ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು ಥಳಿಸಿದ ಬಾಸ್ ಗ್ಯಾಂಗ್ !ಶಿವಮೊಗ್ಗದಲ್ಲಿ ನಡೆದ ಅಮಾನವೀಯ ಘಟನೆಯ ಚಿತ್ರಣ TODAY BIG EXCLUSIVE

The video of the incident which took place on the outskirts of Shimoga city has now surfacedಶಿವಮೊಗ್ಗ ನಗರದ ಹೊರವಲಯದಲ್ಲಿ ನಡೆದ ಘಟನೆಯ ವಿಡಿಯೋ ಇದೀಗ ಹೊರಬಿದ್ದಿದೆ

ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು ಥಳಿಸಿದ ಬಾಸ್ ಗ್ಯಾಂಗ್ !ಶಿವಮೊಗ್ಗದಲ್ಲಿ ನಡೆದ ಅಮಾನವೀಯ ಘಟನೆಯ ಚಿತ್ರಣ TODAY BIG EXCLUSIVE

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’



ನಟೋರಿಯಸ್ ರೌಡಿಗೆ ಬೆತ್ತಲೆಗೊಳಿಸಿ ಮೂರು ದಿನ ಲಾಕ್ ಮಾಡಿಕೊಂಡಿದ್ದ ಎದುರಾಳಿ ಗುಂಪು. ಕಂಪ್ಲೇಟ್ ಕೊಡಲು ಹೋಗದ ರೌಡಿ ಹಳೆ ಕೇಸಿನಲ್ಲಿ ಜೈಲು ಸೇರಿದ್ದಾದ್ರೂ ಏಕೆ… ಆ ವಿಚಾರವನ್ನೆ ಹೇಳುತ್ತೇವೆ, ಇವತ್ತಿನ ಮಲೆನಾಡು ಟುಡೆ ಎಕ್ಸ್​ ಕ್ಲೂಸಿವ್ ಸ್ಟೋರಿಯಲ್ಲಿ

ಪಾತಕ ಲೋಕದಲ್ಲಿ ನಡೆದ ಹೀನ ಕೃತ್ಯವಿದು. ಯಾವುದೇ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸುವುದು ಎಂದರೆ ಸಮಾಜ ಅದನ್ನು ಅಮಾನವೀಯ ಕೃತ್ಯ ಎಂದು ಭಾವಿಸುತ್ತೆ. ಆತ ಒಳ್ಳೆಯವನೇ ಇರಲಿ ಕೆಟ್ಟವನೇ ಇರಲಿ.. ಶಿಕ್ಷಿಸುವುದಕ್ಕೆ ಕಾನೂನಿದೆ. ಆದರೆ ಶಿವಮೊಗ್ಗದಲ್ಲಿ ರೌಡಿ ಜಗತ್ತಿನಲ್ಲಿ ನಡೆದ ಈ ಕೃತ್ಯ ದ್ವೇಷ ಪ್ರತಿಕಾರಕ್ಕೆ ನಾಂದಿ ಹಾಡುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. 



ಹೌದು ಕಳೆದ ಮೂರು ದಿನಗಳ ಹಿಂದೆ ಸ್ನೇಹಿತನೊಂದಿಗೆ ಕುಡಿಯುತ್ತಿದ್ದ ರೌಡಿಯೊಬ್ಬ ತನ್ನ ಎದುರಾಳಿ ಗ್ಯಾಂಗ್ ಗೆ ಕುಡಿದ ಮತ್ತಿನಲ್ಲಿ ಠಕ್ಕರ್ ಕೊಟ್ಟಿದ್ದಾನೆ. ಎದುರಾಳಿ ಗ್ಯಾಂಗ್ ಎಲ್ಲಿದ್ದಿಯೋ ಅಲ್ಲಿಗೆ ಬರುತ್ತೇವೆ ಎಂದು ಪಂಥಾಹ್ವಾನ ಸ್ವೀಕರಿಸಿದೆ. 

