ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ..ರಾಷ್ಟ್ರಕವಿ ಕುವೆಂಪು ನೆನಪು ಮಾಡಿಕೊಂಡ ಮೋದಿ,.ವಿಮಾನ ನಿಲ್ದಾಣಕ್ಕಿಡುವ ಹೆಸರು ಘೋಷಣೆ ಮಾಡಲಿಲ್ಲವೇಕೆ?

Prime Minister Narendra Modi inaugurates Shimoga airport Remembering kuvempu, Modi said, "Why didn't you announce the name of the airport?

ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ..ರಾಷ್ಟ್ರಕವಿ ಕುವೆಂಪು ನೆನಪು ಮಾಡಿಕೊಂಡ ಮೋದಿ,.ವಿಮಾನ ನಿಲ್ದಾಣಕ್ಕಿಡುವ ಹೆಸರು ಘೋಷಣೆ ಮಾಡಲಿಲ್ಲವೇಕೆ?

ಶಿವಮೊಗ್ಗ ಏರ್ ಪೋರ್ಟ್ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ ಪ್ರಧಾನಿ ಯಡಿಯೂರಪ್ಪರ ಹೋರಾಟವನ್ನು ಮೆಲಕು ಹಾಕಿದರು. ಆದರೆ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ಘೋಷಣೆ ಮಾಡದೆ ಮೋದಿಯವರು ತಮ್ಮ ಭಾಷಣವನ್ನು ಮುಗಿಸಿದರು.

ಪ್ರಧಾನಿಯವರ ಭಾಷಣದಲ್ಲಿ ವಿಮಾನ ನಿಲ್ದಾಣದ ಹೆಸರು ಘೋಷಣೆಯಾಗಲಿಲ್ಲ.

ಹದಿನಾಲ್ಕು ವರ್ಷಗಳ ಶಿವಮೊಗ್ಗ ಜನತೆಯ ಕನಸು ಇಂದು ನನಸಾಯಿತು. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದರು. ಬೆಳಿಗ್ಗೆ 11. 30 ಕ್ಕೆ ದೆಹಲಿಯಿಂದ ಶಿವಮೊಗ್ಗಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್,ಯಡಿಯೂರಪ್ಪ ಸ್ವಾಗತ ಕೋರಿದರು. ನಂತರ ಮೋದಿಯವರು  ನೂತನ ಏರ್ ಪೋರ್ಟ್ ಟರ್ಮಿನಲ್ ವೀಕ್ಷಣೆ ಮಾಡಿದರು.

 

ನಂತರ ವೇದಿಕೆಗೆ ಆಗಮಿಸಿದ ಪ್ರಧಾನಿಯವರು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದ ಮೋದಿಯವರಿಗೆ ನೆರದ ಜನತೆ ಮೋದಿ ಘೋಷಣೆ ಕೂಗಿದರು.ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು, ಸಿರಿಗನ್ನಡಂ ಗೆಲ್ಗೆ.. ಸಿರಿ ಗನ್ನಡಂ ಬಾಳ್ಗೆ ಎಂದ ಮೋದಿಯವರು ಜೈಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಭಾಷಣ ಆರಂಭಿಸಿದರು. ಒಂದು ಭಾರತ ಶ್ರೇಷ್ಠ ಭಾರತ ಎಂದು ಸಾರಿ ಹೇಳಿದ ರಾಷ್ಟ್ರಕವಿ ಕುವೆಂಪು ನೆಲಕ್ಕೆ ನಮನಿಸುವುದಾಗಿ ಹೇಳಿದರು. ಈ ದಿನ ಕರ್ನಾಟಕಕ್ಕೆ ಬಂದು ವಿಮಾನ ನಿಲ್ದಾಣ ಮತ್ತು ಸಾವಿರಾರು ಕೋಟಿ ರೂಪಾರಿಯ ಬೃಹತ್ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವ ಸೌಭಾಗ್ಯ ದೊರೆತಿದೆ ಎಂದು ಹೇಳಿದರು.

