ಬಿಗಿಯಾಯ್ತು ನೀತಿ ಸಂಹಿತೆ ! ಚೆಕ್‌ಪೋಸ್ಟ್‌ ನಲ್ಲಿ ಸಿಕ್ತು ಬಾಕ್ಸ್‌ಗಟ್ಟಲೇ ಎಣ್ಣೆ! ಎರಡುವರೆ ಲಕ್ಷ ರೂಪಾಯಿ ಕ್ಯಾಶ್‌, 3.84 ಲಕ್ಷದ ಸೆಂಟೆಡ್ ತಂಬಾಕು

The code of conduct is tightened! Boxes of liquor and Rs 2.5 lakh cash seized at check post

ಬಿಗಿಯಾಯ್ತು ನೀತಿ ಸಂಹಿತೆ !  ಚೆಕ್‌ಪೋಸ್ಟ್‌ ನಲ್ಲಿ ಸಿಕ್ತು ಬಾಕ್ಸ್‌ಗಟ್ಟಲೇ ಎಣ್ಣೆ! ಎರಡುವರೆ ಲಕ್ಷ ರೂಪಾಯಿ ಕ್ಯಾಶ್‌,  3.84 ಲಕ್ಷದ ಸೆಂಟೆಡ್ ತಂಬಾಕು
code of conduct

Shivamogga  Mar 26, 2024 code of conduct    ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇನ್ನಷ್ಟು ಬಿಗಿಯಾಗುತ್ತಿದೆ. ಈ ನಡುವೆ ಶಿವಮೊಗ್ಗ ಚುನಾವಣಾಧಿಕಾರಿಗಳು ಅಕ್ರಮ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಜೊತೆಯಲ್ಲಿ ಶಿವಮೊಗ್ಗ ಪೊಲೀಸರು ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಎರಡುವರೆ ಲಕ್ಷ ರೂಪಾಯಿ ಸೀಜ್‌ ಮಾಡಿದ್ದಾರೆ.  ಈ ಸಂಬಂಧ ಪ್ರಕಟಣೆ ನೀಡಲಾಗಿದೆ.  

ಅಕ್ರಮ ಮದ್ಯ-ಹಣ ವಶ : ಪ್ರಕರಣ ದಾಖಲು

ಲೋಕಸಭಾ ಮತ ಕ್ಷೇತ್ರಗಳ ವ್ಯಾಪ್ತಿಯ ಚೆಕ್‍ಪೋಸ್ಟ್‌ಗಳಲ್ಲಿ ಮಾ. 25 ರಂದು ಅಕ್ರಮವಾಗಿ ಸಾಗಿಸುತ್ತಿದ್ದ/ಮಾರಾಟ ಮಾಡುತ್ತಿದ್ದ ಸುಮಾರು ರೂ. 3126 ಮೊತ್ತದ 8.010 ಲೀಟರ್ ಮದ್ಯವನ್ನು ಪೊಲೀಸ್ ಇಲಾಖೆಯಿಂದ ಹಾಗೂ ಸುಮಾರು ರೂ. 16040 ಮೊತ್ತದ 47.38 ಲೀ ಮದ್ಯ ಸೇರಿ ಒಟ್ಟು ರೂ.19167 ಮೌಲ್ಯದ 55.39 ಲೀಟರ್ ಮದ್ಯವನ್ನು ಹಾಗೂ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ.2,60,000 ಹಣವನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಲೋಕಸಭಾ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಸಾಗರ -117 ಮತಕ್ಷೇತ್ರ ವ್ಯಾಪ್ತಿಯ ನಾಗೋಡಿ ಚೆಕ್‍ಪೋಸ್ಟ್‍ನಲ್ಲಿ ಎಸ್‍ಎಸ್‍ಟಿ ತಂಡವು ಸುಮಾರು ರೂ.3.84 ಲಕ್ಷದ ಸೆಂಟೆಡ್ ತಂಬಾಕು ಹಾಗೂ ತಂಬಾಕನ್ನು ಸಾಗಿಸುತ್ತಿದ್ದ ಬಸ್‍ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಎಫ್‍ಎಸ್‍ಟಿ ತಂಡಕ್ಕೆ ಹಸ್ತಾಂತರಿಸಿದೆ. ತಂಡದಲ್ಲಿ ನಾಗೇಶ್ ಎನ್ ಆರ್, ಚಂದ್ರಶೇಖರ, ಪ್ರವೀಣ್ ಇದ್ದರು.