ಡಮ್ಮಿ..ಡಬ್ಬಾ..ಸುಪಾರಿ.. ಗಂಡಸ್ತನ! ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗರಾಮಗರಂ ಮಾತು! ಏನಿದು

Dummy.. Dabba. Supari.. gandastana ! Shimoga Lok Sabha constituency What is this?

ಡಮ್ಮಿ..ಡಬ್ಬಾ..ಸುಪಾರಿ.. ಗಂಡಸ್ತನ! ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗರಾಮಗರಂ ಮಾತು! ಏನಿದು
Shimoga Lok Sabha constituency̧ Dummy, Dabba, Supari, gandastana

shivamogga Mar 25, 2024   ಕಳೆದ ಬಾರಿ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗು ಈ ಬಾರಿ ನಡೆದ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗಳು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹೊಂದಾಣಿಕೆಯ ಕ್ಷೇತ್ರಗಳಾಗಿದ್ದವಾ...? ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಈ ರೀತಿ ಹೇಳಿಕೆ ಕೊಡೊ ಹಿಂದಿರುವ ತಂತ್ರಗಾರಿಕೆಯ ಭಾಗವಾದ್ರೂ ಏನು ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಈಶ್ವರಪ್ಪನವರ ಆರೋಪವೇನು?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಹಾಕಿಸಿಕೊಂಡು, ಬಿಜೆಪಿ ಗೆಲುವು ಸಾಧಿಸಿದೆ ಎಂಬ ಗಂಭೀರ ಆರೋಪವನ್ನು ಈಶ್ವರಪ್ಪ ಮಾಡುತ್ತಿದ್ದಾರೆ. 

ಡಮ್ಮಿ ಕ್ಯಾಂಡಿಡೇಟ್‌ 

ಅಲ್ಲದೆ ಕೆಎಸ್‌ ಈಶ್ವರಪ್ಪರವರು ಪದೇಪದೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಮ್ಮಿ ಕ್ಯಾಂಡಿಡೇಟ್ ಎಂದು ಗೀತಾ ಶಿವರಾಜ್ ಕುಮಾರ್ ರನ್ನು ಜರಿದಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಬಿಜೆಪಿಯದ್ದೂ ಹೊಂದಾಣಿಕೆ ರಾಜಕಾರಣವಾಗಿದೆ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡರು. ಶಿಕಾರಿಪುರದಲ್ಲಿ ಕಾಂಗ್ರೆಸ್ ನಿಂದ ಗೆಲ್ಲುವ ಅಭ್ಯರ್ಥಿ ಹಾಕುವ ಅವಕಾಶ ಇದ್ದರೂ ಸೋಲುವ ಅಭ್ಯರ್ಥಿಯನ್ನು ಹಾಕಯಾಯ್ತು.  ಒಪ್ಪಂದ ಮಾಡಿಕೊಂಡ ಪರಿಣಾಮ ಶಿಕಾರಿಪುರದಲ್ಲಿ ವಿಜಯೇಂದ್ರ‌ ತಿಣುಕಾಡಿ ಗೆದ್ದರು ಎಂದು ಈಶ್ವರಪ್ಪ ಕಾಲೆಳೆದಿದ್ದಾರೆ. 

ಆಣೆ ಪ್ರಮಾಣ

ಇಷ್ಟೆ ಅಲ್ಲದೆ ಸದ್ಯ  ಬಿ.ವೈ. ರಾಘವೇಂದ್ರ ಚುನಾವಣೆಯಲ್ಲಿ ‌ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅಂತಾ ಜನ ಮಾತನಾಡ್ತಿದ್ದಾರೆ. ಒಳ ಒಪ್ಪಂದ ಮಾಡಿಕೊಂಡಿಲ್ಲ ಅಂತಾ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ. ಇನ್ನೊಂದು ಕಡೆ ಡಮ್ಮಿ ಕ್ಯಾಂಡಿಡೇಟ್‌ ಎಂದಿದ್ದಕ್ಕೆ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದಾರೆ. ಸಹೋದರಿಯನ್ನ ಡಮ್ಮಿ ಅಭ್ಯರ್ಥಿ ಎಂಬ ಈಶ್ವರಪ್ಪನವರ ಹೇಳಿಕೆಗೆ  ಖಾರವಾಗಿಯೇ ಪ್ರತಿಕ್ರೀಯಿಸಿದ್ದಾರೆ.

