ಶಿವಮೊಗ್ಗ ರಾಜಕಾರಣವನ್ನು ಡುಮುಕಿಸುತ್ತಾ ರಾಷ್ಟ್ರ ಭಕ್ತರ ಅಭಿಪ್ರಾಯ ಸಂಗ್ರಹಣಾ ಸಭೆ! ಏನಿದು?

Rastra bhaktara balaga's opinion poll meeting sparks curiosity in Shivamogga politics What is this?

ಶಿವಮೊಗ್ಗ ರಾಜಕಾರಣವನ್ನು ಡುಮುಕಿಸುತ್ತಾ ರಾಷ್ಟ್ರ ಭಕ್ತರ ಅಭಿಪ್ರಾಯ ಸಂಗ್ರಹಣಾ ಸಭೆ! ಏನಿದು?
Rastra bhaktara balaga

shivamogga Mar 13, 2024 Rastra bhaktara balaga ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ರವರ ಪುತ್ರ ಕೆಇ ಕಾಂತೇಶ್​ಗೆ ಮಿಸ್ ಆಗುವ ಸಾಧ್ಯತೆಗಳು ಬಹುತೇಕ ಗೋಚರಗೊಳ್ತಿವೆ. ಆದಾಗ್ಯು ಈ ಬಗ್ಗೆ ನಂಬಿಕೆ ಕಳೆದುಕೊಳ್ಳದ ಕೆ.ಎಸ್​.ಈಶ್ವರಪ್ಪ  ಸುದ್ದಿಗೋಷ್ಟಿ ನಡೆಸಿ ಸಾಧ್ಯತೆಗಳನ್ನು ವಿವರಿಸಿದ್ದಾರೆ. 

ಇನ್ನೊಂದೆಡೆ ಈಶ್ವರಪ್ಪನವರ ಬೆಂಬಲಿಗರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದು ಆಗಿದೆ. ಅದರ ಬಗ್ಗೆಯು ಈಶ್ವರಪ್ಪನವರು ಪ್ರತಿಕ್ರಿಯೆ ನೀಡಿದ್ಧಾರೆ. ಇನ್ನೂ ಇದೆಲ್ಲದರ ಜೊತೆಗೆ ಈಶ್ವರಪ್ಪನವರ ಅಭಿಮಾನಿ ಬಳಗ ಶುಕ್ರವಾರ ಸಂಜೆ ಮಹತ್ವದ ಸಭೆ ಕರೆದಿದೆ. ಅದರ ಆಮಂತ್ರಣ ಪತ್ರಿಕೆಯು ಸಹ ಹೊರಬಿದ್ದಿದೆ

ರಾಷ್ಟ್ರ ಭಕ್ತರ ಬಳಗ, ಶಿವಮೊಗ್ಗ ಆಯೋಜಿಸಿರುವ ಈ ಸಭೆಗೆ “ಅಭಿಪ್ರಾಯ ಸಂಗ್ರಹಣಾ ಸಭೆ” ಎಂದು ಕರೆಯಲಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಸಕ್ತ ವಿದ್ಯಾಮಾನಗಳ ಹಿನ್ನೆಲೆಯಲ್ಲಿ“ಅಭಿಪ್ರಾಯ ಸಂಗ್ರಹಣಾ ಸಭೆ”  ಆಯೋಜಿಸಲಾಗಿದ್ದು,  ಕರ್ನಾಟಕ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು, ಹಿಂದುತ್ವದ ಗುಡುಗಿನ ಧ್ವನಿಯಾಗಿರುವ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪನವರು ಈ ಸಭೆಯಲ್ಲಿ ಉಪಸ್ಥಿತರಿರುತ್ತಾರೆ

ಸ್ವಾಭಿಮಾನದ ಪ್ರಶ್ನೆಯಾಗಿರುವ ಈ ವಿಶೇಷ ಸಭೆಗೆ ತಾವು ಅಪೇಕ್ಷಿತರು ಈ ಆಮಂತ್ರಣವನ್ನು ಸ್ವೀಕರಿಸಿ ತಾವು ಸಭೆಗೆ ಆಗಮಿಸಬೇಕೆಂದು ಕೋರಲಾಗಿದೆ  ದಿನಾಂಕ: 15, ಮಾರ್ಚ್, ಶುಕ್ರವಾರ. ಸಂಜೆ 5-00 ಗಂಟೆಗೆ  ಸ್ಥಳ : ಬಂಜಾರ ಭವನ (ಜಿಲ್ಲಾ ನ್ಯಾಯಾಲಯದ ಎದುರು) ನಿಮ್ಮ ನಿರೀಕ್ಷೆಯಲ್ಲಿ ರಾಷ್ಟ್ರ ಭಕ್ತರ ಬಳಗ, ಶಿವಮೊಗ್ಗ ಎಂದು ಆಮಂತ್ರಿಸಲಾಗಿದೆ. 

ಸದ್ಯ ಈ ಸಭೆ ತೀವ್ರ ಕುತೂಹಲ ಮೂಡಿಸಿದ್ದು, ಈಶ್ವರಪ್ಪನವರ ಮಾತು ಹಾಗೂ ಸಭೆಯಲ್ಲಿ ಕೇಳಿಬರುವ ಆಗ್ರಹಗಳು ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.