ಮ್ಯಾಟ್ರಿಮೋನಿ ಆ್ಯಪ್​ನಲ್ಲಿ ಸಿಕ್ಕ ಸಪ್ನ! ನಂಬಿದ್ದಕ್ಕೆ ₹99 ಲಕ್ಷದ ನಾಮ! ಯುವಕರೇ ಹುಷಾರ್ ! ಹೀಗೂ ಯಾಮಾರಿಸ್ತಾರೆ!

This Article Written by / Malenadu Today / ಸೆಪ್ಟೆಂಬರ್ 20, 2023

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ 

ಶಿವಮೊಗ್ಗದ ಯುವಕರೊಬ್ಬರಿಗೆ ಹುಡುಗಿ ಹೆಸರಿನಲ್ಲಿ 99 ಲಕ್ಷ ರೂಪಾಯಿ ವಂಚನೆ ಮಾಡಿದ ಸಂಬಂಧ ಶಿವಮೊಗ್ಗದ ಸಿಇಎನ್​ ಪೊಲೀಸ್ ಸ್ಟೇಷನ್​ನಲ್ಲಿ (CEN Police Station) ಎಫ್ಐಆರ್ ದಾಖಲಾಗಿದೆ. 

ನಡೆದಿದ್ದೇನು?

ಶಿವಮೊಗ್ಗ ನಿವಾಸಿ ಯುವಕ ಏಪ್ರಿಲ್ ತಿಂಗಳಿನಲ್ಲಿ ಮದುವೆ ಮ್ಯಾಟ್ರಿಮೋನಿ ಆ್ಯಪ್​ವೊಂದರಲ್ಲಿ ಒಬ್ಬಾಕೆಯ ಪ್ರೊಫೈಲ್​ ನೋಡಿ ಅವರೊಂದಿಗೆ ಚಾಟ್ ಆರಂಭಿಸಿದ್ದರು. ಪರಸ್ಪರ ಪರಿಚಯ ಮಾಡಿಕೊಂಡು ಮಾತುಕತೆ ಮುಂದುವರಿಸಿದ್ದಾರೆ. ಈ ನಡುವೆ ಯುವತಿಯು ತನ್ನ ಹೆಸರನ್ನ ಸ್ವಪ್ನ ಅಂತ ತಿಳಿಸಿ ,ತಾನು ಲಂಡನ್ನಲ್ಲಿ ನನ್ನ ಚಿಕ್ಕಪ್ಪನ ಜೊತೆ ವಾಸ ಆಗಿದ್ದು, ತಮ್ಮ ಚಿಕ್ಕಪ್ಪ  Wall Street ನಲ್ಲಿ Market Analyst ಆಗಿದ್ದಾರೆ, ಅಲ್ಲಿ ಟ್ರೇಡಿಂಗ್ ಮಾಡಿ ಲಾಭ ಗಳಿಸ್ತಿದ್ದೇನೆ ಎಂದು ವಿವರಿಸಿದ್ದಾಳೆ. ಮೇಲಾಗಿ ನೀವು ದುಡ್ಡು ಮಾಡಬೇಕು ಅಂದರೆ ಲಿಂಕ್​ ಕಳಿಸ್ತೇನೆ ಜಾಯಿನ್​​ ಆಗಿ ಎಂದಿದ್ದಾಳೆ. 

ಇದನ್ನ ನಂಬಿದ ಯುವಕ ಯುವತಿ ಹೇಳಿದ ಲಿಂಕ್ ಕ್ಲಿಕ್ ಮಾಡಿ ಆ್ಯಪ್ ಡೌನ್​ ಮಾಡಿ, ಪ್ರೊಸಿಜರ್ ಮುಗಿಸಿದ್ದಾನೆ. ಆನಂತರ ಆ್ಯಪ್​ನಲ್ಲಿ ಸೂಚಿಸಿದಂತೆ ವಿವಿಧ ಹಂತಗಳಲ್ಲಿ ಬರೋಬ್ಬರಿ 99,03,000/-ರೂಪಾಯಿಯನ್ನು ಇನ್​ವೆಸ್ಟ್ ಮಾಡಿದ್ದಾರೆ. ಆನಂತರ ಯುವತಿ ಹಾಗೂ ಹಾಕಿದ ಹಣ ಎರಡು ಕೂಡ ಮೋಸ ಎಂಬುದು ಗೊತ್ತಾಗಿದೆ. ತಕ್ಷಣವೇ ಯುವಕ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.  


ಇನ್ನಷ್ಟು ಸುದ್ದಿಗಳು 

 


 

#Shimoga,CEN Police Station

ಮುಂದಿನ ಸುದ್ದಿ ಒದಿ

Leave a Comment