ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾರು ನಿರ್ಣಾಯಕ? ಈ ಸಲದ ಲೆಕ್ಕಚಾರವೇನು? ಒಳಹೊಡೆತವಾ? ಕೊನೆ ಸೋಲಾ?

Malenadu Today

KARNATAKA NEWS/ ONLINE / Malenadu today/ Apr 27, 2023 GOOGLE NEWS


ತೀರ್ಥಹಳ್ಳಿಶಿವಮೊಗ್ಗ/  ಜಿಲ್ಲೆಗೆ ಸೀಮೀತವಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವನ್ನು ಅದರ ಅಂಕಿಅಂಶಗಳಿಂದ ವಿವರಿಸುವ ವರದಿಯನ್ನು Malenadu today ಮಾಡುತ್ತಿದೆ.. ಈಗಾಗಲೇ ಶಿವಮೊಗ್ಗ ನಗರದ ಲೆಕ್ಕಗಳನ್ನು ಓದುಗರ ಮುಂದೆ ಇಟ್ಟಿದ್ದೇವೆ. ಇವತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ದ ವಿವರಗಳನ್ನು ನೋಡೋಣ.. 

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ 

  • ಪುರುಷ ಮತದಾರರು-92141

  • ಮಹಿಳಾ ಮತದಾರರು-94453

  • ಒಟ್ಟು  ಮತದಾರರು-1,86594

ಜಾತಿ ಲೆಕ್ಕಾಚಾರ 

ಒಕ್ಕಲಿಗ 45 ಸಾವಿರ,ಈಡಿಗ-40 ಸಾವಿರ,ಬ್ರಾಹ್ಮಣ-15 ಸಾವಿರ,ಅಲ್ಪಸಂಖ್ಯಾತ ವರ್ಗ 12 ಸಾವಿರ,ಪರಿಶಿಷ್ಟ ಪಂಗಡ-15 ಸಾವಿರ. ಬಿಲ್ಲವ ಬಂಟ್ಸ್ ಮೊಗವೀರ ಕೊಂಕಣಿ ಮರಾಠಿ ಶೆಟ್ಟಿಗಾರ್-40 ತೀರ್ಥಹಳ್ಳಿ. 

ಒಕ್ಕಲಿಗರು ಹಾಗು ಈಡಿಗರು ಹೆಚ್ಚಿನ ಸಮಬಲದಲ್ಲಿದ್ದಾರೆ.ಅಂತಿಮವಾಗಿ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ.

ಕ್ಷೇತ್ರ ಹಿನ್ನಲೆ

ತೀರ್ಥಹಳ್ಳಿ ತಾಲೂಕು ರಾಷ್ಟ್ರದಲ್ಲಿ ಪ್ರಚಲಿತವಿರುವ ವಿಧಾನಸಭಾ ಕ್ಷೇತ್ರ. ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಯಿದೆ.  ಶೇಕಡಾ 80 ರಷ್ಟು ಮತ ಚಲಾಯಿಸುವ ಮತದಾರರು ಇಲ್ಲಿದ್ದಾರೆ.

ಇಲ್ಲಿ ಹಣ ಹೆಂಡ ಜಾತಿಗಿಂತಲೂ,ವ್ಯಕ್ತಿಯ ವರ್ಚಸ್ಸೇ ಮುಖ್ಯ . ಹೀಗಾಗಿ ಇಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಗೆದ್ದು ಸೋತಿದ್ದಾರೆ. 

ಕ್ಷೇತ್ರದ ಉದ್ದ 102 ಕಿಲೋಮೀಟರ್ ಇದ್ದು ರಾಜ್ಯದಲ್ಲಿಯೇ ವಿಸ್ತಾರವಾದ ದೊಡ್ಡ ಕ್ಷೇತ್ರವಾಗಿ ದೆ.ಸಮಾಜವಾದದ ಬೇರು ಹುಟ್ಟಿದ್ದೇ ತೀರ್ಥಹಳ್ಳಿಯಲ್ಲಿ,ಅದರ ಹರಿಕಾರ ಶಾಂತವೇರಿಗೋಪಾಲಗೌಡರು ತೀರ್ಥಹಳ್ಳಿಯಲ್ಲಿಯೇ ಜನಿಸಿದವರು..  

