ಶಿವಮೊಗ್ಗದಲ್ಲಿ ಗೆಲ್ಲುವುದು ಯಾರು | ಬೂತ್‌ ಲೆಕ್ಕಕ್ಕಿಳಿದ ಮತದಾರ? | ಮೀಸೆ ಮೇಲೆ ಚಾಲೆಂಜ್‌?

Who will win in Shimoga? Voter started booth counting | A challenge on the mustache? . Shimoga Election News, Shimoga News, Malenadu Today, Lok Sabha Election

ಶಿವಮೊಗ್ಗದಲ್ಲಿ ಗೆಲ್ಲುವುದು ಯಾರು | ಬೂತ್‌ ಲೆಕ್ಕಕ್ಕಿಳಿದ ಮತದಾರ? | ಮೀಸೆ ಮೇಲೆ ಚಾಲೆಂಜ್‌?
Who will win in Shimoga, Voter started booth counting, mustache,Shimoga Election News, Shimoga News, Malenadu Today, Lok Sabha Election

SHIVAMOGGA | MALENADUTODAY NEWS | May 8, 2024  

ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿದಿದೆ. ರಾಜಕಾರಣಿಗಳು ಇವತ್ತಿನಿಂದ ಮತ್ತೆ  ಮುಂದಿನ ಎಲೆಕ್ಷನ್‌ವರೆಗೂ ಕೈಗೆ ಸಿಗಲ್ಲ, ದುಡ್ಡು ಹಂಚಿ ಹೋದವರು ಪುನಃ ಭೇಟಿಯಾಗೋದು ಮುಂದಿನ ಚುನಾವಣೆಯಲ್ಲಿಯೇ. ಇದರ ನಡುವೆ ಸದ್ಯದ ಮತದಾನದ ವಿಚಾರ ತೆಗೆದುಕೊಳ್ಳುವುದಾದರೆ, ಮತದಾರ ಈ ಸಲ ಶಿವಮೊಗ್ಗದಲ್ಲಿ ದಾಖಲೆ ಬರೆದಿದ್ದಾನೆ. ತನ್ನ ಹಕ್ಕನ್ನ ಚಲಾಯಿಸುವುದರ ಜೊತೆಗೆ ಇತಿಹಾಸದಲ್ಲಿ ಇದೇ ಮೊದಲ ಸಲ ಅತಿಹೆಚ್ಚು ವೋಟು ಹಾಕಿದ  ರೆಕಾರ್ಡ್‌ ಬರೆದಿದ್ದಾನೆ. 

ಬೂತ್‌ ಲೆಕ್ಕವೇನು?

ಸದ್ಯ ಇದೇ ವಿಚಾರದ್ದೆ ಸಖತ್‌ ಚರ್ಚೆ.ರಿಸಲ್ಟ್‌ ಬರೋದಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕು, ಆದರೆ ಅದಾಗಲೇ ಯಾರಿಗೆ ಎಷ್ಟು ವೋಟು ಬಿದ್ದಿರಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಕೆಲವರು ಮೊಬೈಲ್‌ ಕ್ಯಾಲಿಕ್ಯುಟೇರ್‌ ಹಿಡಿದು, ಇವರದ್ದು ಇಷ್ಟಿಷ್ಟು, ಹಿಂಗಿಂಗೆ ಅಂತಾ ಪರ್ಸೆಂಟೇಜ್‌ ಲೆಕ್ಕ ಹಾಕುತ್ತಿದ್ದರೇ, ಪಕ್ಷಗಳ ಪ್ರಮುಖರು ಬೂತ್‌ ಗಳಲ್ಲಿ ಸಿಗುತ್ತಿರುವ ಮಾಹಿತಿಯನ್ನು ಒಟ್ಟು ಮಾಡುತ್ತಿದ್ದಾರೆ. 

ವೋಟಿಂಗ್‌ ಭಯಂಕರ?ಲಾಭ ಯಾರ ಪರ?

