ಕಾಂಗ್ರೆಸ್ ನಡೆಸ್ತಿರುವುದು ಭಾರತ್ ತೋಡೋ ಯಾತ್ರೆ ! ಬಿಜೆಪಿ ಆಕ್ರೋಶಕ್ಕೆ ಕಾರಣವೇನು?
Bharat Todo Yatra is being conducted by Congress! What is the reason for BJP outrage?
Shivamogga Apr 2, 2024 ಕಾಂಗ್ರೆಸ್ ಭಾರತ್ ತೋಡೋ ಯಾತ್ರೆ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ಈ ಕುರಿತು ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ 24 ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ ಈ ಹಬ್ಬಕ್ಕೆ ದೇಶವಾಸಿಗಳು ಸನ್ನದ್ಧರಾಗಿದ್ದಾರೆ. ರಾಷ್ಟ್ರೀಯ ವಿಷಯಗಳ ಮೇಲೆ ಚುನಾವಣೆ ನಡೆಯಬೇಕು ಎಂಬುದು ದೇಶವಾಸಿಗಳ ಹೆಬ್ಬಯಕೆಯಾಗಿದೆ ಎಂದು ಹೇಳಿದರು
ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ ಯಾತ್ರೆ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ನವರು ಭಾರತ್ ಜೋಡೋ ಯಾತ್ರೆ ಅಲ್ಲ ಭಾರತ್ ತೋಡೊ ಯಾತ್ರೆ ಮಾಡುತ್ತಿದ್ದಾರೆ. ಜನರು ಕಾಂಗ್ರೆಸ್‌ನ್ನ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಅವರ ಯಾತ್ರೆ ವಿಫಲವಾಗುತ್ತಿರುವುದು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಪೈಕಿ ಜವಾಹರ್‌ಲಾಲ್ ನೆಹರು ಅವರಿಂದ ಹಿಡಿದು ರಾಹುಲ್ ಗಾಂಧಿ ವರೆಗೂ ಯಾರು ಸಹ ದೇಶವನ್ನು ಒಂದುಗೂಡಿಸುವ ಕೆಲಸವನ್ನು ಮಾಡಿಲ್ಲ ̤ ಸರ್ಜಿಕಲ್ ಸ್ಟ್ರೈಕ್ ನಡೆದಾಗ ದೇಶಾಭಿಮಾನಿಗಳು ಸಂಭ್ರಮ ಪಟ್ಟರೆ ಕಾಂಗ್ರೆಸ್ ಪಕ್ಷ ಅನುಮಾನದಿಂದ ನೋಡಿದ್ದರು.
ಇನ್ನೂ ವಿರೋಧ ಪಕ್ಷ ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಿ ಎಂದೇ ಬಿಂಬಿಸ್ತಿದೆ. ಆದರೆ ರಾಹುಲ್ ಗಾಂಧಿ ಬೇರೆ ದೇಶದಲ್ಲಿ ಹೋಗಿ ಭಾರತ ಒಂದು ದೇಶ ಅಲ್ಲ ಹಲವು ರಾಜ್ಯಗಳ ಒಕ್ಕೂಟ ಎಂದು ಹೇಳುತ್ತಿದ್ದಾರೆ. ಅಂತಹವರನ್ನು ಪ್ರಧಾನಿ ಎಂದು ಒಪ್ಪುವುದು ಹೇಗೆ ಅಂತಾ ಪ್ರಶ್ನಿಸಿದ್ರು
ಡಿ.ಕೆ ಸುರೇಶ್ ಅವರು ದೇಶ ವಿಭಜನೆ ಮಾತನ್ನಾಡಿದ್ದಾರೆ. ಆದರೆ ಅವರ ಪಕ್ಷದಲ್ಲಿ ಅದನ್ನು ಯಾರು ವಿರೋಧಿಸಿಲ್ಲ. ಕಾಂಗ್ರೆಸ್‌ಗೆ ವಿಕಸಿತ ಸದೃಢ ಭಾರತವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ದೇಶ ಮುಖ್ಯವಲ್ಲ ರಾಜಕೀಯ ಮುಖ್ಯ. ಅವರಿಗೆ ನಿಜವಾಗಿಯು ರಾಷ್ಟ್ರ ಭಕ್ತಿ ಇದ್ದರೇ ರಾಷ್ಟ್ರ ವಿರೋಧಿ ಹೇಳಿಕೆ ನೀಡಿರುವ ಡಿಎಂಕೆ ಪಕ್ಷವನ್ನು ನಿಮ್ಮ ಇಂಡಿಯಾ ಒಕ್ಕೂಟದಿಂದ ಕೈಬಿಡಬೇಕುಎಂದು ಆಗ್ರಹಿಸಿದ್ರು.