ಕೆಎಸ್‌ ಈಶ್ವರಪ್ಪರ ವಿರುದ್ಧ ಸಿಡಿದೆದ್ದ ಬಿಜೆಪಿ! ಬಿಗಿಕ್ರಮಕ್ಕೆ ದೂರು! ಏನಿದೆ ದೂರಿನಲ್ಲಿ ?

BJP slams KS Eshwarappa Complaint to Election Commission for strict action! What's in the complaint?

ಕೆಎಸ್‌ ಈಶ್ವರಪ್ಪರ ವಿರುದ್ಧ ಸಿಡಿದೆದ್ದ ಬಿಜೆಪಿ! ಬಿಗಿಕ್ರಮಕ್ಕೆ ದೂರು! ಏನಿದೆ ದೂರಿನಲ್ಲಿ ?
KS Eshwarappa

Shivamogga  Apr 11, 2024 ಶಿವಮೊಗ್ಗ ಲೋಕಸಭಾ ಕ್ಷೇತ್ರ ದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕೆಎಸ್‌ ಈಶ್ವರಪ್ಪರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.  ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು, ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿಯೂ ಆಗಿರುವ ನರೇಂದ್ರ ಮೋದಿ ಅವರ ಹೆಸರು ಮತ್ತು ಭಾವಚಿತ್ರ ಬಳಸುತ್ತಿರುವುದಕ್ಕೆ  ಆಕ್ಷೇಪಣೆ ಸಲ್ಲಿಸಿದೆ. 

 

ತಮ್ಮ ದೂರಿನಲ್ಲಿ ಬಿಜೆಪಿ ಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಬಿಜೆಪಿಯೇತರ ಯಾವುದೇ ನಾಯಕರು ಮೋದಿ ಹೆಸರು, ಭಾವಚಿತ್ರ ಬಳಸದಂತೆ ಎಚ್ಚರಿಕೆ ನೀಡಬೇಕು ಮತ್ತು ಸಾರ್ವಜನಿಕರ ದಾರಿ ತಪ್ಪಿಸಬಾರದು ಎಂದು ಒತ್ತಾಯಿಸಿದೆ. 

 

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿವೈ ರಾಘವೇಂದ್ರ ಅವರನ್ನು ಕಣಕ್ಕಿಳಿಸಿದ್ದೇವೆ. ಅದೇ ಕ್ಷೇತ್ರದಿಂದ ಸ್ವತಂತ್ರವಾಗಿ. ಸ್ಪರ್ಧಿಸುತ್ತಿರುವ ಕೆಎಸ್ ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು, ಭಾವಚಿತ್ರ ಪ್ರಚಾರ ಮಾಡುತ್ತಿರುವುದು ನಮಗೆ ಆಘಾತ ಮತ್ತು ಅಚ್ಚರಿ ಮೂಡಿಸಿದೆ. ಈ ಮೂಲಕ ಅವರು ಅವರು ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ಪರವಾಗಿ ತಾವು ಸ್ಪರ್ಧಿಸುತ್ತಿರುವಂತೆ ಸಾಮಾನ್ಯ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ತಮ್ಮನ್ನು ತಾವು ಬಿಜೆಪಿಯ ಭಾಗ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮತದಾರರನ್ನು ಗೊಂದಲಕ್ಕೆ ದೂಡಿ ಬಿಜೆಪಿ ಮತಗಳನ್ನು ವ್ಯರ್ಥವಾಗುವಂತೆ ಮಾಡುತ್ತಿದ್ದಾರೆ. ಇದು ನಿಜ ಸಂಹಿತೆ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

malenadutoday