ಶಿವಮೊಗ್ಗ ಲೋಕಸಭಾ ಕ್ಷೇತ್ರ | ಕಣದಲ್ಲಿ ಜೊಮೊಟೋ ಡೆಲಿವರಿ ಬಾಯ್‌, ನಿರುದ್ಯೋಗಿ| ವೃತ್ತಿಯೇ ಇಲ್ಲಿ ಅಚ್ಚರಿ

Shimoga Lok Sabha Constituency | Zomoto Delivery Boy, Unemployed in Candidate List The career of the candidates is surprising

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಕಣದಲ್ಲಿ ಜೊಮೊಟೋ ಡೆಲಿವರಿ ಬಾಯ್‌, ನಿರುದ್ಯೋಗಿ| ವೃತ್ತಿಯೇ ಇಲ್ಲಿ ಅಚ್ಚರಿ
Shimoga Lok Sabha Constituency

SHIVAMOGGA | MALENADUTODAY NEWS | Apr 24, 2024    

ಶಿವಮೊಗ್ಗ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನ ಸೂಕ್ಷ್ಮವಾಗಿ ಗಮನಿಸಿದರೆ, ಹಲವು ಕುತೂಹಲಕಾರಿ ಅಂಶಗಳು ಕಾಣುತ್ತಿವೆ. ಇದೇ ವಿಚಾರವಾಗಿ ಮಲೆನಾಡು ಟುಡೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಕ್ರಮ ಸಂಖ್ಯೆ ಹಾಗೂ ಅವರ ವಿಳಾಸದ ಕುತೂಹಲದ ಬಗ್ಗೆ ನಿನ್ನೆ ವರದಿ ಮಾಡಿತ್ತು. ಇದೀಗ ಅಂತಹುದ್ದೆ ವಿಷಯವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.. 

ಜೊಮೊಟೊ ಬಾಯ್‌ ಸ್ಪರ್ಧೆ

ಶಿವಮೊಗ್ಗ ಚುನಾವಣೆಯಲ್ಲಿ  ಸ್ಪರ್ಧಿಸ್ತಿರುವ ವ್ಯಕ್ತಿಗಳ ಉದ್ಯೋಗ ಹಾಗೂ ವೃತ್ತಿಯು ಸಖತ್‌ ಇಂಟರ್‌ಸ್ಟಿಂಗ್‌ ಆಗಿದೆ. ಅದರಲ್ಲಿಯು ತುಮಕೂರಿನ  Zomoto ಪುಡ್‌ ಡೆಲಿವರಿ ಬಾಯ್‌ ಶಿವಮೊಗ್ಗದಲ್ಲಿ ಕ‍ಣಕ್ಕಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಂಡಿ ರಂಗನಾಥ ತುಮಕೂರಿನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್ ಆಗಿದ್ದಾರೆ. ಇವರ ಬಳಿ ಇರುವುದು ಸುಮಾರು ಐವತ್ತು ಸಾವಿರ ರೂಪಾಯಿಗಳು ಮಾತ್ರ, ಆಸ್ತಿ ಕಾಲಂನಲ್ಲಿ ಇವರು ಏನೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಆದಾಗ್ಯು ಇವರ ಸ್ಪರ್ಧೆ ಪ್ರಜಾಪ್ರಭುತ್ವದ ವಿಶಿಷ್ಟತೆಯನ್ನು ಸಾರುತ್ತಿದೆ. 

ಫುಡ್‌ ಡೆಲಿವರಿ ಬಾಯ್ ಅಷ್ಟೆ ಅಲ್ಲದೆ ಪುರೋಹಿತರು, ಸೌದೆ ವ್ಯಾಪಾರಿ, ಕಲಾವಿದ, ಕಾರು ಚಾಲಕ, ಕೃಷಿಕ, ಕೂಲಿ ಕಾರ್ಮಿಕ ಅಷ್ಟೆ ಏಕೆ ಶಿವಮೊಗ್ಗ ಲೋಕಸಭಾ ಅಖಾಡದಲ್ಲಿ ಓರ್ವ ನಿರುದ್ಯೊಗಿ ಕೂಡ ಸ್ಪರ್ಧಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಪೂಜಾ ಅಣ್ಣಯ್ಯ ತಮ್ಮನ್ನು ನಿರುದ್ಯೋಗಿ ಎಂದು ತಿಳಿಸಿದ್ದಾರೆ. ಬೆಂಗಳೂರಿನವರು ಶಿವಮೊಗ್ಗದಲ್ಲಿ ಏಕೆ ಸ್ಪರ್ಧಿಸ್ತಿದ್ದೀರಿ ಎಂದರೆ ರಾಜಕಾರಣದ ಅನುಭವ ಪಡೆಯುವ ಸಲುವಾಗಿ ಈ ಸ್ಪರ್ಧೆ ಎಂದಿದ್ದಾರೆ. 

