ಶಿವಮೊಗ್ಗ ಹೇಗೆ ನಡೆಯುತ್ತಿದೆ ಮತದಾನ ? ಇಲ್ಲಿವರೆಗೂ ಎಷ್ಟು ಪರ್ಸೆಂಟೇಜ್‌ ವೋಟ್‌ ಆಯ್ತು?

How is voting going on in Shimoga? What is the percentage of votes so far? . Shimoga Lok Sabha Election

ಶಿವಮೊಗ್ಗ ಹೇಗೆ ನಡೆಯುತ್ತಿದೆ ಮತದಾನ ? ಇಲ್ಲಿವರೆಗೂ ಎಷ್ಟು ಪರ್ಸೆಂಟೇಜ್‌ ವೋಟ್‌ ಆಯ್ತು?
Shimoga Lok Sabha Election

SHIVAMOGGA | MALENADUTODAY NEWS | May 7, 2024  

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಬಿಸಿಲು ಮತದಾರರನ್ನ ಬೆಳಗ್ಗೆ ಬೆಳಗ್ಗೆ ಮತಗಟ್ಟೆಗೆ ಹೋಗುವಂತೆ ಮಾಡಿದೆ. ಹತ್ತು ಗಂಟೆಯ ನಂತರ ಬಿಸಿಲು ಸುಡುವ ಕಾರಣಕ್ಕೆ ಜನರು ಬೆಳಗ್ಗೆಯೇ ಮತಗಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಣಾಮ ಮತದಾರರ ರಶ್‌ ಹಾಗೂ ಉತ್ಸಾಹ ಎರಡು ಶಿವಮೊಗ್ಗದಲ್ಲಿ ಕಾಣಿಸಿದೆ.

ಮತದಾನ ಜಾಗೃತಿ ಹಾಗೂ ರಾಜಕಾರಣದ ಕುತೂಹಲದಿಂದಾಗಿ ಮತಗಟ್ಟೆಗಳಲ್ಲಿ ಮತದಾರರ ಉತ್ಸಾಹ ಕಂಡುಬಂದಿದೆ. ಚುನಾವಣಾ ಆಯೋಗ ಸಿಇಒ ಕರ್ನಾಟಕ ವೆಬ್‌ಸೈಟ್‌ನ ಮಾಹಿತಿ ಪ್ರಕಾರ, ಇದುವರೆಗೂ ಅಂದರೆ ಬೆಳಗ್ಗೆ 9 ಗಂಟೆಗೆ ಹೊರಬಿದ್ದ ಅಂಕಿ ಅಂಶದ ಪ್ರಕಾರ, ಶೇಕಡಾ 11 ಪರ್ಸೆಂಟ್‌ ಮತದಾನವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇಕಡಾ  11.45 ರಷ್ಟು ಮತದಾನವಾಗಿದ್ದು ಮತದಾರರ ಉತ್ಸಾಹವನ್ನು ತೋರಿಸುತ್ತಿದೆ. 

ಬೈಂದೂರು  13.66 , ಸಾಗರ 12.66 , ಶಿವಮೊಗ್ಗ  11.60 , ಸೊರಬ 9.76, ಶಿವಮೊಗ್ಗ  12.77 , ತೀರ್ಥಹಳ್ಳಿ 11.87 , ಭದ್ರಾವತಿ  10.37 ,ಶಿಕಾರಿಪುರ  9.28 ರಷ್ಟು ಮತದಾನವಾಗಿದೆ.