ಡಬ್ಬಾ ಸೌಂಡ್‌ ಮಾಡುತ್ತದೆ

ಈಶ್ವರಪ್ಪರವರ ಡಬ್ಬ ಇದ್ದಾಗೆ, ಡಬ್ಬ ಸೌಂಡ್ ಮಾಡ್ತದೆ. ಅವರು ಕ್ಯಾಂಡಿಡೇಟ್ ಆಗಲ್ಲ. ಯಡಿಯೂರಪ್ಪ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ. ಈಶ್ವರಪ್ಪ ತಟ್ಟೆಯಲ್ಲಿ ಹೆಗಣ ಕೊಳೆತು ನಾರ್ತಿದೆ. ಈಶ್ವರಪ್ಪ ಅವರಿಗೆ ಪೊಲಿಟಿಕಲ್ ಸುಫಾರಿ ಯಡಿಯೂರಪ್ಪ ಕೊಟ್ಟಿದ್ದಾರೆ.  ಈಶ್ವರಪ್ಪ ಅವರನ್ನು ಹಿಂದುಳಿದ ವರ್ಗದ ಮತ ಹೊಡಿಲಿ ಅಂತಾ ಕಳುಹಿಸಿದ್ದಾರೆ. ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ ಅಂತಾ ಆರೋಪಿಸಿದ್ದಾರೆ. 

ಮಗನಿಗೆ ಟಿಕೆಟ್‌ ಗಂಡಸ್ತನ

ಈಶ್ವರಪ್ಪ ಅವರಿಗೆ ಮಗನಿಗೆ ಟಿಕೇಟ್ ಕೊಡಿಸುವ ಗಂಡಸ್ತನ ಇದ್ದರೆ ಅದರ ಬಗ್ಗೆ ಮಾತನಾಡಲಿ. ನಮ್ಮ ಅಕ್ಕ ಒಳ್ಳೆಯ ರೀತಿ ಪ್ರಚಾರ ಮಾಡ್ತಿದ್ದಾರೆ. ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡ್ತಾರೆ. ಒಂದು ಸರಿ ದೆಹಲಿಯಿಂದ ಪೋನ್ ಬಂದ್ರೆ ನನ್ನ ಮನಸು ಕರಗುತ್ತದೆ ಅಂತಾರೆ. ಈಶ್ವರಪ್ಪ ಅವರೇ ಗೌರವದಿಂದ ಇರಿ, ಗೌರವ ಉಳಿಸಿಕೊಳ್ಳಿ. ಕಾಂಗ್ರೆಸ್ ಬೇರೆಯರ ಮನೆ ಒಡೆದಿದೆ ಎಂದು ಅಂತಾ ಮತ ಕೇಳಲ್ಲ. ನಮ್ಮ ಗ್ಯಾರಂಟಿ ಯೋಜನೆ ಕೈ ಹಿಡಿಯುತ್ತವೆ.ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದು ಸಹೋದರಿಯ ಸಾಮರ್ಥ್ಯ ಹಾಗು ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಇವೆಲ್ಲದರ ನಡುವೆ ಸಂಸದ ಬಿ.ವೈ ರಾಘವೇಂದ್ರರವರು ಎಲ್ಲದಕ್ಕೂ ಉತ್ತರ ಕೊಡುತ್ತಾ ಹೋದರೆ ಬರಿ ಹೈಡ್‌ಲೈನ್‌ಗಳು ಆಗುತ್ತವಷ್ಟೆ.. ಹಾಗಾಗಿ ಚುನಾವಣೆ ಮುಗಿಯುವರೆಗೂ ಕಾಯಿರಿ, ಪಲಿತಾಂಶ ಎಲ್ಲದಕ್ಕೂ ಉತ್ತರ ನೀಡುತ್ತದೆ ಎನ್ನುತ್ತಿದ್ದಾರೆ. ಇದರ ನಡುವೆಯು ಈಶ್ವರಪ್ಪನವರ ಪಕ್ಷ ಶುದ್ದೀಕರಣಕ್ಕೆ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರು ಅಪಸ್ವರ ಎತ್ತಲು ಆರಂಭಿಸಿದ್ದಾರೆ. ಕಾಂತೇಶ್‌ಗೆ ಟಿಕೆಟ್‌ ಸಿಕ್ಕಿದ್ದರೇ ಶುದ್ದೀಕರಣದ ಮಾತು ಕೇಳಿಬರುತ್ತಿತ್ತಾ ಅಂತಾ ಸವಾಲು ಹಾಕುತ್ತಿದ್ದಾರೆ. 

ಒಟ್ಟಾರೆ ಚುನಾವಣೆ ಆರಂಭದಲ್ಲಿಯೇ ಪದಬಳಕೆಯ ಮಿತಿ ಎಲ್ಲೆ ಮೀರುತ್ತಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರ ಸೆಖೆಯ ನಡುವೆ ಇನ್ನಷ್ಟು ಬಿಸಿಯಾಗಿಸ್ತಿದೆ.