ಕೆಎಸ್‌ ಈಶ್ವರಪ್ಪ ವಿಡಿಯೋ | ಡ್ಯಾಮೇಜ್‌ ಆಗಿದ್ದು ಯಾರಿಗೆ | ಮತದಾನದ ಹಿಂದಿನ ರಾತ್ರಿ ಏನಾಯ್ತು? JP STORY

KS Eshwarappa Video | Who was damaged | What happened the night before the polling? JP STORY . JP Story, Shimoga Malenadu Today, Shimoga Election News, Shimoga Report, Malnad News

ಕೆಎಸ್‌ ಈಶ್ವರಪ್ಪ ವಿಡಿಯೋ | ಡ್ಯಾಮೇಜ್‌ ಆಗಿದ್ದು ಯಾರಿಗೆ | ಮತದಾನದ ಹಿಂದಿನ ರಾತ್ರಿ ಏನಾಯ್ತು? JP STORY
KS Eshwarappa Video , JP Story, Shimoga Malenadu Today, Shimoga Election News, Shimoga Report, Malnad News

SHIVAMOGGA | MALENADUTODAY NEWS | May 8, 2024  

 

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಈ ಬಾರಿ ಹಿಂದುತ್ವದ ಉಳಿವಿಗಾಗಿ ಹಾಗೂ ಕುಟುಂಬ ರಾಜಕಾರಣದ ವಿರೋಧದ ಉದ್ದೇಶ ಹೇಳಿಕೊಂಡು ರಾಷ್ಟ್ರಭಕ್ತರ ಬಳಗ ಕಟ್ಟಿಕೊಂಡರು. ಯಡಿಯೂರಪ್ಪನವರ ಕುಟುಂಬ ರಾಜಕಾರಣದ ವಿರುದ್ಧ ಹಾಗು ಬಿಜೆಪಿಯ ಶುದ್ದಿಕರಣಕ್ಕಾಗಿ ಸ್ಪರ್ದೆ ಎನ್ನುತ್ತಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. 

 

ಕಾಲೆಳೆದ ಕಾಲ

 

ಈ ನಿಟ್ಟಿನಲ್ಲಿ ಅವರ ಕಾಲೆಳೆಯುವ ತಂತ್ರವನ್ನೇ ವಿರೋಧಿ ಪಾಳಯ ಆರಂಭದಿಂದಲೂ ಮಾಡಿತು. ಈಶ್ವರಪ್ಪ ಸ್ಪರ್ಧಾಕಣದಿಂದ ಹಿಂದೆ ಸರಿಯುತ್ತಾರೆ ಎಂದು ಮೊದಲು ಹಬ್ಬಿಸಲಾಯಿತು. ನಂತರ ಪಕ್ಷದ ವರಿಷ್ಠರು ಈಶ್ವರಪ್ಪನವರನ್ನು ಮನವೊಲಿಸುತ್ತಾರೆ ಅವರು ಬಿಜೆಪಿ ತೊರೆಯಲ್ಲ ಎಂದು ಹಬ್ಬಿಸಲಾಯ್ತು. ಎಲ್ಲಾ ಊಹಾಪೋಹಗಳಿಗೂ ಈಶ್ವರಪ್ಪ ಪತ್ರಿಕಾಗೋಷ್ಠಿ ನಡೆಸಿ ನನ್ನ ಸ್ಪರ್ಧೆ ಖಚಿತ ಎಂದು ಸ್ಪಷ್ಟನೆ ಕೊಡುತ್ತಲೇ ಬಂದರು. 

 

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೂ ಈಶ್ವರಪ್ಪ ನಾಮಪತ್ರ ಸಲ್ಲಿಸೋದಿಲ್ಲ ಎಂಬ ವದಂತಿಗಳು ಹಬ್ಬಿದವು. ನಾಮಪತ್ರ ಸಲ್ಲಿಸಿನ ನಂತರ ಈಶ್ವರಪ್ಪ ನಾಮಪತ್ರ ವಾಪಸ್ಸು ಪಡೆಯುತ್ತಾರೆ ಎಂದು ಹಬ್ಬಿಸಲಾಯ್ತು. ಪಕ್ಷದ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಈಗಲೂ ಕಾಲಾವಕಾಶ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದರು. ಆಗ ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕೆಂಡವನ್ನೇ ಉಗುಳಿದ್ದರು. ಅಪ್ಪ ಮಕ್ಕಳು ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಅಲ್ಲಿ ಕೂಡ ಒತ್ತಿ ಹೇಳಿದರು. 

