ಬಿ.ಎಸ್.ವೈ ಭಾಷಣ ಮಾಡುವಾಗ ಶುರುವಾದ ಕೆಮ್ಮು ! ನೀರಿಗಾಗಿ ತಡಕಾಡುವ ಸಂದರ್ಭ ಎದುರಾದಾಗ ಪ್ರಧಾನಿ ನರೇಂದ್ರ ಮೋದಿಯವರು ಏನ್ ಮಾಡಿದ್ರು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು. ಮಾಜಿ ಸಿಎಂ ಬಿ,ಎಸ್.ಯಡಿಯೂರಪ್ಪನವರ ಜನ್ಮದಿನವೇ ವಿಮಾನ ನಿಲ್ದಾಣ ಉದ್ಗಾಟನೆಯಾಗುತ್ತಿರುವಾಗ ಅವರ ಸಂತೋಷಕ್ಕೆ ಪಾರಿವೇ ಇರಲಿಲ್ಲ. ವೇದಿಕೆಯಲ್ಲಿ ಪ್ರಧಾನಿಯಿಂದ ಸನ್ಮಾನ ಸ್ವೀಕರಿಸಿದ, ಯಡಿಯೂರಪ್ಪರು, ಭಾಷಣ ಆರಂಭಿಸುವ ಮುನ್ನ ಭೋಲೋ ಭಾರತ್ ಮಾತಾ ಕೀ ಎಂದು ಘೋಷಣೆ ಕೂಗಿದಾಗ ಕಂಟಲು ಕೊಂಚ ಕಟ್ಟಿಕೊಂಡಂತಾಯಿತು. ಈ ಸಂದರ್ಭದಲ್ಲಿ ಭಾಷಣ ಮುಂದುವರೆಸುವಾಗ ಮಧ್ಯದಲ್ಲಿ ಅಗ್ಗಾಗ್ಗೆ ಕೆಮ್ಮು ಕಾಣಿಸಿಕೊಂಡು,ಬಿ.ಎಸ್ ವೈ ಮಾತನಾಡಲು ಅಡ್ಡಿ ಪಡಿಸುತ್ತಿತ್ತು.

ಬಿ.ಎಸ್.ವೈ ಭಾಷಣ ಮಾಡುವಾಗ ಶುರುವಾದ ಕೆಮ್ಮು ! ನೀರಿಗಾಗಿ ತಡಕಾಡುವ ಸಂದರ್ಭ ಎದುರಾದಾಗ ಪ್ರಧಾನಿ ನರೇಂದ್ರ ಮೋದಿಯವರು ಏನ್ ಮಾಡಿದ್ರು ಗೊತ್ತಾ?

ಇತ್ತ ಯಡಿಯೂರಪ್ಪರು ಆಗ್ಗಾಗ್ಗೆ ಕೆಮ್ಮುತ್ತಿರುವುದನ್ನು ಕಂಡ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯಕ್ ವೇದಿಕೆಯಿಂದ ಎದ್ದು  ನೀರು ತರಲು  ಹಿಂಬದಿ ಹೊರಟರು.ಅಲ್ಲಿ ನೀರಿನ ಬಾಟಲಿ ಇಡಲು ಪ್ರೋಟೊಕಾಲ್ ಅಡ್ಡಿಯಾಗಿದ್ದರಿಂದ ನೀರಿಗಾಗಿ ತಡಕಾಡುವ ಪರಿಸ್ಥಿತಿ ಎದುರಾಯಿತು.

 

ಇತ್ತ ಯಡಿಯೂರಪ್ಪರು ಕೆಮ್ಮುತ್ತಲೇ ಮಾತನಾಡುತ್ತಿದ್ದರೂ, ಅವರಿಗೆ ಆ ಸಂದರ್ಭದಲ್ಲಿ ನೀರು ಸಂಜೀವಿನಿಯಾಗಿತ್ತು..ಇವೆಲ್ಲಾ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಹಿಂದೆ ಕುಳಿತಿದ್ದ ತಮ್ಮ ಅಂಗರಕ್ಷಕನಿಗೆ ನೀರು ನೀಡುವಂತೆ ಸೂಚಿಸಿದರು.

ಬಿ.ಎಸ್.ವೈ ಭಾಷಣ ಮಾಡುವಾಗ ಶುರುವಾದ ಕೆಮ್ಮು ! ನೀರಿಗಾಗಿ ತಡಕಾಡುವ ಸಂದರ್ಭ ಎದುರಾದಾಗ ಪ್ರಧಾನಿ ನರೇಂದ್ರ ಮೋದಿಯವರು ಏನ್ ಮಾಡಿದ್ರು ಗೊತ್ತಾ?

ತಕ್ಷಣ ಅಂಗರಕ್ಷಕ ಪ್ರದಾನಿಯವರು ಬಳಸುತ್ತಿದ್ದ ನೀರನ್ನೇ ತಕ್ಷಣ ಯಡಿಯೂರಪ್ಪರಿಗೆ ನೀಡಿದರು. ತಕ್ಷಣ ನೀರು ಸೇವಿಸಿದ ಯಡಿಯೂರಪ್ಪರು ಭಾಷಣ ಮುಂದುವರೆಸಿದರು. ಇದದ ನಂತರ ಪುನಃ ಯಡಿಯೂರಪ್ಪರಿಗೆ ನೀರು ಲಭ್ಯವಾಯ್ತು. ಇದು ಪ್ರಧಾನಿಯವರ ಸೂಕ್ಷ್ಮ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor