ಫಿಲಂ ಶೂಟಿಂಗ್‌ ವೇಳೆ ಕುಡಿದವನ ಹಾವಳಿ | ಸಿಟ್ಟಲ್ಲಿ ಮನೆ ಬಿಟ್ಟು ಹೋದಾಕೆಯನ್ನ ಕರೆತಂದ ಪೊಲೀಸರು

The incident occurred in Sagar Rural Police Station and Tunganagar Police Station

ಫಿಲಂ ಶೂಟಿಂಗ್‌ ವೇಳೆ ಕುಡಿದವನ ಹಾವಳಿ | ಸಿಟ್ಟಲ್ಲಿ ಮನೆ ಬಿಟ್ಟು ಹೋದಾಕೆಯನ್ನ ಕರೆತಂದ ಪೊಲೀಸರು
Sagar Rural Police Station,Tunganagar Police Station

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆ 

ಫಿಲಂ ಶೂಟಿಂಗ್‌ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ತಂಡವೊಂದು ಫಿಲಂ ಶೂಟಿಂಗ್‌ ನಡೆಸ್ತಿತ್ತು. ಆ ಜಾಗದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಗಲಾಟೆ ತೆಗೆದಿದ್ದ. ಹೀಗಾಗಿ ಫಿಲಂ ಟೀಂ ಪೊಲೀಸರಿಗೆ ಕರೆ ಮಾಡಿದೆ ಸ್ಥಳಕ್ಕೆ ಬಂದ ಪೊಲೀಸರು ಕುಡಿದ ವ್ಯಕ್ತಿಗೆ ಎಚ್ಚರಿಕೆ ನೀಡಿ, ಅಲ್ಲಿಂದ ಕಳುಹಿಸಿದ್ದಾರೆ. 

ಇನ್ನೊಂದೆಡೆ ಇತ್ತ ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆ ಮಗಳು ಮನೆಯಲ್ಲಿ ಗಲಾಟೆ ಮಾಡಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದಾಳೆಂದು ಪೊಲೀಸರಿಗೆ ಮನೆಯವರು ದೂರಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ ಮನೆಯ ಮಗಳನ್ನು ಹುಡುಕಿ ಅವರ ಸಂಬಂಧಿಕರ ಮನೆಯಿಂದ ಕರೆತಂದು ಪೋಷಕರ ಸುಪರ್ಧಿಗೆ ಒಪ್ಪಿಸಿ ಗಲಾಟೆ ಮಾಡಿಕೊಳ್ಳದಂತೆ ಬುದ್ದಿವಾದ ಹೇಳಿದ್ದಾರೆ. 

A drunk man caused a disturbance during a film shoot and was warned by the police to leave. A family called the police on their daughter who went to a relative's house after a fight at home. The police brought her back to her parents and advised her not to quarrel.