 

ಇದನ್ನು ಸಹ ಓದಿ :ಬೈಕ್‌ ಓಡಿಸುವಾಗ ಹುಷಾರ್‌ | ಪುರಲೆ ಕೆರೆ ಬಳಿ ತಲೆ ಮೇಲೆ ಹರಿಯಿತು ಗೂಡ್ಸ್‌ ಆಟೋ |

ಉಚ್ಚಾಟನೆ

 

ನಾಮಪತ್ರ ವಾಪಸ್ಸು ಪಡೆಯುವ ದಿನದಂದು, ಈಶ್ವರಪ್ಪ ನಾಮಪತ್ರ ವಾಪಸ್ಸು ಪಡೆದರು ಎಂದು ವಿರೋಧಿಗಳು ಸುದ್ದಿ ಹಬ್ಬಿಸಿದರು. ಅದು ನಿಜವೆಂದು ನಂಬಿದವರು ಹಲವಾರು ಮಂದಿಯಿದ್ದಾರೆ. ಯಾವಾಗ ನಾಮಪತ್ರವನ್ನು ಈಶ್ವರಪ್ಪ ವಾಪಸ್ಸು ಪಡೆಯುವುದಿಲ್ಲವೋ ತಕ್ಷಣಕ್ಕೆ ಅವರನ್ನು ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗುತ್ತದೆ. ಇದಕ್ಕೆ ಪ್ರತಿಕ್ರೀಯಿಸಿದ ಈಶ್ವರಪ್ಪ ಅಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. 

 

ನಾನು ಪಕ್ಷೇತರವಾಗಿ ಸ್ಪರ್ಧಿಸುವುದು ಖಚಿತವಾಗಿದೆ. ನನಗೆ ಬಿಜೆಪಿ ಕಾಂಗ್ರೆಸ್ ಸಂಘಪರಿವಾರದ ಸ್ನೇಹಿತರ ಬೆಂಬಲವಿದೆ ಎಂದು ಗಂಭೀರವಾಗಿಯೇ ಚುನಾವಣೆ ನಡೆಸಲು ಅಣಿಯಾದ್ರೂ, ಈಶ್ವರಪ್ಪ ಮಾಡಿದ ಚುನಾವಣಾ ಪ್ರಚಾರದ ಸಭೆಗಳು ಸಮಾರಂಭಗಳಲ್ಲಿ ಸೇರತ್ತಿದ್ದ ಜನರನ್ನು ನೋಡಿ ಕಾಂಗ್ರೆಸ್ ಬಿಜೆಪಿ ಮುಖಂಡರು ಕೊಂಚ ವಿಚಲಿತರಾಗಿದ್ದು ಸುಳ್ಳಲ್ಲ. ಅದರಲ್ಲೂ ಬಹಿರಂಗ ಚುನಾವಣೆ ಪ್ರಚಾರದ ಕೊನೆ ದಿನ ‌ರಾಷ್ಟ್ರೀಯ ಪಕ್ಷಗಳ ರಾಲಿಯಲ್ಲಿದ್ದ  ಜನರಿಗಿಂತ ಈಶ್ವರಪ್ಪ ನವರ ರ್ಯಾಲಿಯಲ್ಲಿ ಹೆಚ್ಚು ಜನರಿದ್ದರು. ಈಶ್ವರಪ್ಪನವರ ನಾಗಲೋಟದ ಚುನಾವಣಾ ಪ್ರಚಾರ ಮತದಾರರನ್ನ ಸೆಳೆಯುವ ಪರಿ ಎದುರಾಳಿಗೆ ಸಹಿಸಿಕೊಳ್ಳಲಾಗದಷ್ಟು ಹೊಟ್ಟೆಕಿಚ್ಚು ಹುಟ್ಟಿಸಿತ್ತು. 

 

ಇದಕ್ಕೆ ತಂತ್ರರೂಪಿಸಬೇಕಾದ ವಿರೋಧಿ ಪಾಳೆಯ ಕುತಂತ್ರವನ್ನೇ ಮಾಡಿತು. ಈಶ್ವರಪ್ಪನವರ ಹಳೆಯ ವಿಡಿಯೋದ ತುಣಕೊಂದನ್ನ ಎಡಿಟ್‌ ಮಾಡಿ, ರಾಘವೇಂದ್ರರನ್ನು ಗೆಲ್ಲಿಸಬೇಕೆಂಬ ಹೇಳಿಕೆಯ ಮಾದರಿಯಲ್ಲಿ ನ್ಯೂಸ್ ಪಾರ್ಮೆಟ್ ನಲ್ಲಿ ಹರಿಬಿಡಲಾಯಿತು ಅದೇ ರೀತಿ ಬಿಜೆಪಿ ಬೆಂಬಲಿಸಿ ಎಂಬ ಹೇಳಿಕೆಯನ್ನು ಪತ್ರಿಕೆ ಸ್ವರೂಪದಲ್ಲಿ ಪ್ರಿಂಟ್ ಫಾರ್ಮೆಟ್‌ನಲ್ಲಿ ರೆಡಿಮಾಡಿ ಬಿಡಲಾಯಿತು. ಒಬ್ಬ ಚುನಾವಣಾ ಅಭ್ಯರ್ಥಿಯ ರಾಜಕೀಯ ಭವಿಷ್ಯ ಕಮರಿಸಲು ಇದೊಂದು ವಾಮಚಾರದ ಮಾರ್ಗವನ್ನು ವಿರೋಧಿಗಳು ಅನುಸರಿಸಿದ್ದು ಎಷ್ಟು ಸರಿ ರಾತೋರಾತ್ರಿ ಈ ವಿಡಿಯೋ ಹಾಗು ನ್ಯೂಸ್ ಪ್ರಿಂಟ್ ತುಣಕನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು, ಈಶ್ವರಪ್ಪ ಚುನಾವಣೆಯಿಂದ ಹಿಂದೆ ಸರಿದಿದ್ದಾರಂತೆ. ಬಿಜೆಪಿಯನ್ನು ಬೆಂಬಲಿಸಿ ಎಂದು ಈಶ್ವರಪ್ಪನವರೇ ಮನವಿ ಮಾಡಿದ್ದಾರಂತೆ  ಎಂದು ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ವಿರೋಧಿಗಳು ಮುಂದಾದರು.

