ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಿನ್ನೆ ರಾತ್ರಿ ದುರ್ಘಟನೆಯೊಂದು ಸಂಭವಿಸಿದೆ. ಇಲ್ಲಿನ ಆನಂದಪುರ ಸಮೀಪ ಸಿಗುವ ಕಣ್ಣೂರಿನ ಬಳಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ವೊಂದು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದಿರುವ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಗೌತಮಪುರದ ನಿವಾಸಿ 25 ವರ್ಷದ ಪ್ರದೀಪ್ ಮತ್ತು ಹಾಗೂ 30 ವರ್ಷದ ದಯಾನಂದ್ ಸಾವನ್ನಪ್ಪಿರುವ ದುರ್ದೈವಿಗಳು
ಇದನ್ನು ಸಹ ಓದಿ : ಆಪ್ತ ಪ್ರಸನ್ನ ಭಟ್ರ ಮನೆಗೆ ಸಂಸದ ರಾಘವೇಂದ್ರರ ಭೇಟಿ/ ಕುಟುಂಬಕ್ಕೆ ಸಾಂತ್ವನ
ಗೂಡ್ಸ್ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವ ಲಾರಿಯು ಕಣ್ಣೂರು ಬಳಿ ರಸ್ತೆಯಲ್ಲಿ ನಿಂತಿತ್ತು. ಆದರೆ ಲಾರಿ ಪಾರ್ಕಿಂಗ್ ಸಿಗ್ನಲ್ ಹಾಕಿರಲಿಲ್ಲ. ಮೇಲಾಗಿ ಚಾಲಕ ಯಾವುದೇ ಗುರತನ್ನು ಸಹ ಇಟ್ಟಿರಲಿಲ್ಲ ಎನ್ನಲಾಗಿದೆ.
ಇದನ್ನು ಸಹ ಓದಿ : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಚುನಾವಣೆಗೆ ದಿನಾಂಕ ನಿಗದಿ/ ವಿವರ ಇಲ್ಲಿದೆ
ಇದೇ ವೇಳೆ ಆನಂದಪುರ ಸಂತೆ ಮುಗಿಸಿಕೊಂಡು ತರಕಾರಿ ತೆಗೆದುಕೊಂಡು ಮನೆಗೆ ಬರ್ತಿದ್ದ ಪ್ರದೀಪ್ ಮತ್ತು ದಯಾನಂದ್ ನಿಂತಿದ್ದ ಲಾರಿಯನ್ನು ಗಮನಿಸದೇ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸದ ತೀವ್ರತೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸ್ತಿದ್ದಾರೆ.
ಇದನ್ನು ಸಹ ಓದಿ : BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