 

ಜನರ ಮೂಲಕ ಮೊಬೈಲ್ ಟಾರ್ಚ್ ಬೆಳಗಿಸಿ  ಯಡಿಯೂರಪ್ಪರ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ

ಈ ದಿನ ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಲಭ್ಯವಾಗಿದೆ. ಬಹಳ ದಿನಗಳಿಂದ ಕಾಯುತ್ತಿದ್ದ  ವಿಮಾನ ನಿಲ್ದಾಣದ ಕನಸು ಈ ದಿನ ನನಸಾಗಿದೆ. ಶಿವಮೊಗ್ಗ ಏರ್ ಪೋರ್ಟ್ ಸುಂದರವಾಗಿದೆ. ಇದು ಸಾಂಪ್ರದಾಯಿಕ  ಮತ್ತು ತಂತ್ರಜ್ಞಾನದ ಸಂಗಮವಾಗಿದೆ  ರಸ್ತೆಯಿಂದ ಹಿಡಿದು ರೈಲಿನವರೆಗೆ ಅನೇಕ ಕಾಮಗಾರಿಗಳು ಇಂದು ಶಿಲಾನ್ಯಾಸಗೊಂಡಿದೆ. ಪ್ರತಿ ಮನೆಯಲ್ಲೂ ಜಲಭಾಗ್ಯ ಲಭಿಸುವ ಕಾಮಗಾರಿ ಪ್ರಾರಂಭವಾಗಿದೆ. ಈ ದಿನ ತುಂಬಾ ವಿಶೇಷವಾಗದೆ, ಇದು ಲೋಕಪ್ರೀಯ ನಾಯತ ಬಿ.ಎಶ್.ಯಡಿಯೂರಪ್ಪರ ಹುಟ್ಟಿದ ದಿನ. ನಾನು ಅವರಿಗೆ ಆಭಾರಿಯಾಗಿದ್ದೇನೆ. ಹೋರಾಟದ ಬದುಕಿನ ಮೂಲಕ ಬಡವರು ರೈತರ ಕಲ್ಯಾಣಕ್ಕಾಗಿ ಸಮರ್ಪಣೆ ಮಾಡಿದ್ದಾರೆ. ಯಡಿಯೂರಪ್ಪರ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ. ನಾವು ನೀವುಗಳೆಲ್ಲರೂ ಮೊಬೈಲ್ ಲೈಟ್ ಟಾರ್ಚ್ ಹಾಕುವ ಮೂಲಕ ಅವರಿಗೆ ಅಭಿನಂಧನೆ ಸಲ್ಲಿಸೋಣ ಎಂದು ಮೋದಿಯವರು ಕರೆ ನೀಡಿದರು. ನೆರದ ಜನತೆ ಟಾರ್ಟ್ ಆನ್ ಮಾಡಿ ಬಿ.ಎಸ್.ವೈ ಗೆ ಅಭಿನಂದನೆ ಸಲ್ಲಿಸಿದರು. ನಂತರ ಪ್ರಧಾನಿಯವರು ದೇಶದ ಅಭಿವೃದ್ದಿಯ ಬಗ್ಗೆ ಜನತೆಯ ಗಮನ ಸೆಳೆದರು. ಆದರೆ ಭಾಷಣದ ಕೊನೆವರೆಗೂ ಎಲ್ಲಿಯಾದ್ರೂ, ವಿಮಾನ ನಿಲ್ದಾಣಕ್ಕೆ ಪ್ರಧಾನಿಗಳು ಹೆಸರು ಘೋಷಣೆ ಮಾಡ್ತಾರಾ ಎಂದು ಕಾದಿದ್ದ ಜನತೆಗೆ ನಿರಾಸೆಯಾಯ್ತು. ಆದರೂ ಮುಂದಿನ ದಿನಗಳಲ್ಲಿ ಹೆಸರು ಅಧಿಕೃತಗೊಂಡರೂ ಅಚ್ಚರಿಯಿಲ್ಲ.

 

ವೇದಿಕೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಇದು ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಲಿದೆ. 30 ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳು ಮೋದಿಯವರು ಪ್ರಧಾನಿಯಾದ ಬಳಿಕ ಉದ್ಘಾಟನೆ ಯಾಗಿವೆ. ಇನ್ನು 15 ವಿಮಾನ ನಿಲ್ದಾಣಗಳು ಕಾಮಗಾರಿಯಲ್ಲಿವೆ. ಸ್ವಾತಂತ್ರ ನಂತರ ಎಷ್ಟು ಮನೆಗಳಾಗಿದ್ದವು, ಶೌಚಾಲಯ ಗಳು ಆಗಿದ್ದವು ಮೋದಿ ಪ್ರಧಾನಿ ಬಳಿಕ ದುಪ್ಪಟ್ಟು ಆಗಿವೆ..