ಆಯಾ ಬೂತ್‌ಗಳಲ್ಲಿ ಕೇಳಿಬಂದ ಮಾತುಗಳನ್ನ ಗಮನಿಸುವುದಾದರೆ, ಈ ಸಲ ವೋಟಿಂಗ್‌ ಹೆಚ್ಚಾಗಿದೆ. ಇದು ಸಹಜವಾಗಿಯೇ ಒಂದು ಪಕ್ಷದವರಿಗೆ ಪ್ಲಸ್‌ ಆಗಬಹುದು ಎಂಬ ಚರ್ಚೆ ದೊಡ್ಡಮಟ್ಟದಲ್ಲಿದೆ. ಇದೇ ವೇಳೆ ಮಹಿಳಾ ಮತಗಳು ಸಾಲಿಡ್‌ ಆಗಿ ಬಿದ್ದಿರುವ ಸಾಧ್ಯತೆ ಇದೆ. ಆ ಕಾರಣಕ್ಕೇನೆ ಶೇಕಡಾವಾರು ಮತದಾನ ಜಾಸ್ತಿಯಾಗಿದೆ ಎಂಬ ಅಂಕಿ ಅಂಶವೂ ಇದೆ. ಈ ಅಂಶ ಯಾರಿಗೆ ಪ್ಲಸ್‌ ಆಗಬಹುದು ಎಂಬುದು ಗೊತ್ತು ಮಾಡಿಕೊಳ್ಳುವುದು ಕಷ್ಟವಲ್ಲ. 

ಬೈಂದೂರು ಸಾಲಿಡ್‌, ಭದ್ರಾವತಿ ಕಮ್ಮಿ

ಇನ್ನೂ 14 ಲಕ್ಷಕ್ಕೂ ಮೀರಿದ ಮತಗಳು ದಾಖಲಾಗಿವೆ, ಈ ಪೈಕಿ ಜಾತಿ ವೋಟಿನ ಪ್ಲಸ್‌ ಮೈನಸ್‌ ಲೆಕ್ಕಗಳು ಸಹ ಆರಂಭವಾಗಿದ್ದು, ಯಾರು ನಿರ್ಣಾಯಕ ಆಗ್ತಾರೆ ಎಂಬ ವಿಷಯವೂ ಚರ್ಚೆಯಲ್ಲಿದೆ. ಭದ್ರಾವತಿಯಲ್ಲಿ  ಶೇಕಡಾವಾರು ಮತದಾನ ಕಡಿಮೆಯಾಗಿದೆ, ಬೈಂದೂರಿನಲ್ಲಿ ಅತಿಹೆಚ್ಚಾಗಿದೆ. ಹೋದ ಸಲ ಇಲ್ಲಿ ಸಿಕ್ಕ ಲೀಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹಾಗಾಗಿ ಈ ಅಸೆಂಬ್ಲಿ ಕ್ಷೇತ್ರಗಳಲ್ಲಿನ ಲೆಕ್ಕಕ್ಕೆ ವಿಶೇಷ ತೂಕವಿದೆ. ಆದರೆ ಈ ಸಲ ಇಲ್ಲಿ ವಿಭಿನ್ನ ಗಣಿತವಿದೆ ಎನ್ನುತ್ತಾರೆ ಚುನಾವಣಾ ತಜ್ಞರು. ಉಳಿದಂತೆ ಪ್ರತಿ ಎಂಎಲ್‌ಎ ಕ್ಷೇತ್ರಗಳಲ್ಲಿಯು 50;50 , 60; 40 , 30 : 70 , ಎನ್ನುವಂತಹ ಮೈಂಡ್‌ ಲೆಕ್ಕಾಚಾರ ಡಿಸ್ಕಶನ್‌ಗೆ ಬಂದು ಕುಳಿತಿದೆ. 