 

ಮತದಾನದ ಹಿಂದಿನ ರಾತ್ರಿ

 

ಮತದಾನದ ಹಿಂದಿನ ರಾತ್ರಿ ಹರಿದಾಡಿದ ವಿಡಿಯೋ ಎಲ್ಲರ ಮೊಬೈಲ್ ಕೈ ಸೇರಲು ಬಹಳ ಹೊತ್ತು ಬೇಕಾಗಲಿಲ್ಲ. ಮತದಾರರು ಗೊಂದಲಕ್ಕೆ ಒಳಗಾಗಿದ್ದು ಸುಳ್ಳಲ್ಲ. ಯಾಕೆಂದರೆ ವಿಡಿಯೋದಲ್ಲಿ ಬಿತ್ತರವಾದ ತುಣಕನ್ನೇ ಸತ್ಯ ಎಂದು ನಂಬಿಸುವಲ್ಲಿ ವಿರೋಧಿ ಪಾಳೆಯ ಸಾಕಷ್ಟು ಕೆಲಸ ಮಾಡಿತ್ತು. ತಮ್ಮ ಮತಗಳು ವಿಭಜನೆಯಾಗುತ್ತದೆ ಎಂದು ಗೊತ್ತಾದಾಗ ಈಶ್ವರಪ್ಪ ಇದೊಂದು ನೀಚತನದ ರಾಜಕಾರಣ. ವಿಡಿಯೋ ಹರಿಬಿಟ್ಟವರ ವಿರುದ್ಧ ಕ್ರಮಕ್ಕೆ ಎಸ್ಪಿ ಡಿಸಿಗೆ ಮನವಿ ಕೊಟ್ಟರು. 

 

ರಾತ್ರೋರಾತ್ರಿ ಹರಿದಾಡಿದ ವಿಡಿಯೋಗೆ ಈಶ್ವರಪ್ಪ ಆ ಕ್ಷಣಕ್ಕೆ ಏನಾದರೂ ಪ್ರತಿಕ್ರೀಯಿಸಿದ್ದರೂ., ಮತದಾರ ಗೊಂದಲಕ್ಕೊಳಗಾಗುತ್ತಿರಲಿಲ್ಲ. ಆದರೆ ಈಶ್ವರಪ್ಪ ಮಾರನೇ ದಿನ ಮದ್ಯಾಹ್ನ ಡಿಸಿ ಎಸ್ಪಿಗೆ ದೂರು ಕೊಡಲು ಹೋಗುತ್ತಾರೆ. ಈಶ್ವರಪ್ಪ ಸ್ಪರ್ದೆಯಿಂದ ಹಿಂದೆ ಸರಿದ್ರಂತೆ ಹೌದಾ ಎಂಬ ಸಂದೇಶದ ಡ್ಯಾಮೆಜ್ ಕಂಟ್ರೋಲ್ ಮಾಡುವಷ್ಟರಲ್ಲಿ ಸಂಜೆ ಆರು ಗಂಟೆಯಾಗಿತ್ತು. ಮತದಾನದ ಪ್ರಕ್ರೀಯೆ ಮುಗಿದಾಗಿತ್ತು. ಈಗ ಈಶ್ವರಪ್ಪ ಎಷ್ಟು ಮತ ಪಡೆಯುತ್ತಾರೆ ಎಂಬ ಲೆಕ್ಕಚಾರದಲ್ಲಿಯೇ ಕಾಂಗ್ರೆಸ್ ಬಿಜೆಪಿಯ ಹಣೆ ಬರಹ ಅಡಗಿದೆ.