ರೌಡಿಯನ್ನು ಬೆತ್ತಲುಗೊಳಿಸಿ ಹಲ್ಲೆ ಪ್ರಕರಣ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಮಲೆನಾಡು ಟುಡೆಗೆ ಹೇಳಿದ್ದೇನು?

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’

ರೌಡಿಶೀಟರ್​ ಒಬ್ಬನನ್ನ ಬೆತ್ತಲು ಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದಿಷ್ಟು ಅಪ್​ಡೇಟ್ಸ್​ ಲಭ್ಯವಾಗಿದೆ. 

ಈ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ನಿನ್ನೆಯೇ FIR ದಾಖಲಾಗಿದೆ. ಅಲ್ಲದೆ ಘಟನೆ ದೃಶ್ಯಾವಳಿ ಹೊರಬಿದ್ದ ಬೆನ್ನಲ್ಲೆ ಮಲೆನಾಡು ಟುಡೆಗೆ ಎಸ್​ ಪಿ ಮಿಥುನ್ ಕುಮಾರ್​ , ಪ್ರಕರಣದ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು ಥಳಿಸಿದ ಬಾಸ್ ಗ್ಯಾಂಗ್ !ಶಿವಮೊಗ್ಗದಲ್ಲಿ ನಡೆದ ಅಮಾನವೀಯ ಘಟನೆಯ ಚಿತ್ರಣ TODAY BIG EXCLUSIVE

ನಡೆದ ಘಟನೆ ವಿಚಾರವಾಗಿ ಮಲೆನಾಡು ಟುಡೆ ಎಸ್​ಪಿಯವರನ್ನು ಸಂಪರ್ಕಿಸಿತು. ಪೋನ್​ ಕಾಲ್​ನಲ್ಲಿ ಮಾತನಾಡಿದ ಎಸ್​ಪಿಯುವರು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ತನಿಖಾ ತಂಡ, ಆರೋಪಿಗಳ ಗುರುತು ಪತ್ತೆ ಮಾಡಿದ್ದು, ಅವರ ಹಿನ್ನೆಲೆಯ ಬಗ್ಗೆ ತನಿಖೆ ನಡೆಸ್ತಿದೆ. ತನಿಖೆ ಇನ್ನೂ ವಿಚಾರಣಾ ಹಂತದಲ್ಲಿ ಇರುವುದರಿಂದ, ವಿಚಾರಣೆ ಮುಗಿದ ನಂತರ ಪೂರ್ತಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ. 

ಇನ್ನೂ ವಿಡಿಯೋ ದೃಶ್ಯಾವಳಿಗಳು ಪೊಲೀಸರ ಕೈ ಸೇರಿದ್ದು, ದೃಶ್ಯಗಳನ್ನು ಆಧರಿಸಿ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. 


ಇನ್ನಷ್ಟು ಸುದ್ದಿಗಳು 

 


 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು