ಸಾಗರ ಕಾರ್ಯಕರ್ತ ಬೀದರ್‌ಗೆ ಗಡಿಪಾರು | ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ & ಆಕ್ರೋಶ |

Sagara activist exiled to Bidar | BJP Protes in Front of District Collector's Office |Sagar BJP activist, exiled to Bidar, Shimoga District, Shimoga District Administration, BY Raghavendra, Shimoga District BJP News

ಸಾಗರ ಕಾರ್ಯಕರ್ತ ಬೀದರ್‌ಗೆ ಗಡಿಪಾರು | ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ & ಆಕ್ರೋಶ |
Sagar BJP activist, exiled to Bidar, Shimoga District, Shimoga District Administration, BY Raghavendra, Shimoga District BJP News

SHIVAMOGGA | MALENADUTODAY NEWS | May 6, 2024  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ನಿನ್ನೆ ಇಬ್ಬರನ್ನ ಗಡಿಪಾರು ಮಾಡಲಾಗಿದೆ. ಜಿಲ್ಲಾಡಳಿತ & ಪೊಲೀಸ್‌ ಇಲಾಖೆ ಕೈಗೊಂಡ ಈ ಕ್ರಮದ ವಿರುದ್ಧ ಶಿವಮೊಗ್ಗ ಜಿಲ್ಲಾ ಬಿಜೆಪಿ ಆಕ್ರೋಶ ಹೊರಹಾಕಿದೆ. ಅಲ್ಲದೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. 

ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಜಿಲ್ಲಾ ಬಿಜೆಪಿ ಮುಖಂಡರು ತಮ್ಮ ಪಕ್ಷದ ಓಬಿಸಿ ಕಾರ್ಯಕರ್ತನ್ನ ರಾಜಕಾರಣದ ದುರುದ್ದೇಶದಿಂದ ಗಡಿಪಾರು ಮಾಡಲಾಗಿದೆ ಎಂದು ದೂರಿದ್ದಾರೆ. 

ವಿನೋದ್ ರಾಜ್ ಬಿನ್ ಲೇಟ್ ಭಾಸ್ಕರ್ ಶೆಟ್ಟಿ  ಎಂಬ 29 ವರ್ಷದ ಯುವಕನನ್ನ ಓಸಿ ವಿಚಾರದಲ್ಲಿ ಗಡಿಪಾರು ಮಾಡಲಾಗಿದೆ ಎನ್ನಲಾಗಿದೆ. ಆದರೆ ಈತ ಸಾಗರ ತಾಲ್ಲೂಕು ಒಬಿಸಿ ಮೋರ್ಚಾದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು, ಈತನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಗಡಿಪಾರು ಮಾಡಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ

ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಬಿವೈ ರಾಘವೇಂದ್ರ ರಾಜಕೀಯ ದುರುದ್ದೇಶದಿಂದ ಆತನನ್ನ ಗಡಿಪಾರು ಮಾಡಲಾಗಿದೆ. ಓಸಿ ವಿಚಾರದಲ್ಲಿ 15 ದಿನಗಳ ಹಿಂದೆ ಓರ್ವನನ್ನ ಬಂಧಿಸಲಾಗಿದೆ. ಆತನಿಗೆ ಹೊಡೆದು ಬಡಿದು ಬಜರಂಗ ದಳದ ಹಿನ್ನೆಲೆಯಲ್ಲಿದ್ದ ವಿನೋದ್‌ ರಾಜ್‌ ಹೆಸರು ಹೇಳಿಸಿದ್ದಾರೆ. ಆ ಬಳಿಕ ನಾಲ್ಕು ವರ್ಷಗಳಿಂದ ತಮ್ಮ ಪಾಡಿಗೆ ತಾನಿರುವ ಯುವಕನನ್ನ ಶಿವಮೊಗ್ಗದಲ್ಲಿ ಬಿಜೆಪಿಯ ಶಕ್ತಿಯನ್ನು ಕುಂದಿಸುವ ಸಲುವಾಗಿ ವಿನೋದ್‌ ರಾಜ್‌ರ ವಿರುದ್ಧ ಕೇಸ್‌ ಬುಕ್‌ ಮಾಡಿದ್ದಾರೆ. ಅಲ್ಲದೆ  ಆತನನ್ನ ನಿನ್ನೆ ರಾತೋರಾತ್ರಿ ಗಡಿಪಾರು ಆದೇಶ ನೀಡಿ ಆತನನ್ನು ಬೀದರ್‌ಗೆ ಕರೆದುಕೊಂಡು ಹೋಗಿ ಬಿಟ್ಟುಬರಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ಮುಂದೆ ನಮ್ಮ ಕಾರ್ಯಕರ್ತರ ವಿರುದ್ಧ ಈ ರೀತಿ ದುರುದ್ದೇಶಿತ ಪೂರ್ವಕವಾಗಿ ಕ್ರಮಕೈಗೊಂಡರೇ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.