ಮತದಾನಕ್ಕೂ ಮೊದಲು ಬಂತು ಪತಿಯ ಸಾವಿನ ಸುದ್ದಿ | ಗಂಡನ ಇಚ್ಛೆಯಂತೆ ವೋಟು ಹಾಕಿ ತೆರಳಿದ ಪತ್ನಿ

The wife voted as per the wishes of her deceased husband. Tirthahalli News, Shimoga News, Shimoga Election Report

ಮತದಾನಕ್ಕೂ ಮೊದಲು ಬಂತು ಪತಿಯ ಸಾವಿನ ಸುದ್ದಿ | ಗಂಡನ ಇಚ್ಛೆಯಂತೆ ವೋಟು ಹಾಕಿ ತೆರಳಿದ ಪತ್ನಿ
Tirthahalli News, Shimoga News, Shimoga Election Report

SHIVAMOGGA | MALENADUTODAY NEWS | May 7, 2024  

ಲೋಕಸಭಾ ಚುನಾವಣೆಯ ಮತದಾನ ಕುತೂಹಲಕಾರಿಯಾಗಿ ನಡೆಯುತ್ತಿದೆ. ಜನರು ಮತಗಟ್ಟೆಯತ್ತ ದೌಡಾಯಿಸುತ್ತಿದ್ದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ತಮ್ಮ ಪತಿ ತೀರಿಹೋದ ಸುದ್ದಿಯನ್ನ ತಿಳಿದೂ ಸಹ ಮಹಿಳೆಯೊಬ್ಬರು ಮತದಾನ ಮಾಡಿದ್ದಾರೆ. ತಮ್ಮ ಪತಿಯ ಆಸೆಯಂತೆ ಅವರು ಮತದಾನ ಮಾಡಿದ್ದರ ಬಗ್ಗೆ ತೀರ್ಥಹಳ್ಳಿಯಿಂದ ವರದಿಯಾಗಿದೆ. 

 

ತೀರ್ಥಹಳ್ಳಿ ತಾಲ್ಲೂಕು ತೀರ್ಥಹಳ್ಳಿ:ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ವಾಪ್ತಿಯ ಆಡುಗೋಡಿನ ನಿವಾಸಿ ಕಲಾವತಿ ವೆಂಕಟೇಶ್ ರವರ ಪತಿ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಅವರು ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿಯುತ್ತಲೇ ಪತ್ನಿ ಕಲಾವತಿ ಮಂಗಳೂರಿಗೆ ಹೊರಟಿದ್ದರು. ಅದಕ್ಕೂ ಮೊದಲು ಅವರು ತಮ್ಮ ಮತಗಟ್ಟೆಗೆ ಬಂದು ವೋಟು ಹಾಕಿದ್ದಾರೆ. 

 

ತಮ್ಮ ಪತಿಯು ಮತದಾನ ಮಾಡಬೇಕು ಎಂದು ಯಾವಾಗಲೂ ಹೇಳುತ್ತಿದ್ದರು. ಅವರ ಇಷ್ಟದ ವ್ಯಕ್ತಿಗೆ ವೋಟು ಹಾಕಬೇಕು ಎಂದು ಸಹ ಹೇಳುತ್ತಿದ್ದರು. ಹೀಗಾಗಿ ಅವರ ಇಚ್ಚೆಯಂತೆ ಕಲಾವತಿಯವರು ವೋಟು ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.