ನೋಡ ತಮ್ಮ

ಇನ್ನೂ ನೋಡ ತಮ್ಮ ನಮ್‌ ಬೂತ್‌ನಲ್ಲಿ 1000 ವೋಟಿದೆ, ಅದರಲ್ಲಿ 500 ಮಂದಿ ಇವರಿದ್ದಾರೆ. ಅವರೆದ್ದಲ್ಲ ಒಂದೆ ಪಾರ್ಟಿಗೆ ಗೊತ್ತಲ್ಲನೋ. ಸಂಜೆ ಹೊತ್ತಿಗೆ ಏಳುನೂರು ವೋಟ್‌ ಆಗಿದೆ, ಅದರಾಗೆ, ನಾನೂರು ಲೆಕ್ಕ ಪಕ್ಕಾ ಇಡ್ಕಾ, ಮುನ್ನೂರು ಡಿಸ್ಟರ್ಬ್‌ ಆಗಿದೆ ಅಂತಿಟ್ಕಾ..ಹೀಗೆ ಹಳ್ಳಿಮಂದಿ ದಿಲ್ಲಿ ಎಲೆಕ್ಷನ್‌ನನ್ನ ಅರ್ಥೈಸುತ್ತಿದ್ದಾರೆ. ಮಹಿಳೆಯರದ್ದು ಸಾಲಿಡ್‌ ಆಗಿ ಬಿದ್ದರೇ ಇಂತಹವರೇ ಗೆಲ್ಲೋದು, ವೋಟಿಂಗ್‌ ಪರ್ಸೆಂಟೇಜ್‌ ಜಾಸ್ತಿಯಾಗಿರೋದ್ರರಿಂದ ಈ ಸಲ ಕ್ಲೀನ್‌ ಸ್ವೀಪ್‌ ಆಗ್ತಾರೆ. ಗರಗರ ಸುತ್ತಿದವರು ಡಿಪಾಸಿಟ್‌ ಕಳ್ಕತ್ತಾರೆ. ಹೀಗೆ ಅಣ್ಣಾ, ಅಕ್ಕಾ, ಅಪ್ಪಾ ಎನ್ನುತ್ತಾ ಮತದಾರನೇ ಮನಸಲ್ಲಿ ಮತ ಎಣಿಸುತ್ತಿದ್ದಾನೆ. ಜೊತೆಯಲ್ಲಿ ಅರ್ಧ ಮೀಸೆ ತೆಗಿತೀನಿ, ತಲೆ ಬೋಳಿಸ್ಕೊಂಡು ಓಡಾಡತ್ತೀನಿ, ಹತ್ತತ್ತು ಸಾವಿರ ಚಾಲೆಂಜ್‌ ಇದ್ಯನಾ ತಾಕತ್ತು, ಎಂಬ ಕೌಂಟಿಂಗ್‌ಗೆ ಸವಾಲ್‌ ಹಾಕುತ್ತಿದ್ದಾರೆ. 

ವಿಡಿಯೋ ಬರಬಾರದಿತ್ತಾ

ಇವೆಲ್ಲದರ ನಡುವೆ ಮತದಾರನ ಕರಳು ಸಂಕಟದ ಮಾತೊಂದು ರಾಜಕಾರಣದ ಮೇನ್‌ ರೋಡಲ್ಲಿ ಹರಿದಾಡುತ್ತಿದೆ. ಏನಾದ್ರು ಇರಲಿ, ಏನಾರು ಆಗಲಿ, ಆ ವಿಡಿಯೋವೊಂದು ಹರಿದಾಡಬಾರದಿತ್ತಾ! ಪಾಪ ಮಾರಾಯ, ತಿಂಗಳಿಡಿ ಹಾಕಿದ ಶ್ರಮನ, ರಾತ್ರಿ ಹೊತ್ತಲ್ಲಿ ಹೊಂಡಕ್ಕೆ ಹಾಕಿದ್ರಲ್ಲಾ,  ಹಂಗೆಲ್ಲಾ ರಾಜಕಾರಣ ಮಾಡ್ಬೇಕಿತ್ತನಾ? ಕಥೆ ಎಂತಾಥೋ ಏನೋ? ಎಂಬಂತಹ ಅನುಕಂಪದ ಮಾತು ಸಹ ಹರಿದಾಡುತ್ತಿದೆ. ಒಟ್ಟಾರೆ, ಶಿವಮೊಗ್ಗ ಜನ ರಾಜಕಾರಣದಲ್ಲಿ ಹಂಚಿದ ಹಣದ ಬಡ್ಜೆಟ್‌ಗೂ ಸಿಗದ ಲೆಕ್ಕಾಚಾರವನ್ನು ಎಲೆಕ್ಷನ್‌ ವೋಟಿನ ವಿಚಾರದಲ್ಲಿ ಪಕ್ಕಾ ಕ್ಯಾಲಿಕ್ಯುಟ್‌ ಮಾಡುತ್ತಿದ್ದಾರೆ. ಈ ಪೈಕಿ ಯಾರ ಲೆಕ್ಕ ಸರಿ ಎಂಬುದಕ್ಕೆ ಒಂದು ತಿಂಗಳು ಕಾಯಬೇಕು. 

ನಿಮ್ಮೂರಲ್ಲಿಯು ಇಂತಹ ಚರ್ಚೆ ವಿಶೇಷವಾಗಿ ನಡೆಯುತ್ತಿದ್ದರೇ ಅದನ್ನು ಕಾಮೆಂಟ್ಸ್‌ನಲ್ಲಿ ಬರೆಯಿರಿ, ಇವರೇ ಗೆಲ್ಲುತ್ತಾರೆ ಎಂದು ಬಿಂಬಿಸುವ ಕಾಮೆಂಟ್ಸ್‌ನ ಸಪೋರ್ಟ್‌ ಮಾಡಲಾಗುವುದಿಲ್ಲ.

Who will win in Shimoga, Voter started booth  counting,  mustache,Shimoga Election News, Shimoga News, Malenadu Today, Lok Sabha Election