KARNATAKA NEWS/ ONLINE / Malenadu today/ Apr 26, 2023 GOOGLE NEWS
ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ/ ಶಿವಮೊಗ್ಗದಲ್ಲಿ ಇವತ್ತಿನಿಂದ ಮತ್ತಷ್ಟು ಕಳೆ ಪಡೆದುಕೊಳ್ಳಲಿದೆ. ಇದಕ್ಕೆ ಕಾರಣ ಇವತ್ತು ಕಾಂಗ್ರೆಸ್ನ ಟಾಪ್ ಮೋಸ್ಟ್ ಲೀಡರ್ಗಳು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಎಐಸಿಸಿ (AIcc) ಮುಖಂಡ ರಾಹುಲ್ ಗಾಂಧಿ (rahul gandhi)ಹಾಗೂ ಪ್ರಿಯಾಂಕ ಗಾಂಧಿ ವಾದ್ರಾ ( priyanka gandhi vadra) ಇವತ್ತು ಶಿವಮೊಗ್ಗಕ್ಕೆ ಬರಲಿದ್ದಾರೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಎಲ್ಲೆಲ್ಲಿ ಕಾರ್ಯಕ್ರಮ!
ಈ ಸಂಬಂಧ ನಿನ್ನೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ರಾಹುಲ್ ಗಾಂಧಿಯವರು ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.
ಓದಿ / ಡಿಪ್ಲೋಮೋ ಕೋರ್ಸ್ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ
ಪ್ರಿಯಾಂಕಾ ಗಾಂಧಿ
ಇನ್ನೂ ಪ್ರಿಯಾಂಕಾ ಗಾಂಧಿಯವರು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣ ಬಂದು ಸೇರಲಿದ್ದಾರೆ. ಅಲ್ಲಿಂದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಉಡುಪಿ ಜಿಲ್ಲೆ ಕಾಪುಗೆ ತೆರಳುವರು ಎಂದರು.
ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್ ಕೊಟ್ಟ ಪೊಲೀಸ್
ಚುನಾವಣಾ ಅಧಿಕಾರಿಗಳು ಸಂವಾದ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ನಂತರ ಸಂವಾದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವುದಾಗಿ ಜಿಲ್ಲಾಧ್ಯಕ್ಷ ಸುಂದರೇಶ್ ತಿಳಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಕಾರ್ಯಕರ್ತರಿಗೆ ರಾಹುಲ್ ಹಾಗೂ ಪ್ರಿಯಾಂಕಾರ ಭೇಟಿಗೆ ಅವಕಾಶ ಇಲ್ಲ. ಪಕ್ಷದ ಮುಖಂಡರು ಜೊತೆಗೆ ಇರುತ್ತಾರೆ ಎಂದು ತಿಳಿಸಿದ್ದಾರೆ.
