಭ್ಯರ್ಥಿಗಳು ಮುಗಿಬಿದ್ದಿದ್ದು ವಿಶೇಷವಾಗಿತ್ತು. 

ಶಿವಮೊಗ್ಗದ ಆದಿಚುಂಚನಗಿರಿ ಮಠದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಗೀತಾ ಶಿವರಾಜ್ ಕುಮಾರ್ ದಂಪತಿ ಪಾಲ್ಗೊಂಡರು. ನಿರ್ಮಲಾನಂದ ಶ್ರೀಗಳಿಗೆ ನಮಿಸಿದ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜಕುಮಾರ್‌ ಶ್ರೀಗಳ ಆಶೀರ್ವಾದ ಕೋರಿದರು. ಇದೇ ವೇಳೆ ಶಿವಮೊಗ್ಗ ಶಾಖಾ ಮಠದ ಪ್ರಮುಖರಾದ ಪ್ರಸನ್ನನಾಥ ಸ್ವಾಮೀಜಿ ಅವರ ಆಶೀರ್ವಾದನ್ನೂ ದಂಪತಿ ಪಡೆದರು. ಶಿವಣ್ಣ ದಂಪತಿ ಜೊತೆ  ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ರಮೇಶ್ ಹೆಗ್ಡೆ, ಕಲಗೋಡು ರತ್ನಾಕರ ಸಹ ಶ್ರೀಗಳ ಆಶೀರ್ವಾದ ಪಡೆದರು  ಇದೇ ಸಂದರ್ಭದಲ್ಲಿ ಶಿವರಾಜಕುಮಾರ್ ಮಾತನಾಡಿದ ಶಿವಣ್ಣ ನಿರ್ಮಲಾನಂದನಾಥ ಶ್ರೀಗಳ ಭೇಟಿ ಪಾಸಿಟಿವ್‌ ಏನರ್ಜಿ ನೀಡಿದೆ ಎಂದರು. 

Nirmalananda Swamiji

   

ಇನ್ನೂ ಇತ್ತ ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪರವರು ಸಹ ಆದಿಚುಂಚನಗಿರಿ ಮಠಕ್ಕೆ ಬೇಟಿ ನೀಡಿ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಅವರ ಜೊತೆಗೆ ಪಾಲಿಕೆ ಮಾಜಿ ಮೇಯರ್ ಸುವರ್ಣ ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ವೀರಶೈವ ಲಿಂಗಾಯತ ಮುಖಂಡ ಮಹಾಲಿಂಗ ಶಾಸ್ತ್ರೀ ಮಾಜಿ ಉಪ ಮೇಯರ್ ಲಕ್ಷ್ಮಿ ಶಂಕರ್ ನಾಯ್ಕ್ ಉಪಸ್ಥಿತರಿದ್ದರು

Nirmalananda Swamiji

ಬಳಿಕ ಮಾತನಾಡಿದ ಅವರು, ಸಾಧು ಸಂತರು ಎಂದರೆ ನನಗೆ ದೇವರ ಸಮಾನ, ನಾನು ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನಿಸಿದ ನಂತರ ಕ್ಷೇತ್ರದ ಎಲ್ಲಾ ಮಠಗಳಿಗೆ ತೆರಳಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೆ ಆ ಸಂಧರ್ಭದಲ್ಲಿ ರಾಘವೇಂದ್ರ ಹಾಗು ಅವರ ಸ್ನೇಹಿತರು ಆಶೀರ್ವಾದ ಮಾಡಿದ ಸ್ವಾಮೀಜಿಗಳಿಗೆ ನೋವು ಉಂಟು ಮಾಡುವ ಹೇಳಿಕೆ ನೀಡಿದ್ದರು.ಸ್ವಾಮೀಜಿಗಳ ನೋವಿನ ಶಾಪ ಅವರಿಗಿದೆ. ನಂತರ ಬಲವಂತ ಮಾಡಿ ಮನೆಗೆ ಕರೆಸಿಕೊಂಡು ಆಶೀರ್ವಾದ ಪಡೆದರು ಬಲವಂತದ ಆಶೀರ್ವಾದ ಹಾಗು ಪ್ರೀತಿಯಿಂದ ಮಾಡುವ ಆಶೀರ್ವಾದಕ್ಕೂ ವ್ಯತ್ಯಾಸ ಇದೆ. ಪರಮ ಪೂಜ್ಯ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿದೆ ಬಹಳ ಹೊತ್ತು ನನ್ನ ಜೊತೆ ಮಾತನಾಡಿ ನಿನ್ನಂತಹ ಹಿಂದುತ್ವವಾದಿ ಧರ್ಮ ಉಳಿಸಲು ಸ್ಪರ್ಧೆ ಮಾಡಿದ್ದೀರ ನಿಮಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದರು. 

ಇನ್ನೂ ಶಿವಮೊಗ್ಗ ನಗರದ ಆದಿಚುಂಚನಗಿರಿ ಶಾಖಾಮಠದಲ್ಲಿ ನಡೆಯುತ್ತಿರುವ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ 26 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು. ಅಲ್ಲಿ ಅವರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಮುಖಂಡರಾದ ರಾಮಕೃಷ್ಣ, ದಿನೇಶ್ ಇತರರು ಉಪಸ್ಥಿತರಿದ್ದರು.

Nirmalananda Swamiji