ಉಳಿದಂತೆ ಅಭ್ಯರ್ಥಿಗಳ ವೃತ್ತಿ ಹಾಗೂ ಉದ್ಯೋಗವನ್ನು ಗಮನಿಸುವುದಾದರೆ, 

  1. ಗೀತಾಶಿವರಾಜ ಕುಮಾರ್‌  | ವ್ಯವಹಾರ 

  2. ಬಿ.ವೈ.ರಾಘವೇಂದ್ರ  | ಕೃಷಿ, ಶಿಕ್ಷಣ ಮತ್ತು ವ್ಯವಹಾರ

  3. ಎಸ್‌ಕೆ ಪ್ರಭು  | ವ್ಯವಸಾಯ

  4. ಅರುಣ ಕಾನಹಳ್ಳಿ | ರೈತ , ಕಾರ್ಮಿಕ 

  5. ಎಡಿ ಶಿವಪ್ಪ | ಎಲ್‌ಐಸಿಯಲ್ಲಿ ಮುಖ್ಯ ಸಲಹೆಗಾರ 

  6. ಮೊಹಮ್ಮದ್‌ ಯೂಸೂಫ್‌ ಖಾನ್‌  | ಸೌದೆ ವ್ಯಾಪಾರ

  7. ಜಿ.ಜಯದೇವ | ಚಾಲಕ

  8. ಕೆಎಸ್‌ ಈಶ್ವರಪ್ಪ | ವ್ಯಾಪಾರ 

  9. ಡಿಎಸ್‌ ಈಶ್ವರಪ್ಪ | ವ್ಯವಸಾಯ 

  10. ಪೂಜಾ ಅಣ್ಣಯ್ಯ | ನಿರುದ್ಯೋಗಿ 

  11. ಇ ಹನುಮಂತ ನಾಯಕ | ಕೃಷಿ ಕಾರ್ಮಿಕ 

  12. ಚಂದ್ರಶೇಖರ್‌ ಹೆಚ್‌ಸಿ |  ಕೃಷಿ ಮತ್ತು ವ್ಯವಹಾರ 

  13. ಬಂಡಿ ರಂಗನಾಥ  | ಜೊಮೊಟೋ ಡಿಲೆವರಿ ಬಾಯ್‌

  14. ಸಂದೇಶ್‌ ಶೆಟ್ಟಿ  | ಕಲಾವಿದ 

  15. ಶ್ರೀಪತಿ ಭಟ್‌ | ಪೌರೋಹಿತ್ಯ

  16. ಇಮ್ತಿಯಾಜ್‌ ಎ ಅತ್ತಾರ್‌ | ಲಾಜಿಸ್ಟಿಕ್ಸ್‌ ಮತ್ತು ಟ್ರೇಡಿಂಗ್‌

  17. ರವಿಕುಮಾರ್‌ ಎನ್‌ | ವ್ಯವಸಾಯ

  18. ಹೆಚ್‌ ಸುರೇಶ್‌ ಪೂಜಾರಿ  | ಕ್ಯಾಂಟೀನ್‌ ವ್ಯಹವಾರ

  19. ಶಿವರುದ್ರಯ್ಯ ಸ್ವಾಮಿ | ಆದಾಯ ತೆರಿಗೆ ಸಲಹೆಗಾರರು

  20. ಜಾನ್‌ ಬೆನ್ನಿ | ಡ್ರೈವಿಂಗ್‌ ಸ್ಕೂಲ್‌ ಮತ್ತು ವಾಯು ಮಾಲಿನ್ಯ ತಪಾಸಣಾ ಕೇಂದ್ರ 

  21. ಗಣೇಶ್‌ ಬಿ|  ಪತ್ರಿಕೋದ್ಯಮ, ವ್ಯಾಪಾರ, ಕೃಷಿ

  22. ಕುಣಾಜೆ ಮಂಜುನಾಥ ಗೌಡ | ಕೃಷಿ

  23. ಎನ್‌ವಿ ನವೀನ್‌ ಕುಮಾರ್‌  | ಸ್ವ ಉದ್ಯೋಗ