ಶಿವಮೊಗ್ಗ ನಗರದ ಹೊರಭಾಗದಲ್ಲಿ ಬರುವ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಫೈನಲ್ ಟಚಪ್ ಪಡೆದುಕೊಳ್ಳುತ್ತಿದೆ.
ಶಿವಮೊಗ್ಗದ ಈ ಭಾಗದಲ್ಲಿಂದು ಮೆಸ್ಕಾಂ ಕಾಮಗಾರಿ/ ಪವರ್ ಕಟ್/ ಎಲ್ಲೆಲ್ಲಿ? ವಿವರ ಇಲ್ಲಿದೆ
ಅಂದುಕೊಂಡಂತೆ ಆಗಿದ್ದರೇ, ಕಳೆದ ಡಿಸೆಂಬರ್ನಲ್ಲಿಯೇ ವಿಮಾನ ನಿಲ್ದಾಣ ಉದ್ಘಾಟನೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಹಾಗಾಗಲಿಲ್ಲ. ಇದೀಗ ಈ ಫೆಬ್ರವರಿ ವಿಮಾನ ನಿಲ್ದಾಣ ಉದ್ಘಾಟನೆ ಎಂಬ ಮಾತುಗಳು ಕೇಳಿಬರುತ್ತಿದೆ. ಅಷ್ಟೆಅಲ್ಲದೆ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಬಿಜೆಪಿ ಅಣಿಯಾಗುತ್ತಿದೆ.
BREAKING NEWS / ಎನ್ಐಎ ನಿಂದ ಶಿವಮೊಗ್ಗದಲ್ಲಿ ಮತ್ತೊಬ್ಬ ಶಂಕಿತನ ವಿಚಾರಣೆ ಪ್ರಕರಣ ಯಾವುದು? ಇಲ್ಲಿದೆ ಸ್ಟೋರಿ
ಬರುವ ಫೆಬ್ರವರಿ 13 ರಂದು ನಡೆಯಲಿರುವ ಏರೋ ಇಂಡಿಯೋ ಶೋವನ್ನು ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅದೇ ಸಮಯದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸಹ ಉದ್ಘಾಟನೆಗೊಳ್ಳುವ ಸಾಧ್ಯತೆ ಇದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗುತ್ತಿದೆ.
SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ
ಈ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಸಹ ನಿಲ್ಧಾಣ ಕಾಮಗಾರಿಯ ವೀಕ್ಷಣೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ಧಾರೆ. ಇನ್ನೂ ದೇಶಿಯಾ ವಿದ್ಯಾ ಶಾಲೆ ಸಂಸ್ಥೆಯ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಯ ಬಗ್ಗೆಯು ಸಂಸದ ರಾಘವೇಂದ್ರರವರು ಮಾತನಾಡಿದ್ದಾರೆ
ಒಟ್ಟಾರೆ ಸೋಗಾನೆಯಲ್ಲಿ ತಲೆಯೆತ್ತಲಿರುವ ವಿಮಾನ ನಿಲ್ಧಾಣ ಇದೇ ಫೆಬ್ರವರಿವಲ್ಲಿ ಉದ್ಗಾಟನೆ ಕಾಣಲಿದೆ ಎಂಬ ಚರ್ಚೆಗಳು ಜೋರಾಗಿ ಕೇಳಿಬರುತ್ತಿದೆ.
