ಹೊಸ ಅಧ್ಯಕ್ಷರು! ಹೊಸ ಪ್ರಧಾನ ಕಾರ್ಯದರ್ಶಿಗಳು! ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಧು ಅಣ್ಣನ ಕೈ ಬಲ! ಯಾರ್ಯಾರು ಏನು ಹೇಳಿದ್ರು

New President! New General Secretaries! Madhu Bangarappa's hand in Shivamogga district Congress Who said what?

ಹೊಸ ಅಧ್ಯಕ್ಷರು! ಹೊಸ ಪ್ರಧಾನ ಕಾರ್ಯದರ್ಶಿಗಳು! ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಧು ಅಣ್ಣನ ಕೈ ಬಲ! ಯಾರ್ಯಾರು ಏನು ಹೇಳಿದ್ರು
Shivamogga district Congress

Shivamogga  Apr 3, 2024  Shivamogga district Congress  ಅತ್ತ ಬಿಜೆಪಿಯಲ್ಲಿ ಕೆಎಸ್‌ ಈಶ್ವರಪ್ಪನವರ ಬಂಡಾಯ ಆ ಪಾರ್ಟಿಯಲ್ಲಿ ತನ್ನದೆ ಸಮಸ್ಯೆಗಳನ್ನು ತಂದಿಡುತ್ತಿದ್ದರೇ, ಇತ್ತ  ಕಾಂಗ್ರೆಸ್‌ನಲ್ಲಿ ಬದಲಾವಣೆ ರಾಜಕಾರಣ ಕತೂಹಲ ಮೂಡಿಸ್ತಿದೆ. ಇತ್ತೀಚೆಗೆ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಆಯನೂರು ಮಂಜುನಾಥ್‌ ರವರಿಗೆ ಅನೌನ್ಸ್‌ ಆಗಿತ್ತು. ಅದರ ಬೆನ್ನಲ್ಲೆ  ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ಬದಲಾವಣೆ ಆಗಲಿದೆ ಎಂಬುದು ಸ್ಪಷ್ಟವಾಗಿತ್ತು. ಈ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. 

ಈ ವರದಿಯ ನಂತರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಆರ್‌ ಪ್ರಸನ್ನಕುಮಾರ್‌ ಆಯ್ಕೆಯಾಗಿರುವ ಬಗ್ಗೆ ಘೋಷಣೆ ಹೊರಬಿದ್ದಿದೆ. ಜೊತೆಯಲ್ಲಿ ಕಾಂಗ್ರೆಸ್‌ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್‌ ಗೌಡ ಹಾಗೂ ಎನ್‌ ರಮೇಶ್‌ ಆಯ್ಕೆಯಾಗಿದ್ದಾರೆ. ಇವರು ಇವತ್ತು ಅಧಿಕಾರ ಸ್ವೀಕರಿಸಿ ಗೀತಾ ಶಿವರಾಜ್‌ ಕುಮಾರ್‌ ರವರ ಗೆಲುವಿಗೆ ಶ್ರಮಿಸೋಣ ಎಂದು ಕರೆಕೊಟ್ಟಿದ್ದಾರೆ.  

ಆರ್‌ ಪ್ರಸನ್ನಕುಮಾರ್‌ ಅಧ್ಯಕ್ಷಗಾದಿಯನ್ನು ವಹಿಸಿಕೊಂಡು ಮಾತನಾಡ್ತಾ ಬಿಜೆಪಿ ಕೇಂದ್ರ ಸರ್ಕಾರ, ಮೋದಿ ಬರೀ ಸುಳ್ಳನ್ನೇ ಮಾತನಾಡೋದು. ಜನರಿಗೆ ದಾರಿ ತಪ್ಪಿಸಲಾಗುತ್ತಿದೆ. ಜನ ಅರ್ಥ ಮಾಡಿಕೊಳ್ಳಬೇಕು. ಗೀತಾರವರನ್ನು ಗೆಲ್ಲಿಸುವಲ್ಲಿ ಹಗಲರುಳು ಕೆಲಸ ಮಾಡೋಣ. ಎಲ್ಲರ ಶ್ರಮದಿಂದ ಅಭ್ಯರ್ಥಿ ಗೆಲ್ಲಿಸೋಣ,  ಜನರ ಬಳಿ ಹೋಗೋಣ. ನನ್ನ ಬೂತು ನನ್ನ ಜವಾಬ್ದಾರಿ ಎಂ ರಾಹುಲ್ ಗಾಂಧಿಯವರ ಘೋಷವಾಕ್ಯದಂತೆ ಕೆಲಸ ಮಾಡೋಣ ಎಂದಿದ್ದಾರೆ. 