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ..ಮೋದಿಯವ ಆಡಳಿತ ನೋಡಿ ಜಿ20  ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಭಾರತಕ್ಕೆ ಬಂದಿದೆ. ಕರ್ನಾಟಕಕ್ಕೆ ಮೋದಿಯವರ ಕೂಡುಗೆ ಸಾಕಷ್ಟಿದೆ.ಡಬಲ್ ಇಂಜಿನ ಸರ್ಕಾರವಿದ್ದರೆ ರಾಜ್ಯ ಅಭಿವೃದ್ಧಿ ಯಾಗುತ್ತದೆ ಅನ್ನೊದಕ್ಕೆ ಸಾಕ್ಷಿ ಕರ್ನಾಟಕ ಎಂದು ಬಿಎಸ್ ವೈ ರನ್ನು ಸಿಎಂ ಹಾಡಿ ಹೊಗಳಿದರು. ರಾಜ್ಯಕ್ಕೆ ಬಿಎಸ್ ವೈ ಕೂಡುಗೆಗಳನ್ನು ಸ್ಮರಿಸಿದ ಸಿಎಂ ಸೂರ್ಯ ಚಂದ್ರರು ಇರುವವರೆಗೂ ಬಿಎಸ್ ವೈ ರ ಹೆಸರು ಅಜರಾಮರ. ಅವರು ಜನರಿಗೆ ನೀಡಿರುವ ಯೋಜನೆಗಳು ಶಾಶ್ವತ ಎಂದು ಹೇಳಿದರು.ಯ

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪರು, ಇಡೀ ವಿಶ್ವವೇ ಮೆಚ್ಚಿರುವ ಆದರ್ಶ ನಾಯಕ ಪ್ರಧಾನಿ ನರೇಂದ್ರ ಮೋದಿ..

ಅವರ ಆಗನ ಮಲೆನಾಡಿಗರಿಗೆ ಸಂತಸ ತಂದಿದೆ ಎಂದು ಹೇಳಿದರು. ನನ್ನ ಹುಟ್ಟು ಹಬ್ಬದ ದಿನದಂದು ಮೋದಿಯವರು ಹೇಳಿದ್ದರು ಅದರಂತೆ ಮೋದಿಯವರು ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ. ಭಾಷಣ ಮಾಡುತ್ತಿರುವಾಗ ಬಿಎಸ್ ವೈ ಅವರಿಗೆ ಕೆಮ್ಮು. ಶುರುವಾದ್ರೂ ಬಿ.ಎಸ್.ವೈ ಭಾಷಣ ಮುಂದುವರೆಸಿದ್ರು. ಇದನ್ನು ಗಮನಿಸಿದ ಮೋದಿಯವರು ತಮ್ಮ ಅಂಗರಕ್ಷಕನಿಗೆ ನೀರು ಕೊಡುವಂತೆ ಹೇಳಿದಾಗ, ಅಂಗರಕ್ಷಕರು ನೀರು ನೀಡಿದರು. ನಂತರ ಬಿ.ಎಸ್.ವೈ ಸುಗಮವಾಗಿ ಭಾಷಣ ಮುಗಿಸಿದರು.

 

ಕಾರ್ಯಕ್ರಮದ ನಂತರ ಪ್ರಧಾನಿಯವು ಬೆಳಗಾವಿ ಪ್ರಯಾಣ ಬೆಳೆಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಆರಗಾ ಜ್ಞಾನೇಂದ್ರ ಭೈರತಿ ಬಸವರಾಜ, ನಾರಾಯಣ ಗೌಡ, ಸೋಮಶೇಖರ್, ಸಿಸಿ ಪಾಟೀಲ್  ಕೆ|ಎಸ್ ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಆಗಮಿಸಿದ ಜನತೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮ ಮುಗಿದ ನಂತರ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಪೊಲೀಸರು ಹರಸಾಹಸ ಪಟ್ಟು ಸಂಚಾರವನ್ನು ತಹಬದಿಗೆ ತಂದರು.