JP Nadda in Shimoga | ಒಂದು ಫೇಕ್ ವಿಡಿಯೋ ಹರಿದಾಡುತ್ತಿದೆ | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದೇನು?

JP Nadda in Shimoga A fake video is circulating What did BJP National President JP Nadda say? Narendra Modi in Shimoga, BJP News, Nation Wants to Know, BS Yeddyurappa, BY Raghavendra

JP Nadda in Shimoga |  ಒಂದು  ಫೇಕ್ ವಿಡಿಯೋ ಹರಿದಾಡುತ್ತಿದೆ | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದೇನು?
JP Nadda say,Narendra Modi in Shimoga, BJP News, Nation Wants to Know, BS Yeddyurappa, BY Raghavendra

SHIVAMOGGA | MALENADUTODAY NEWS | Apr 30, 2024  

ಶಿವಮೊಗ್ಗಕ್ಕೆ ಇವತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರವರು ಆಗಮಿಸಿದ್ದಾರೆ. ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರರವರ ಪರವಾಗಿ ಮತಯಾಚನೆ ನಡೆಸಿ ಮಾತನಾಡಿದ ಅವರು, ರಾಘವೇಂದ್ರ ಅವರು ಒಳ್ಳೆಯ ಮಾತುಗಾರ ಲೋಕಸಭೆಯಲ್ಲಿ ತುಂಬಾ ಮಾತಾನಾಡಿದ್ದಾರೆ  ಅವರು ಮತ್ತೆ ಲೋಕಸಭೆಗೆ ಆಗಮಿಸಬೇಕು ಅವರಿಗೆ ನಿಮ್ಮ ಬೆಂಬಲ ಬೇಕು ಎಂದಿದ್ದಾರೆ.  

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಮೋದಿ ರಾಜ್ಯಕ್ಕೆ ಅಭಿವೃದ್ಧಿ ಯಲ್ಲಿ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಕೂಡುಗೆ ಈ ರಾಜ್ಯಕ್ಕೆ ಅಪಾರ. ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಅಜೆಂಡಾ ಎಂದ ಜೆಪಿ ನಡ್ಡಾ ಇದೀಗ ಒಂದು ವೀಡಿಯೋ ಓಡಾಡುತ್ತಿದೆ . ಎಸ್ಸಿ, ಎಸ್ಟಿ ಮೀಸಲಾತಿ ತೆಗೆಯುತ್ತಾರೆ ಎಂಬಂತಹ  ಫೇಕ್ ವೀಡಿಯೋ ಅದು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಹರಿ ಬಿಡಲಾಗಿದೆ .ಎಸ್ಸಿ, ಎಸ್ಟಿ ಮತ ಸೆಳೆಯಲು ಈ ರೀತಿ ಫೇಕ್‌ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಇದು ಯಾವ ರೀತಿಯ ರಾಜಕಾರಣ ಎಂದು ಪ್ರಶ್ನಿಸಿದರು. 

ಈ ಫೇಕ್‌ ವಿಡಿಯೋ ಕಾಂಗ್ರೆಸ್‌ ಪ್ಲ್ಯಾನ್‌ ಇಂಡಿಯಾ ಒಕ್ಕೂಟದ ಷಡ್ಯಂತ್ರ ಎಂದ ಜೆಪಿ ನಡ್ಡಾ ಓಬಿಸಿ ಕೋಟಾ ದಲ್ಲಿ ಮುಸ್ಲಿಂ ಅವರಿಗೆ ಮೀಸಲಾತಿ‌ ನೀಡಲು ಕಾಂಗ್ರೆಸ್ ರೆಡಿಯಾಗ್ತಿದೆ ಎಂದು ಆರೋಪಿಸಿದರು . ಈ ಹಿಂದೆ ದೇಶದಲ್ಲಿ ಜಾತಿ, ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಆಗ್ತಿತ್ತು.  ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಸಮವಾಗಿ ಕಾಣುತ್ತಿದ್ದಾರೆ. ಪ್ರಪಂಚದ ಎಲ್ಲಾ ದೇಶದಲ್ಲಿ ಆರ್ಥಿಕ ಸ್ಥಿತಿ ಏರಿಳಿತ ಆಗಿದೆ. ಆದರೆ ಭಾರತದ ಆರ್ಥಿಕ ವ್ಯವಸ್ಥೆ ಸ್ಥಿರವಾಗಿದೆ. ಪ್ರಪಂಚದಲ್ಲಿ ಆರ್ಥಿಕತೆಯಲ್ಲಿ ಐದನೇ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದರು.