shivamogga Mar 25, 2024 ಶಿವಮೊಗ್ಗ ರೌಡಿಸಂಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಇದು ಜೈಲ್ ಸುದ್ದಿಯಾಗಿದ್ದು ಮೈಸೂರು ಜೈಲಿನಲ್ಲಿ ಶಿವಮೊಗ್ಗದ ರೌಡಿಗಳು ಹೊಡೆದಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸದ್ಯ ಮೈಸೂರು ಕಾರಾಗೃಹದಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಹಂದಿ ಅಣ್ಣಿ ಕೊಲೆಯ ಪ್ರಮುಖ ಆರೋಪಿ ಕಾಡಾ ಕಾರ್ತಿ ಹಾಗೂ ಆತನ ಸಹಚರರಿದ್ದಾರೆ. ಇದೇ ವೇಳೆ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳ ಮೇಲೆ ಅಟ್ಯಾಕ್ ತಮಿಳ್ ರಮೇಶ್ ಮತ್ತು ಸುನೀಲ್ನನ್ನ ದಾವಣಗೆರೆ ಜೈಲಿನಿಂದ ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಈ ಎರಡು ಗ್ಯಾಂಗ್ಗಳ ನಡುವೆ ಹೊಡೆದಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೈಲಿನಲ್ಲಿ ಕಾಡಾ ಕಾರ್ತಿ ಮತ್ತವನ ಟೀಂ ರಮೇಶ್ನ ಮೇಲೆ ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯು ಈ ಬಗ್ಗೆ ಅಧಿಕೃತ ಮಾಹಿತಿ ಸ್ಪಷ್ಟವಾಗಿಲ್ಲ
ಮಲೆನಾಡು ಟುಡೆ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರು ಮಹಾದೇವ ನಾಯಕ್ ರವರು ಅಂತಹ ಯಾವುದೇ ಘಟನೆಯು ನಡೆದಿಲ್ಲ ಎಂದಿದ್ದಾರೆ. ಸುದ್ದಿ ಹರಿದಾಡುತ್ತಿರುವ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.