ಶಿವಮೊಗ್ಗ ಜಿಲ್ಲೆಯ ಆನಂದಪುರ ಬಳಿ ಭೀಕರ ಅಪಘಾತ/ ಸಾಗರ ತಾಲ್ಲೂಕಿನ ವಿದ್ಯಾರ್ಥಿ ಸಾವು

Malenadu Today

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿಯಲ್ಲಿ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ಕೈರಾ ಬಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ  ಸಾವನ್ನಪ್ಪಿದ್ದಾರೆ. ಸಾಗರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. 

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. ಆನಂದಪುರ ಬಳಿ ಬರುವ ಯಡೆಹಳ್ಳಿಯ ನಿವಾಸಿ ವಿದ್ಯಾರ್ಥಿಯು​ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬೈಕ್​ನಲ್ಲಿ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಆಕ್ಸಿಡೆಂಟ್ ಹೇಗಾಯ್ತು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದ್ದು, ಸ್ಥಳಕ್ಕೆ ಆನಂದಪುರ ಉಪ ಠಾಣೆ ಪೊಲೀಸರು ಭೇಟಿಕೊಟ್ಟಿದ್ದರು ಪರಿಶೀಲನೆ ನಡೆಸ್ತಿದ್ದಾರೆ. 

Share This Article