ಇನ್ನೂ ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎನ್‌.ರಮೇಶ್‌ ಪಕ್ಷದ ಗೆಲುವಿಗಾಗಿ ಗಟ್ಟಿ ತೀರ್ಮಾನ ತೆಗೆದುಕೊಂಡಿದೆ. ಜಿಲ್ಲಾಧ್ಯಕ್ಷರ ಬದಲಾವಣೆ ಕೂಡ ಆಗಿದೆ. ಪಕ್ಷದ ವರಿಷ್ಠರು ಕೊಟ್ಟ ಜವಾಬ್ದಾರಿ ನಿಭಾಯಿಸ್ತೇನೆ. ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲೂ ಕಾಂಗ್ರೆಸ್ ಬಲವಾಗಿ ಪ್ರಚಾರ ಮಾಡ್ತಿದೆ.  ಪಂಚ ಗ್ಯಾರಂಟಿಗಳ ಭರವಸೆ  ನೀಡಿದ ಕಾಂಗ್ರೆಸ್,  9 ತಿಂಗಳಲ್ಲಿ ಈಡೇರಿಸಿದೆ.  ಕೇಂದ್ರದಲ್ಲಿ ಅಧಿಕಾರಕ್ಕೆ ಇಂಡಿಯಾ ಬಂದ್ರೆ 10 ಗ್ಯಾರಂಟಿಗಳನ್ನು ನೀಡುವ ಭರವಸೆ ಕಾಂಗ್ರೆಸ್ ಘೋಷಿಸಿದೆ.

ಈ ಹತ್ತು ಗ್ಯಾರಂಟಿಗಳ ಮೂಲಕ ದೇಶದ ಉದ್ಧಾರ ಸಾಧ್ಯ. ಜನ ದೇಶ ಕಾಪಾಡಲು ಮೋದಿಯನ್ನು ತ್ಯಜಿಸಿ ಕಾಂಗ್ರೆಸ್ ಗೆ ಮತ ಹಾಕಬೇಕು. ಈ ನಿಟ್ಟಿನಲ್ಲಿ ಜನರ ಮನವೊಲಿಕೆ ಮಾಡೋಣ ಎಂದಿದ್ದಾರೆ. 

ಮತ್ತೊಂದು ಕಡೆ  ಮತ್ತೋರ್ವ ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡರು ನಾಲ್ಕನೇ ಬಾರಿಗೆ ಚುನಾವಣೆಗೆ ಬಂದಿರೋ ಬಿಜೆಪಿಯ ರಾಘವೇಂದ್ರರವರು ಅಭಿವೃದ್ಧಿ ಮಾಡಿದ್ದಾರೆಂಬ ಭ್ರಮೆಯಲ್ಲಿದ್ದಾರೆ.  ತನಿಖಾ ಸಂಸ್ಥೆಗಳ ಅಪಬಳಕೆ ಮಾಡಿಕೊಂಡೇ ಬಿಜೆಪಿ ರಾಜಕಾರಣ ಮಾಡುತ್ತಿದೆ.  ಜಿಲ್ಲೆಯ ಸಂಸದರು ಜಿಲ್ಲೆಯ ಜೀವಂತ ಸಮಸ್ಯೆಗಳನ್ನು ಹಾಗೇ ಉಳಿಸಿದ್ದಾರೆ. ಶರಾವತಿ ಸಂತ್ರಸ್ತರದು, ಬಗರ್ ಹುಕುಂ ರೈತರದಾಗಲೀ ಯಾವುದೂ ಸಮಸ್ಯೆ  ಬಗೆಹರಿದಿಲ್ಲ.

ಯಾರಿಗಾದರೂ ಹಕ್ಕುಪತ್ರ ಕೊಟ್ಟಿದ್ದೀರಾ? ಭೂಗಳ್ಳರು ಅಂತ ಕೇಸುಗಳನ್ನು ಹಾಕಿಸಿದ್ರಿ. ಬರೀ ವಿಮಾನ, ರೈಲು, ರಸ್ತೆ ಅಂತೀರಿ. ರೈತರಿಗೆ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ್ರು. 



TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