ಅಪ್ರಾಪ್ತೆಗೆ ಕಾಮುಕರ ಕಾಟ | ಕುಡುಕಿ ಚಿಕ್ಕಮ್ಮನಿಂದಲೇ ಕುಮ್ಮಕ್ಕು | ಎರಡು ಪ್ರತ್ಯೇಕ FIR | ನೆರೆಜಿಲ್ಲೆಯ ಆರೋಪಿ ಅರೆಸ್ಟ್‌

Two POCSO cases have been registered in Shivamogga district and one accused has been arrested from neighbouring district

ಅಪ್ರಾಪ್ತೆಗೆ ಕಾಮುಕರ ಕಾಟ | ಕುಡುಕಿ ಚಿಕ್ಕಮ್ಮನಿಂದಲೇ ಕುಮ್ಮಕ್ಕು | ಎರಡು ಪ್ರತ್ಯೇಕ FIR | ನೆರೆಜಿಲ್ಲೆಯ ಆರೋಪಿ  ಅರೆಸ್ಟ್‌
Shivamogga district

Shivamogga  Apr 11, 2024  ಕಾನೂನನ್ನ ಕಠಿಣವಾಗಿ ಜಾರಿ ಮಾಡಿದರೂ ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ. ಇದಕ್ಕೆ ಪೂರಕ ಎಂಬಂತೆ ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಎರಡು ಪ್ರತ್ಯೇಕ ಎಫ್‌ಐಆರ್‌ ಶಿವಮೊಗ್ಗ ಜಿಲ್ಲಾ ಪೊಲೀಸರು ದಾಖಲಿಸಿದ್ಧಾರೆ. ಅಪ್ರಾಪ್ತೆಯ ವೈಯಕ್ತಿಕ ವಿಚಾರಗಳನ್ನ ಗೌಪ್ಯವಾಗಿಡಲಾಗಿದ್ದು, ಸಂಬಧಿಸಿದ ಸೂಕ್ಷ್ಮ ವಿಚಾರಗಳನ್ನ ಸಹ ಇಲ್ಲಿ ಬಿಂಬಿಸುತ್ತಿಲ್ಲ. 

ಏನಿದು ಪ್ರಕರಣ : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಈ ಘಟನೆ ನಡೆದಿದೆ. 376(2) (ಎನ್ ) 376(3)ಐಪಿಸಿ ಹಾಗೂ ಕಲಂ: 6,17 ಪೋಕೋ ಕಾಯ್ದೆ 2012 ಅಡಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ  376(2)(ಹೆಚ್‌') 376(3) 6,17 ಆಕ್ಟ್ 2012 ಅಡಿಯಲ್‌ ಎಫ್‌ಐಆರ್‌ ದಾಖಲಿಸಲಾಗಿದೆ. 

ಅಪ್ರಾಪ್ತೆಯೊಬ್ಬಳು ತನ್ನ ತಾಯಿ ಮನೆಗೆ ಬಂದಾಗ ಹೆತ್ತವಳು ಮಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದಾಳೆ. ಹೊಟ್ಟೆ ದಪ್ಪವಾಗಿದ್ದನ್ನ ಕಂಡು ಪ್ರಶ್ನಿಸಿದಾಗ ನಡೆದ ವಿಚಾರ ಗೊತ್ತಾಗಿ ತಾಯಿ ಮಗಳನ್ನ ಕರೆದುಕೊಂಡು ಶಿವಮೊಗ್ಗ ಜಿಲ್ಲಾ ಪೊಲೀಸ್‌ ಸ್ಟೇಷನ್‌ ಒಂದರ ಮೆಟ್ಟಿಲೇರಿದ್ದಾಳೆ. ಕೇಸನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಪ್ರಾಪ್ತೆಯ ಹೇಳಿಕೆ ಪಡೆದುಕೊಂಡು ಎಫ್‌ಐಆರ್‌ ದಾಖಲಿಸಿ ಆರೋಪಿಗಳನ್ನ ಅರೆಸ್ಟ್‌ ಮಾಡಿದ್ದಾರೆ. 

ಮೊದಲನೇ ಪ್ರಕರಣದಲ್ಲಿ ಶಿವಮೊಗ್ಗದ ತಾಲ್ಲೂಕು ಒಂದರ ನಿವಾಸಿ ವಿರುದ್ಧ ಕೇಸ್‌ ದಾಖಲಾಗಿದ್ದು ಅಪ್ರಾಪ್ತೆಯ ಚಿಕ್ಕಮ್ಮನೂ ಆರೋಪಿಯಾಗಿದ್ದಾಳೆ. ಅಪ್ರಾಪ್ತೆ ಚಿಕ್ಕಮ್ಮನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅಲ್ಲಿಗೆ ಬರುತ್ತಿದ್ದನಂತೆ. ಆತ ಅಪ್ರಾಪ್ತೆಯ ಚಿಕ್ಕಮ್ಮನಿಗೆ ಮದ್ಯ ತಂದುಕೊಟ್ಟು ಅಪ್ರಾಪ್ತೆಯನ್ನ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಇದೇ ರೀತಿ ಹಲವು ಸಲ ದುಷ್ಕೃತ್ಯವೆಸಗಿದ್ದಾನೆ. ಅಪ್ರಾಪ್ತೆ ಗರ್ಭಿಣಿಯಾದ ಬಳಿಕ ತಲೆಮರೆಸಿಕೊಂಡಿದ್ದ ಎಂದು ದೂರಲಾಗಿದೆ. 

ಇನ್ನೂ ಇದೇ ಸಂದರ್ಭದಲ್ಲಿ ಇನ್ನೊಬ್ಬ ಆರೋಪಿಯು ಅಪ್ರಾಪ್ತೆಯ ಚಿಕ್ಕಮ್ಮನಿಗೆ ಮದ್ಯ ,ಚಿಕನ್‌ ತಂದುಕೊಟ್ಟು ಅದೇ ದಿನ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದು ಎರಡನೇ ಪ್ರಕರಣವಾಗಿದ್ದು, ಆರೋಪಿಗಳು ಅರಿಯದ ವಯಸ್ಸಿನ ಬಾಲಕಿ ಮೇಲೆ ನೀಚ ಕೃತ್ಯವೆಸಗಿದ್ದು ನಿಜಕ್ಕೂ ಆಘಾತಕಾರಿ. 

ಎರಡು ಪ್ರಕರಣಗಳು ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಸ್ವಂತದವರೇ ಆಗಲಿ, ಹೊರಗಿನವರೇ ಆಗಲಿ ಹೆಣ್ಣುಮಕ್ಕಳ ವಿಚಾರದಲ್ಲಿ ಜಾಗೃತರಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿಶೇಷವಾಗಿ ಜಾಗೃತಿ ಮೂಡಿಸುತ್ತಿರುತ್ತಾರೆ. ಆದಾಗ್ಯು ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ವಹಿಸುತ್ತಿರುವುದು ಒಳಿತು ಎನ್ನುತ್ತಾರೆ ಕಾನೂನು ತಜ್ಞರು..