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ರಾಜ್ಯಾದ್ಯಂತ ಸಮಾಜವಾದದ ಸಂದೇಶದೊಂದಿಗೆ ಸಮಾಜದಲ್ಲಿ ಸಮರತೆಯನ್ನು ಮೂಡಿಸುವ ಯತ್ನ ಪ್ರಾರಂಭವಾದದ್ದು,ಈ ನೆಲದಿಂದಲೇ.ಅಷ್ಟೇ ಅಲ್ಲದೆ ರಾಷ್ಟ್ರಕವಿ ಕುವೆಂಪು,ಯು.ಆರ್ ಅನಂತಮೂರ್ತಿ,ಸೇರಿದಂತೆ ಹಲವು ಕವಿ,ಸಾಹಿತಿ,ಕಲಾವಿದರಿಗೆ ಪ್ರಕೃತಿ ದೇವಿ ಸ್ಪೂರ್ತಿಯಾಗಿದ್ದಾಳೆ.

ರಾಜ್ಯಕ್ಕೊಬ್ಬ ಮಾದರಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಹಾಗು ಜಸ್ಟಿಸ್ ರಾಮಾಜೋಯಿಸ್ ರಂತಹ ವ್ಯಕ್ತಿಗಳನ್ನು ನೀಡಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ

ಸಮಾಜವಾದದಿಂದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಂದು ಕ್ಷೇತ್ರದಲ್ಲಿ ಬಿಜೆಪಿ  ನೆಲೆನಿಂತಿದೆ.ಮುಖ್ಯವಾಗಿ ಒಕ್ಕಲಿಗ , ಈಡಿಗ, ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿದ್ದರೂ ಅಂತಿಮವಾಗಿ ಬ್ರಾಹ್ಮಣ ಹಾಗು ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಲಿವೆ. 

ಹಾಲಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು

ತೀರ್ಥಹಳ್ಳಿ-114 ಕ್ಷೇತ್ರದಲ್ಲಿ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಆರಗ ಜ್ಞಾನೇಂದ್ರ, ಎಎಪಿ ಶಿವಕುಮಾರಗೌಡ, ಐಎನ್‍ಸಿ ಕಿಮ್ಮನೆ ರತ್ನಾಕರ, ಕೆಆರ್​​ಎಸ್ ನ ಕೆ.ಎ.ಅರುಣ, ಜೆಡಿಎಸ್ ರಾಜಾರಾಂ ಕಣದಲ್ಲಿದ್ದಾರೆ.

ಹಿಂದಿನ ಚುನಾವಣೆ ಲೆಕ್ಕ

2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ರು . ಆರಗಾ ಜ್ಞಾನೇಂದ್ರ 67,527 ಮತಗಳನ್ನು ಪಡೆದಿದ್ದರೆ, ಕಾಂಗ್ರೇಸ್ ನ ಕಿಮ್ಮನೆ ರತ್ನಾಕರ್ 45572 ಮತಗಳನ್ನು ಪಡೆದು ಸೋಲು ಅನುಭವಿಸಿದ್ರು.

ಯಾರಿಗೆ ಪ್ಲಸ್ ಯಾರಿಗೆ ಮೈನಸ್

2018 ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕಿಮ್ಮನೆ ರತ್ನಾಕರ್ ಸೋಲಿನ ನಂತರೂ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಪೂರಕವಾಗಿ ಹೋರಾಟ ಪಾದಯಾತ್ರೆ ಮಾಡಿದ್ದರು. 

ಅಲ್ಲದೆ ಕಾಂಗ್ರೇಸ್ ನಿಂದ ಟಿಕೇಟ್ ಅಭ್ಯರ್ಥಿಯಾಗಿ ಬಂಡಾಯದ ಬಿಸಿ ಮುಟ್ಟಿಸಿದ್ದ ಆರ್.ಎಂ ಮಂಜುನಾಥ್ ಗೌಡರು ಕಿಮ್ಮನೆ ರಥಕ್ಕೆ ಸಾರಧಿಯಾಗಿದ್ದಾರೆ.

ಇವರಿಬ್ಬರ ಒಗ್ಗಟ್ಟು ಹಾಗು ವೈಯಕ್ತಿಕ ವರ್ಚಸ್ಸು ಕಾಂಗ್ರೇಸ್ ಗೆಲುವಿಗೆ ಪೂರಕ ಎನ್ನಲಾಗಿದೆ. ಒಂದು ವೇಳೆ ಪಕ್ಷದಿಂದ ಒಳಪೆಟ್ಟು ಬಿದ್ದರೆ, ಕಾಂಗ್ರೇಸ್ ಗೆ ಹಿನ್ನಡೆಯಾಗಲಿದೆ. 

