ಮತ ಚಲಾಯಿಸಿದವರಿಗೆ ಡಿಸ್ಕೌಂಟ್‌ , ಆಫರ್‌, ಉಚಿತ | ಏನಿದು ವಿಶೇಷ |

Discount, offer, free for those who voted What is special | Shimoga Lok Sabha Election, Sahyadri Narayana Hrudayalaya, Nanjappa Hospital, Shubham Hotel, Shiralakoppa, Sapling Distribution

ಮತ ಚಲಾಯಿಸಿದವರಿಗೆ  ಡಿಸ್ಕೌಂಟ್‌ , ಆಫರ್‌, ಉಚಿತ  | ಏನಿದು ವಿಶೇಷ |
Shimoga Lok Sabha Election, Sahyadri Narayana Hrudayalaya, Nanjappa Hospital, Shubham Hotel, Shiralakoppa, Sapling Distribution

SHIVAMOGGA | MALENADUTODAY NEWS | May 7, 2024  

 

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಬಿಸಿಲು ಏರುವ ಸೂಚನೆ ಹಿನ್ನೆಲೆಯಲ್ಲಿ ಜನರು ಬೆಳಗ್ಗೆಯೇ ಬಂದು ಮತಗಟ್ಟೆಗಳಲ್ಲಿ ವೋಟು ಹಾಕುತ್ತಿದ್ದಾರೆ. 

 

ಈ ನಡುವೆ ಮತದಾನವನ್ನು ಇನ್ನಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳು , ಆಡಳಿತ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ  ಮತದಾರರಿಗೆ ವಿಶೇಷ ಆಫರ್‌ ಗಳನ್ನ ನೀಡುತ್ತಿವೆ. 

 

ಇದಕ್ಕೆ ಸಾಕ್ಷಿ ಎಂಬಂತೆ  ಶಿರಾಳಕೊಪ್ಪದ ಮಾದರಿ ಮತಗಟ್ಟೆಯಲ್ಲಿ ಮತದಾನ ಮಾಡಿದವರು ಸಸಿಗಳನ್ನು ವಿತರಣೆ ಮಾಡುವ ಪ್ರಯತ್ನ ನಡೆದಿದೆ. ಮೊದಲು ಮತದಾನ ಮಾಡಲು ಬರುವ 400 ಮತದಾರರಿಗೆ ಉಚಿತವಾಗಿ ಆಲಂಕಾರಿಕ ಗಿಡ, ಮಾವಿನ ಗಿಡ, ಹೊಂಗೆ, ಬೇವು, ನಿಂಬೆ ಮತ್ತು ವಿವಿಧ ಜಾತಿಯ ಗಿಡಗಳನ್ನ ವಿತರಿಸಲಾಗುತ್ತಿದೆ. 

 

ಇನ್ನೂ ಶಿವಮೊಗ್ಗದ ಶುಭಂ ಹೋಟೆಲ್‌ನಲ್ಲಿ ಬೆಳಗ್ಗೆ 10 ಗಂಟೆಯೊಳಗೆ ಮತದಾನ ಮಾಡಿದವರಿಗೆ ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವೋಟು ಮಾಡಿದ ಶಾಹಿ ಗುರುತನ್ನ ತೋರಿಸಿ ತಿಂಡಿ ಪಡೆಯಬಹುದಾಗಿದೆ. 

 

ಇನ್ನೂ  ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತದಾನ ಮಾಡಿ ಬಂದವರಿಗೆ ವಿವಿಧ ಆರೋಗ್ಯ ಪರೀಕ್ಷೆಗಳಲ್ಲಿ ಡಿಸ್ಕೌಂಟ್‌ ನೀಡಲಾಗುತ್ತಿದೆ. 

 

ಮಧ್ಯಾಹ್ನ 2 ಗಂಟೆಯೊಳಗೆ ಮತದಾನ ಮಾಡಿದವರಿಗೆ ಶ್ರೀನಿಧಿ ಸಿಲ್ಕ್ ಆ್ಯಂಡ್ ಟೆಕ್ಸ್‌ ಟೈಲ್‌ನಲ್ಲಿ ಖರೀದಿ ಮೇಲೆ ಶೇ.15 ರಿಯಾಯಿತಿ ನೀಡಲಾಗುತ್ತಿದೆ.

 

ಇತ್ತ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗಳ ಸಮೂಹದಿಂದ ಮತದಾನ ಮಾಡಿದವರಿಗೆ ಮೇ 7ರಿಂದ 14ರ ವರೆಗೆ ವಿವಿಧ ಆರೋಗ್ಯ ಪರೀಕ್ಷೆಗಳ ಪ್ರಯೋಗಾಲಯ ರಿಯಾಯಿತಿ ನೀಡಲಾಗುತ್ತಿದೆ. ಲ್ಯಾಬ್ ಪರೀಕ್ಷೆಗಳ ಮೇಲೆ ಶೇ.25 ಹಾಗೂ ಇಸಿಜಿ, ಇಕೋ, ಟಿಎಂಟಿ, ಸಿಟಿ, ಎಂಆರ್‌ಐ, ಆಲ್ಟಾಸೌಂಡ್ ಹಾಗೂ ಮ್ಯಾಮೋಗ್ರಾಫಿ ಪರೀಕ್ಷೆ ಮೇಲೆ ಶೇ.15 ರಷ್ಟು ಡಿಸ್ಕೌಂಟ್‌ ನೀಡಲಾಗುತ್ತಿದೆ.