ವೈದ್ಯಲೋಕದ ಅಚ್ಚರಿ! ಮಹಿಳೆಯ ಹೊಟ್ಟೆಯಿಂದ 9 ಕೆಜಿ ಗಡ್ಡೆ ಹೊರತೆಗೆದ ಡಾಕ್ಟರ್ಸ್‌!

The wonder of the medical world! Doctors remove 9 kg tumour from woman's stomach

ವೈದ್ಯಲೋಕದ ಅಚ್ಚರಿ! ಮಹಿಳೆಯ ಹೊಟ್ಟೆಯಿಂದ 9 ಕೆಜಿ ಗಡ್ಡೆ ಹೊರತೆಗೆದ ಡಾಕ್ಟರ್ಸ್‌!
tumour

Shivamogga  Apr 11, 2024  ವೈದ್ಯ ಲೋಕದಲ್ಲಿ ಆಗೊಂದು ಈಗೊಂದು ಅಚ್ಚರಿಗಳು ಎದುರುಗೊಳ್ಳುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಆಸ್ಪತ್ರೆಯೊಂದರ ವೈದ್ಯರು ಮಹಿಳೆಯ ದೇಹದಿಂದ ಬರೋಬ್ಬರಿ 9 ಕೆಜಿ ತೂಕದ ಗಡ್ಡೆಯನ್ನು ಹೊರಕ್ಕೆ ತೆಗೆದಿದ್ದಾರೆ. ಮಲ್ನಾಡ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. 

ಏನಿದು ? ಶಿವಮೊಗ್ಗ ನಗರದ ಮಲ್ನಾಡ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ  ಮಹಿಳೆಯೊಬ್ಬರು ಅಡ್ಮಿಟ್‌ ಆಗಿದ್ದರು. ಅವರು ಕಡೂರು ತಾಲ್ಲೂಕಿನವರು. ಅವರ ಗರ್ಭಾಶಯದಲ್ಲಿ ಗಡ್ಡೆಯು ಬೆಳೆದಿತ್ತು. ಕೆಲವು ಮಹಿಳೆಯರಿಗೆ ಈ ರೀತಿಯ ಗಡ್ಡೆಗಳು ಬೆಳೆದು ಅವರ ಜೀವಕ್ಕೆ ಮುಳುವಾಗುತ್ತದೆ. 

ಈ ನಿಟ್ಟಿನಲ್ಲಿ ಕಡೂರಿನ ಮಹಿಳೆ ಮಲ್ನಾಡ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಡ್ಮಿಟ್‌ ಆಗಿದ್ದರು. ಅವರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ  ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ದೀಪಕ್ ಎಚ್.ಎಲ್ , ಡಾ.ಸಂದೇಶ್ ಕೆ.ಆರ್ (ಶಸ್ತ್ರ ಚಿಕಿತ್ಸಾ ತಜ್ಞರು) ಹಾಗೂ ಡಾ.ವಾದಿರಾಜ್ ಕುಲಕರ್ಣಿ, ಅರಿವಳಿಕೆ ತಜ್ಞ ಡಾ.ಅರ್ಜುನ್ ಭಾಗವತ್ ಹಾಗೂ ಸಿಬ್ಬಂದಿ ಅಂತಿಮವಾಗಿ ಯಶಸ್ವಿ ಆಪರೇಷನ್‌ ನಡೆಸಿದ್ದಾರೆ. ಗರ್ಭಾಶಯದಲ್ಲಿದ್ದ 9 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆದ ವೈದ್ಯರು, ಮಹಿಳೆಯ ಆತಂಕವನ್ನು ದೂರ ಮಾಡಿದ್ದಾರೆ.