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಆರಗಾ ಜ್ಞಾನೇಂದ್ರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾರ್ಯಕರ್ತರು ಕೆಲಸಗಳನ್ನು  ಸರಿಯಾಗಿ ಮಾಡಿಕೊಡಲಿಲ್ಲ ಎಂಬ ಅಸಮಧಾನವಿದೆ. 

ಬಿಜೆಪಿಗೆ ಓಟು ಚಲಾಯಿಸುತ್ತಾರೆಯೇ ಹೊರತು ಕಾರ್ಯಕರ್ತರು, ಹುಮ್ಮಸ್ಸಿನಿಂದ ಮತದಾರರನ್ನು ಮತಗಟ್ಟೆಗೆ ತರುವಷ್ಟರ ಮಟ್ಟಿಗೆ ಪ್ರಯತ್ನ ಹಾಕುತ್ತಾರಾ ಎಂಬುದು ಪ್ರಶ್ನೆಯಾಗಿದೆ. 

ಇನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಮೆಟ್ಟಲೇರಿದ ಜಮೀನು ಬೇಲಿ ವಿವಾದಗಳಿಗೆ ದ್ವೇಷದ ರಾಜಕಾರಣ ಮಾಡಿದ್ರು ಎಂಬ ಆರೋಪಗಳು ಹೇಗೆ ಪರಿಣಾಮ ಬೀರುತ್ತೆ ಎಂಬುದು ಸಹ ಮುಖ್ಯವಾಗುತ್ತದೆ. 

ಮೂರು ಸಾವಿರಕ್ಕೂ ಆದಿಕ ಅನುದಾನವನ್ನು ಆರಗ ಜ್ಞಾನೇಂದ್ರ ತಮ್ಮ‌ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ತಂದಿದ್ದಾರೆ. ರಸ್ತೆ ಸೇತುವೆಗಳಿಗೆ ಕಾಯಕಲ್ಪವಾಗಿದೆ. ಅಭಿವೃದ್ಧಿ ನೋಡಿಯು ಕ್ಷೇತ್ರದ ಮತದಾರ ತೀರ್ಮಾನ ತೆಗೆದುಕೊಳ್ಳಬಹುದು. 2018 ರ ಚುನಾವಣೆಯಂತೆ ಈ ಬಾರಿ ಕ್ಷೇತ್ರದಲ್ಲಿ ಹಿಂದುತ್ವದ ಫ್ಯಾಕ್ಟರ್ ಅಷ್ಟಾಗಿ ವರ್ಕೌಟ್ ಆಗೋದಿಲ್ಲ

ವಿಶೇಷತೆ!

ವಿಶೇಷ ಅಂದರೆ, ಇಲ್ಲಿನ ಇಬ್ಬರು ಅಭ್ಯರ್ಥಿಗಳು ಈ ಸಲ ನನ್ನ ಕಡೆಯ ಚುನಾವಣೆ ಎಂದು ಘೋಷಿಸಿದ್ದಾರೆ. 

ಆರಗ ಜ್ಞಾನೇಂದ್ರರವರು 1983ರ ಚುನಾವಣೆಯಿಂದ ಸತತವಾಗಿ ಒಂದೇ ಪಕ್ಷ ಮತ್ತು ಚಿಹ್ನೆಯಡಿ ಸ್ಪರ್ಧೆ ಮಾಡುತ್ತಾ ಬಂದಿದ್ಧಾರೆ. ಒಟ್ಟು 10 ಸಲ ಸ್ಪರ್ಧೆ ಮಾಡಿರುವ ಜ್ಞಾನೇಂದ್ರ ಈ ಪೈಕಿ,  5 ಸಲ ಗೆದ್ದು 4 ಸಲ ಸೋತಿದ್ದಾರೆ ಇದೀಗ  10ನೇ ಬಾರಿಗೆ ಕಣದಲ್ಲಿದ್ದಾರೆ.  

ಇನ್ನೂ  6ನೇ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಕಿಮ್ಮನೆ ರತ್ನಾಕರ್​ರವರು ಹಿಂದಿನ 5 ಸಲದ ಚುನಾವಣೆಯಲ್ಲಿ 3 ಸಲ ಸೋತು, 2 ಸಲ ಗೆದ್ದಿರುದ್ದಾರೆ. ಅವರು ಸಹ  ಈ ಸಲ ನನ್ನ ಕೊನೆ ಚುನಾವಣೆ ಎಂದು ಘೋಷಿಸಿದ್ದಾರೆ.       

Malenadutoday.com Social media

Share This Article