ಎದುರಾಳಿ ಬರುವುದು ತಡವಾಗುತ್ತಿದ್ದಂತೆ ಆ ರೌಡಿ ಆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆದ್ರೆ ರೌಡಿಯ ಸ್ನೇಹಿತ ಎದುರಿಗೆ ಸಿಕ್ಕಾಗ ಈ ತಂಡ ಹಿಗ್ಗಾಮುಗ್ಗ ಥಳಿಸಿದೆ. ಗಾಯಾಳು ಖಾಸಗಿ ಆಸ್ಪತ್ರೆಗೆ ದಾಖಲಾದ ನಂತ್ರ ಈ ಎದುರಾಳಿ ತಂಡ ಆ ರೌಡಿ ಇಲ್ಲಿಗೆ ಬಂದೇ ಬರುತ್ತಾನೆ ಎಂಬ ಲೆಕ್ಕಚಾರದಲ್ಲಿ ಪುನಃ ಆಸ್ಪತ್ರೆಯ ಬಳಿ ಕಾದಿದೆ. 

ಅಂದುಕೊಂಡಂತೆ ಆತ ಬರುತ್ತಿದ್ದಂತೆ ವಾಹನದಲ್ಲಿ ಎದುರಾಳಿ ತಂಡ ಕಿಡ್ನಾಪ್ ಮಾಡಿದೆ. ಶಿವಮೊಗ್ಗದ ಹೌರವಲಯದಲ್ಲಿ ಮೂರು ದಿನ ಅಂದರ್ ಮಾಡಿಕೊಂಡು ಹಿಗ್ಗಾಮುಗ್ಗಾ ಥಳಿಸಿದೆ. ಅಲ್ಲದೆ  ಖಾಸಗಿ ಲೇಔಟ್ ಬಳಿಯಲ್ಲಿ  ಆತನನ್ನು ಬೆತ್ತಲುಗೊಳಿಸಿ ಹಲ್ಲೆ ನಡೆಸಲಾಗಿದೆ. 

ಈ ದೃಶ್ಯವನ್ನು ಎದುರಾಳಿ ತಂಡ ವಿಡಿಯೋ ರೆಕಾರ್ಡ್ ಮಾಡಿಕೊಂಡು ತಮ್ಮ ವಲಯದಲ್ಲಿ ವೈರಲ್ ಮಾಡಿದೆ. ಆದ್ರೆ  ಬೆತ್ತಲುಗೊಂಡು ಹಲ್ಲೆಗೊಳಗಾದ ರೌಡಿ ಮಾತ್ರ ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋಗುವುದಿಲ್ಲ. ಬದಲಾಗಿ ಹಳೆ ವಾರೆಂಟ್ ಕೇಸ್ ಒಂದರಲ್ಲಿ ಶಿವಮೊಗ್ಗ ಸೆಂಟ್ರಲ್ ಜೈಲ್ ಗೆ ಅಂದರ್ ಆಗಿ ಹೋಗ್ತಾನೆ.

ಗಣಪತಿ ಹಬ್ಬದ ಸಂದರ್ಭದಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ನಡೆಯುತ್ತಿದೆಯಾ ಮಸಲತ್ತು ?

ಹಲ್ಲೆಗೊಳದಾಗ ರೌಡಿ ಆತನ ಸಹೋದರ ಇಬ್ಬರು ಜೈಲಿನಲ್ಲಿಯೇ ಇದ್ದಾರೆ.

ಈ ನಡುವೆ ದ್ವೇಷ ಪ್ರತಿಕಾರಕ್ಕೆ ಹೊಂಚುಹಾಕುತ್ತಿರುವ ಈ ರೌಡಿಗಳು ಹಾಗು ಎದುರಾಳಿ ತಂಡಗಳು ಗಣಪತಿ ಹಬ್ಬದ ಸಂತೋಷದ ಕ್ಷಣಗಳನ್ನು ಹಾಳು ಮಾಡುವ ಹುನ್ನಾರದಲ್ಲಿವೆ ಎನ್ನಲಾಗಿದ್ದು, ಮಾಹಿತಿ ಮಲೆನಾಡು ಟುಡೆಗೆ ಲಭ್ಯವಾಗಿದೆ. ರೌಡಿಯ ಮೇಲೆ ಹಲ್ಲೆ ಮಾಡಿದವರು ಹಾಗೂ ಹಲ್ಲೆಗೊಳದಾವನು ಸಹ ಶಿವಮೊಗ್ಗ ಮೂಲದವರೇ  ಎಂದು ಹೇಳಲಾಗಿದೆ. 


ಇನ್ನಷ್ಟು ಸುದ್ದಿಗಳು