KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’
ಬೈಕ್ ನಿಧಾನವಾಗಿ ಓಡಿಸಿ, ಮಕ್ಕಳು ಓಡಾಡುತ್ತಿರುತ್ತಾರೆ ಎಂದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ದಾಳಿ ಮಾಡಿದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ (Shimoga Rural Police Station) ವ್ಯಾಪ್ತಿಯಲ್ಲಿ ನಡೆದಿದೆ.
ಗಣೇಶ ಹಬ್ಬದ ದಿನ ನಡೆದ ಘಟನೆ ಬಗ್ಗೆ ಎಫ್ಐಆರ್ ದಾಖಲಾಗಿದೆ. ಹಬ್ಬದ ದಿನ ಮನೆಯಲ್ಲಿದ್ದ ದೂರುದಾರರು ಸಿದ್ದಲಿಪುರದ ರಸ್ತೆಯೊಂದರಲ್ಲಿ ನಿಂತಿದ್ದರು. ಈ ವೆಳೆ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು ಬೈಕ್ ಸ್ಪೀಡಾಗಿ ರೈಡ್ ಮಾಡಿಕೊಂಡು ಓಡಾಡಿದ್ದಾರೆ. ಅವರನ್ನ ದೂರುದಾರರು ತಮ್ಮ ಸ್ನೇಹಿತರೊಂದಿಗೆ ತಡೆದು ಬೈಕ್ ರಸ್ತೆಯಲ್ಲಿ, ಸಣ್ಣ ಮಕ್ಕಳು ಓಡಾಡುತ್ತಿರುತ್ತಾರೆ, ಬೈಕನ್ನು ನಿಧಾನವಾಗಿ ಓಡಿಸಿ ಎಂದು ಜೋರು ಮಾಡಿಕಳುಹಿಸಿದ್ದಾರೆ.
ಆಕ್ಷಣಕ್ಕೆ ಅಲ್ಲಿಂದ ಹೋದ ಇಬ್ಬರು ಬಳಿಕ ಮರುದಿನ ಅಂದರೆ, 19 ನೇ ತಾರೀಖು ಸಂಜೆ ಪುನಃ ಸಿದ್ಲಿಪುರಕ್ಕೆ ಬಂದು, ದೂರುದಾರರನ್ನು ಹುಡುಕಾಡಿದ್ದಾರೆ. ಅಂಗಡಿಯೊಂದರ ಬಳಿ ಇದ್ದ ದೂರುದಾರರನ್ನು ನೋಡುತ್ತಲೇ 03 ಜನರು ಬೈಕನ್ನು ಅಂಗಡಿ ಮುಂದೆ ನಿಲ್ಲಿಸಿ ಮಚ್ಚಿನಿಂದ ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಊರಿನವರು ಜಮಾಯಿಸಿದ್ದನ್ನ ನೋಡಿ ಸ್ಥಳದಿಂದ ಮೂವರು ಆರೋಪಿಗಳು ಕಾಲ್ಕಿತ್ತಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ದೂರುದಾರರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ನೀಡಿದ ಹೇಳಿಕೆ ಅನ್ವಯ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಮೂವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ IPC 1860 (U/s-506,34,504,307,323) ಅಡಿಯಲ್ಲಿ ಎಫ್ಐಆರ್ ದರ್ಜ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?