ಶಿವಮೊಗ್ಗ | 11 ಗಂಟೆ ಹೊತ್ತಿಗೆ 473585 ಮತಗಳು ಚಲಾವಣೆ | ಯಾವ ತಾಲ್ಲೂಕುನಲ್ಲಿ ಎಷ್ಟಾಯ್ತು ಪರ್ಸಂಟೇಜ್‌

Shimoga | By 11 am 473585 votes have been cast What is the percentage in which taluk?Shimoga Election, Shimoga Lok Sabha Voting, Shimoga Voting.

ಶಿವಮೊಗ್ಗ | 11 ಗಂಟೆ ಹೊತ್ತಿಗೆ 473585 ಮತಗಳು ಚಲಾವಣೆ | ಯಾವ ತಾಲ್ಲೂಕುನಲ್ಲಿ ಎಷ್ಟಾಯ್ತು ಪರ್ಸಂಟೇಜ್‌
Shimoga Election, Shimoga Lok Sabha Voting, Shimoga Voting.

SHIVAMOGGA | MALENADUTODAY NEWS | May 7, 2024  

 

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಬಿರುಸಿನಿಂದ ಸಾಗುತ್ತಿದ್ದು, ಈಗಾಗಲೇ ಹಲವೆಡೆ ಅಭ್ಯರ್ಥಿಗಳು ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಮತ ಚಲಾಯಿಸಿದ್ದಾರೆ. ಇನ್ನೂ ಬೆಳಗ್ಗೆ ಒಂಬತ್ತು ಗಂಟೆಗೆ ಹೊರಬಿದ್ದಿದ್ದ ವರದಿ ಪ್ರಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 11 ಪರ್ಸೆಂಟ್‌ ಮತದಾನವಾಗಿತ್ತು. ಇದೀಗ 11 ಗಂಟೆಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಒಟ್ಟಾರೆ, 27.21 ರಷ್ಟು ಮತದಾನವಾಗಿದೆ.  ಈ ಪೈಕಿ ಬೈಂದೂರು 31.22 , ತೀರ್ಥಹಳ್ಳಿ 28.64 ರಷ್ಟು ಮತದಾನವಾಗಿದೆ. ಇನ್ನೂ ಸಾಗರದಲ್ಲಿ 29.56 ರಷ್ಟು ಮತದಾನವಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 27.02 ರಷ್ಟು ಮತದಾನವಾಗಿದೆ.  ಉಳಿದಂತೆ ಶಿವಮೊಗ್ಗ ಸಿಟಿಯಲ್ಲಿ  26.95 ರಷ್ಟು ಮತದಾನವಾಗಿದ್ದು  ಸೊರಬದಲ್ಲಿ 25.01 ಪರ್ಸೆಂಟ್‌, ಮತ್ತು ಶಿಕಾರಿಪುರದಲ್ಲಿ 24.64 , ಭದ್ರಾವತಿಯಲ್ಲಿ  24.33 ಪರ್ಸೆಂಟ್‌ ಮತದಾನವಾಗಿದೆ. 

 

ವಿಶೇಷ ಅಂದರೆ, ಕುಂಚೇನಹಳ್ಳಿ ಶಿವಮೊಗ್ಗ ಕ್ಷೇತ್ರದ ಕುಂಚೇನಹಳ್ಳಿ ಪಿ ಎಸ್ ಸಂಖ್ಯೆ 18ರಲ್ಲಿ ಬೆಳಗ್ಗೆ 11 ಗಂಟೆಗೆ ಹೊಂದಿಕೊಂಡಂತೆ ಶೇಕಡಾ 30 ರಷ್ಟು ಮತದಾನವಾಗಿದೆ. ಇದುವರೆಗೂ ಒಟ್ಟು ಮತಗಳು: 1752885 ಪೈಕಿ 473585 ಮತಗಳು ಚಲಾವಣೆಗೊಂಡಿವೆ.