ಶಿವಮೊಗ್ಗ | ನೀಚತನದಿಂದ ವಿಡಿಯೋ ಹರಿಬಿಟ್ಟಿದ್ದಾರೆ | ಕೆಎಸ್‌ ಈಶ್ವರಪ್ಪ ಆಕ್ರೋಶ | ಕಾರಣ?

KS Eshwarappa expressed his anger over the viral video | Viral Video, KS Eshwarappa, Eshwarappa Viral Video, Shimoga Election, Shimoga Lok Sabha Election,

ಶಿವಮೊಗ್ಗ | ನೀಚತನದಿಂದ ವಿಡಿಯೋ ಹರಿಬಿಟ್ಟಿದ್ದಾರೆ | ಕೆಎಸ್‌ ಈಶ್ವರಪ್ಪ ಆಕ್ರೋಶ | ಕಾರಣ?
Viral Video, KS Eshwarappa, Eshwarappa Viral Video, Shimoga Election, Shimoga Lok Sabha Election,

SHIVAMOGGA | MALENADUTODAY NEWS | May 7, 2024  

 

ಮತದಾನದ ದಿನವೂ ರಾಜಕಾರಣದ ತಂತ್ರಗಾರಿಕೆಗಳು ಶಿವಮೊಗ್ಗದಲ್ಲಿ ಮುಂದುವರಿದಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪರವರ ವಿಡಿಯೋವೊಂದು ನಿನ್ನೆಯಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತ್ರಿಕೆಯ ವರದಿ ರೂಪದ ಒಂದು ಸ್ಕ್ರೀನ್‌ ಶಾಟ್‌ ಹಾಗೂ ಹೆಸರು ನಮೂದಿಲ್ಲದ ಬ್ರೇಕಿಂಗ್‌ ನ್ಯೂಸ್‌ ತೋರಿಸಿ, ಈಶ್ವರಪ್ಪನವರ ಹೇಳಿಕೆ ಪ್ರಸಾರಮಾಡುವಂತಹ ವಿಡಿಯೋವೊಂದು ಎಲ್ಲೆಡೆಯು ಷೇರ್‌ ಆಗುತ್ತಿದೆ. ಈಶ್ವರಪ್ಪನವರು ತಟಸ್ಥರಾಗಿದ್ದಾರೆ ಎಂದು ಬಿಂಬಿಸುವಂತಹ ವಿಡಿಯೋ ಇದಾಗಿದ್ದು, ಈ ವಿಡಿಯೋ ಬಗ್ಗೆ ಸ್ವತಃ ಕೆಎಸ್‌ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ. 

 

ಈ ಸಂಬಂಧ ತಮ್ಮ ಮನೆಯಿಂದಲೇ ವಿಡಿಯೋ ಹೇಳಿಕೆ ನೀಡಿರುವ ಕೆಎಸ್‌ ಈಶ್ವರಪ್ಪ ಇವತ್ತು ಮತದಾನ ನಡೆಯುತ್ತಿದ್ದು ತಮಗೆ  ಹೆಚ್ಚು  ಬೆಂಬಲ ಸಿಗುತ್ತಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಂದಲೂ ಸ್ಪಷ್ಟ ಮತಗಳು ನನಗೆ ಲಭ್ಯವಾಗುತ್ತಿದೆ. ಅತಿಹೆಚ್ಚು ಬಿಜೆಪಿ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಇದರ ನಡುವೆ  ನೀಚ ಕೆಲಸವೊಂದು ನಡೆಯುತ್ತಿದೆ.  ಹಳೆಯ ವಿಡಿಯೋವೊಂದನ್ನು ವೈರಲ್‌ ಮಾಡುವ ಕೃತ್ಯ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿಗೆ ಸೋಲುವ ಭಯ ಶುರುವಾಗಿದೆ. ಆ ಕಾರಣಕ್ಕೆ  ನೀಚತನದ ಷಡ್ಯಂತ್ರವನ್ನು  ನನ್ನ ವಿರುದ್ಧ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 

 

ನಾನೂ ಚುನಾವಣೆ ಕಣದಲ್ಲಿ ಇದ್ದೇನೆ, ನನ್ನ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಕ್ಷೇತ್ರದಲ್ಲಿ ನನಗೆ ಉತ್ತಮ ಬೆಂಬಲ ಸಿಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.