ಲೋಕಸಭಾ ಚುನಾವಣೆ -2024 ಬಿ.ವೈ.ರಾಘವೇಂದ್ರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ FIR

Lok Sabha Elections 2024: FIR filed against B Y Raghavendra for violating model code of conduct in Chitradurga

ಲೋಕಸಭಾ ಚುನಾವಣೆ -2024 ಬಿ.ವೈ.ರಾಘವೇಂದ್ರ ವಿರುದ್ದ  ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ FIR
Lok Sabha Elections 2024

shivamogga Mar 25, 2024 FIR filed against B Y Raghavendra ಲೋಕಸಭಾ ಚುನಾವಣೆ 2024 ರ ಬಿಸಿ ಜೋರಾಗುತ್ತಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಶಿವಮೊಗ್ಗದಲ್ಲಿ ಕಣಕ್ಕಿಳಿದಿರುವ ಗೀತಾ ಶಿವರಾಜ್‌ ಕುಮಾರ್‌ ಪರವಾಗಿ ಶಿವಣ್ಣ ಪ್ರಚಾರ ಮಾಡುತ್ತಿದ್ದು. ಇದರ ವಿರುದ್ಧ ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ನಟ ಶಿವಣ್ಣ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. 

ಇನ್ನೊಂದೆಡೆ ಶಿವಮೊಗ್ಗ ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರ ವಿರುದ್ಧ ಚಿತ್ರದುರ್ಗ ಜಿಲ್ಲೆಯಲ್ಲಿ ಎಲೆಕ್ಷನ್‌ ಕೋಡ್‌ ಆಫ್‌ ಕಂಡೆಕ್ಟ್‌ ಉಲ್ಲಂಘನೆ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಚುನಾವಣೆ ಕರ್ತವ್ಯದಲ್ಲಿರುವ ಅಧಿಕಾರಿ ಅವಿನಾಶ್‌ ಎಂಬವರು  ನೀಡಿದ ದೂರಿನನ್ವಯ ಈ ಎಫ್‌ಐಆರ್‌ ದಾಖಲಾಗಿದೆ. 

ಏನಿದು ಪ್ರಕರಣ 

ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ನಲ್ಲಿ  first information report (FIR)  ದಾಖಲಾಗಿದ್ದು, ಅದರಲ್ಲಿ ಅವಿನಾಶ್‌ ಪಿ ಎಂಬವರು ನೀಡಿರುವ ದೂರನ್ನ ಉಲ್ಲೇಖಿಸಲಾಗಿದೆ. ಎಫ್‌ಐಆರ್‌ ನಲ್ಲಿ ದಾಖಖಲಾಗಿರುವ ಪ್ರಕಾರ, ಕಳೆದ ಶನಿವಾರ ಸಂಸದ ಬಿವೈ ರಾಘವೇಂದ್ರರವರು ಚಿತ್ರದುರ್ಗಕ್ಕೆ ತೆರಳಿದ್ದರು. 

ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ ಎಂಬುದು ಆರೋಪ ಈ ಮೂಲಕ  ಧಾರ್ಮಿಕ ಸ್ಥಳವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪೂರ್ವಾನುಮತಿ ಪಡೆಯದೆ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ಭಾಷಣದ ತುಣಕನ್ನು ನೀತಿ ಸಂಹಿತೆಯ ಉಲ್ಲಂಘನೆ ಆರೋಪದಡಿ ತರಲಾಗಿದೆ. 

ತಮ್ಮ ಮಾತಿನಲ್ಲಿ ಸಂಸದ ಬಿ.ವೈ.ರಾಘವೇಂದ್ರರವರು ಈ ಚುನಾವಣೆಯನ್ನು ಧರ್ಮ ಯುದ್ದ ಎಂದು ಕರೆದಿದ್ದಾರೆ. ರಾಷ್ಟ್ರ ವಿರೋಧಿ ಹಾಗೂ ರಾಷ್ಟ್ರೀಯವಾದಿಗಳ ನಡುವಿನ ಸಮರವೆಂದು ಅವರು ಉಲ್ಲೇಖಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. 

ಈ ಸಂಬಂಧ ರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಪ್ರಸಾರ ಮಾಡಿದ್ದು ಎಫ್‌ಐಆರ್‌ ಪ್ರತಿಯನ್ನ ಬಿತ್ತರಿಸಿವೆ. ಅಲ್ಲದೆ This Lok Sabha election is about Dharma Yudha between pro-nationals and anti-nationals," Mr Raghavendra said, according to the complaint ಎಂದು ಸುದ್ದಿ ವರದಿ ಮಾಡುತ್ತಿವೆ.