ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನವರಾದ, ಪ್ರಸನ್ನ ಭಟ್ ರಾಮನಗರದಲ್ಲಿನ ಕೆರೆಯೊಂದರಲ್ಲಿ ಈಜಲು ಹೋಗಿದ್ದಾಗ, ಮುಳುಗಿ ಸಾವನ್ನಪ್ಪಿದ್ದವರು. ಅವರ ಅಂತ್ಯಕ್ರಿಯೆ ಹೊಸನಗರದಲ್ಲಿ ನಡೆದಿತ್ತು.
ಇದನ್ನು ಸಹ ಓದಿ : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಚುನಾವಣೆಗೆ ದಿನಾಂಕ ನಿಗದಿ/ ವಿವರ ಇಲ್ಲಿದೆ
ಆದರೆ ಈ ವೇಳೇ ಸಂಸದ ರಾಘವೇಂದ್ರರವರು ಆಗಮಿಸಲು ಆಗಿರಲಿಲ್ಲ. ಇವತ್ತು ಪ್ರಸನ್ನ ಭಟ್ರ ಮನೆಗೆ ಭೇಟಿಕೊಟ್ಟ ಸಂಸದ ತಮ್ಮ ಆಪ್ತ ಫೋಟೋಗ್ರಾಫರ್ ಆಗಿದ್ದ ಪ್ರಸನ್ನರ ಬಗ್ಗೆ ತಮ್ಮೊಂದಿಗೆ ಪ್ರಸನ್ನರ ಒಡನಾಟದ ಬಗ್ಗೆ ಮಾತನಾಡಿದ್ಧಾರೆ.
ಮನೆಗೆ ಭೇಟಿಕೊಟ್ಟು, ಪ್ರಸನ್ನರ ತಾಯಿಯವರಿಗೆ ಸಾಂತ್ವನ ಹೇಳುತ್ತ ಭಾವುಕರಾದರು, ಪ್ರಸನ್ನ ತಮ್ಮೊಂದಿಗೆ ಒಡನಾಡಿಯಾಗಿ ತಮ್ಮ ವೈಯಕ್ತಿಕ ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಗೆ ನೀಡುತ್ತಿದ್ದ, ಅಲ್ಲದೆ ಸಂಘಟನೆಯ ಕೆಲಸವನ್ನು ಸಹ ಮಾಡುತ್ತಿದ್ದ. ಈ ಸಣ್ಣ ವಯಸ್ಸಿನಲ್ಲಿ ಆತನನ್ನು ಕಳೇದುಕೊಂಡಿರುವುದು ದುಃಖ ತಂದಿದೆ ಎಂದರು.
ಇದನ್ನು ಸಹ ಓದಿ : BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ
