ಭದ್ರಾ ಡ್ಯಾಂನಿಂದ ನೀರು ಬಿಡುಗಡೆ! ಪಂಪ್‌ ಸೆಟ್‌ ಅಳವಡಿಸಿದರೇ ಹುಷಾರ್!‌ ಎಚ್ಚರಿಕೆ ನೀಡಿದ ನೀರಾವರಿ ನಿಗಮ

Water released from Bhadra dam Beware of installing a pump set! Irrigation Corporation issues warning

ಭದ್ರಾ ಡ್ಯಾಂನಿಂದ ನೀರು ಬಿಡುಗಡೆ! ಪಂಪ್‌ ಸೆಟ್‌ ಅಳವಡಿಸಿದರೇ ಹುಷಾರ್!‌ ಎಚ್ಚರಿಕೆ ನೀಡಿದ ನೀರಾವರಿ ನಿಗಮ
Water released from Bhadra dam

Shivamogga  Mar 26, 2024   Water released from Bhadra dam  ಮಾ.  29 ರಿಂದ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಹಾಗೂ ಅಕ್ರಮವಾಗಿ ಪಂಪ್‌ ಸೆಟ್‌ ಅಳವಡಿಸಿ ನೀರು ಹರಿಸುವವರಿಗೆ ಎಚ್ಚರಿಕೆ ನೀಡಲಾಗಿದೆ. 

 

2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ಬೃಹತ್/ಮಧ್ಯಮ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ನದಿಯ ಮೂಲಕ ದಿನಾಂಕ: 29-03-2024 ರಿಂದ ದಿ:06-04-2024 ರವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್‍ನಂತೆ ಒಟ್ಟು 2.00 ಟಿ.ಎಂ.ಸಿ ನೀರನ್ನು ಹರಿಸಲಾಗುವುದು ಎಂದು ತಿಳಿಸಲಾಗಿದೆ. 

ಇದನ್ನ ಸಹ ಓದಿ  Bhadra dam ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ! ವೇಳಾಪಟ್ಟಿ ಇಲ್ಲಿದೆ! ಎಷ್ಟು ನೀರು ಹರಿಸಲಾಗುತ್ತೆ? ಎಚ್ಚರಿಕೆ ಸಂದೇಶವೇನು ? ವಿವರ ಓದಿ

ಈ ಸಂಬಂಧ ನೀರು ಹರಿಸುವ  ಅವಧಿಯಲ್ಲಿ ನದಿಯಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನ ಕರುಗಳನ್ನು ನದಿಗೆ ಇಳಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವಂತೆ ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.