Anandapura case | ನಡು ರೋಡಲ್ಲಿ ಲಾಂಗ್ ಬೀಸಲು ಕಾರಣವಾದ ಇನ್ನೂ ಮೂವರು ಅರೆಸ್ಟ್ | ಕಾಡಲ್ಲಿ ಸಿಕ್ಕಿಬಿದ್ದವರು
A young man from Sagar created panic by wielding a machete and walking on the road near Anandapura pete, Sagar taluk, Shivamogga district. Locals caught him and handed him over to the police. police conducted a combing operation in a nearby forest and arrested the other three accused individuals.

SHIVAMOGGA | MALENADUTODAY NEWS | May 27, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೇಟೆ ಸಮೀಪ ನಿನ್ನೆ ಸಾಗರದ ಯುವಕನೊಬ್ಬ ಲಾಂಗು ಹಿಡಿದು ರಸ್ತೆಯಲ್ಲಿ ಅಡ್ಡಾಡುತ್ತಾ ಭಯ ಹುಟ್ಟಿಸಿದ ಘಟನೆ ನಡೆದಿತ್ತು. ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿತ್ತಷ್ಟೆ ಅಲ್ಲದೆ ಆತನನ್ನು ಉಪಾಯ ಮಾಡಿ ಹಿಡಿದಿದ್ದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಆನಂದಪುರ ಪೊಲೀಸರಿಗೆ ಒಪ್ಪಿಸಿದ್ದರು.
ಇದಾದ ಬಳಿಗ ಘಟನೆ ಗಂಭೀರ ಸ್ವರೂಪ ಪಡೆದುಕೊಂಡು ರಾಜ್ಯಮಟ್ಟದಲ್ಲಿ ವರದಿಯಾಯಿತಷ್ಟೆ ಅಲ್ಲದೆ ಶಿವಮೊಗ್ಗದ ಕಾನೂನು ಸುವ್ಯವಸ್ಥೆಯ ಬಗ್ಗೆ ಬೆಂಗಳೂರು ಮಂದಿ ಪ್ರಶ್ನೆ ಕೇಳುವಂತೆ ಮಾಡಿತ್ತು. ಈ ನಡುವೆ ಶಿವಮೊಗ್ಗ ಪೊಲೀಸರು ಘಟನೆ ಬೆನ್ನಲ್ಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆಯಲ್ಲಿ ಭಾಗಿಯಾದವರು ಎನ್ನಲಾದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಸಾಗರ ಮೂಲದ ಯುವಕ ಆನಂದಪುರ ಹೆದ್ದಾರಿಯಲ್ಲಿ ಲಾಂಗ್ ಬೀಸುತ್ತಾ ಓಡಾಡಿದ ಬೆನ್ನಲ್ಲೆ ಸ್ಥಳೀಯರು ಆತನನ್ನು ಹಿಡಿದು ಏಟುಕೊಟ್ಟು ಠಾಣೆಗೆ ಕರೆದೊಯ್ದರು. ಆತನನ್ನ ವಿಚಾರಿಸಿದಾಗ ಇನ್ನೂ ಮೂವರು ಈ ಪ್ರಸಂಗದಲ್ಲಿರುವುದು ಗೊತ್ತಾಗಿದೆ. ಹಾಗಾಗಿ ಅವರ ಬೇಟೆಗೆ ಪೊಲೀಸರು ಮುಂದಾದರು. ಆರೋಪಿಗಳು ಮಾದಕ ವಸ್ತು ಸೇವಿಸಿ ಹೀಗೆ ಆಡಿದ್ದರಾ? ಅಥವಾ ನಡೆದ ಘಟನೆಗೆ ಬೇರೆ ಕಾರಣವಿದ್ಯಾ? ಪೊಲೀಸರಿಗೆ ವಿಚಾರ ಸ್ಪಷ್ಟವಾಗಿಸುವ ಅನಿವಾರ್ಯತೆಯಿತ್ತು.
ಹೀಗಾಗಿ ಮೊಬೈಲ್ ಲೊಕೆಶೇನ್ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿದ ಉಳಿದ ಆರೋಪಿಗಳ ಬೆನ್ನಟ್ಟಿದ ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಹಾಗೂ ಸಾಗರದ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಮತ್ತು ಸಿಬ್ಬಂದಿ ಸಾಗರದ ಸಮೀಪದ ಕಾಡೊಂದರಲ್ಲಿ ಅಕ್ಷರಶಃ ಕೂಂಬಿಂಗ್ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯರ ಭಯಕ್ಕೆ ಓಡಿ ಕಾಡಿನ ನಡುವೆ ಅಡಗಿದ್ದ ಆರೋಪಿಗಳನ್ನ ಸುತ್ತುವರಿದ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿ ಕರೆತಂದಿದ್ದಾರೆ. ಸದ್ಯ ವಿಚಾರಣೆ ಮುಂದುವರಿದಿದ್ದು, ಘಟನೆಗೆ ಕಾರಣ ತಿಳಿಯಬೇಕಿದೆ.
A young man from Sagar created panic by wielding a machete and walking on the road near Anandapurapete, Sagar taluk, Shivamogga district. Locals caught him and handed him over to the police. police conducted a combing operation in a nearby forest and arrested the other three accused individuals.