ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಬಳಕೆಯಾದ ಬುಲ್ಡೋಜರ್ ಪೊಲೀಸ್! ಏನಿದು!?

Bulldozer used in Shivamogga district sagar! What is this!?

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಬಳಕೆಯಾದ  ಬುಲ್ಡೋಜರ್ ಪೊಲೀಸ್! ಏನಿದು!?

KARNATAKA NEWS/ ONLINE / Malenadu today/ Apr 27, 2023 GOOGLE NEWS


ಸಾಗರ  ಶಿವಮೊಗ್ಗ/  ಉತ್ತರಪ್ರದೇಶ ಯೋಗಿ ಸರ್ಕಾರದ ಆಡಳಿತದಲ್ಲಿ ಯುಪಿ ಪೊಲೀಸರು ಬುಲ್ಡೋಜರ್, ಜೆಸಿಬಿಗಳನ್ನ ರೌಡಿಗಳ, ಗ್ಯಾಂಗ್​ಸ್ಟರ್​ಗಳ ಮನೆಯೊಡೆಯಲು ಬಳಸುತ್ತಿರುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. 

 

ಅದೇರೀತಿಯಲ್ಲಿ ಶಿವಮೊಗ್ಗ ಜಿಲ್ಲೆ ಪೊಲೀಸರು ಸಹ ಬುಲ್ಡೋಜರ್ ಬಳಸಿದ್ದಾರೆ. ಆದರೆ ಇದು ಬೇರೆಯದ್ದೆ ಕಾರಣಕ್ಕೆ, ಕರ್ಕಶ ಧ್ವನಿಗೆ ಕಾರಣವಾಗಿ ಸೈಲೆನ್ಸರ್​ಗಳನ್ನು ನೆಲಸಮ ಮಾಡಲು ಪೊಲೀಸರು ಬುಲ್ಡೋಜರ್ ಬಳಿಸಿದ್ದಾರೆ. 

 

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

 

ಹೌದು,  ಸಾಗರ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ  ದೋಷಪೂರಿತ ಸೈಲೆನ್ಸರ್  (Defective Silencer)ಗಳ ವಿರುದ್ಧ  ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 

 

ಈ ಕಾರ್ಯಾಚರಣೆಯಲ್ಲಿ ಒಟ್ಟು 26 ಸೈಲೆನ್ಸರ್​ ಗಳನ್ನುವಶಕ್ಕೆ ಪಡೆಯಲಾಗಿದ್ದು, ಅವುಗಳನ್ನ ಸಾಗರ ನಗರದ ಬೆಳಲ ಮಕ್ಕಿ ಕ್ರಾಸ್ ನ ಹತ್ತಿರ ಬಿ. ಹೆಚ್ ರಸ್ತೆಯಲ್ಲಿ ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಗಿದೆ. 



ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಪಿ.ಐ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ. ಸಾಗರ ಪೇಟೆ ಠಾಣೆಯ ಪಿಎಸ್ಐ ರವರುಗಳಾದ ಹೊಳೆಬಸಪ್ಪ ಹೋಳಿ, ಶ್ರೀಪತಿ ಗಿನ್ನಿ, ಆರ್. ಕೆ.  ನಿಂಗಜ್ಜೆರ,  ಮತ್ತು ಎಸ್ .ಪಿ ಹೊಸಮನಿ, ಪಿಎಸ್ಐ ಸಾಗರ ಗ್ರಾಮಾಂತರ ಠಾಣೆ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.

 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 



ಮುಂದಿನ ದಿನಗಳಲ್ಲಿಯೂ ಸಹಾ Defective Silencer ಗಳನ್ನು ಬಳಸುವ ಚಾಲಕ / ಮಾಲೀಕರುಗಳ ವಿರುದ್ಧ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು   ಹಿರಿಯ ಸಹಾಯ ಪೊಲೀಸ್ ಅಧೀಕ್ಷಕ   ರೋಹನ್ ಜಗದೀಶ್ ತಿಳಿಸಿದ್ದಾರೆ. 

 

 

Malenadutoday.com Social media