ಶಿವಮೊಗ್ಗ ನಾಗರಿಕರ ಗಮನಕ್ಕೆ | ಕೋರ್ಬಿವ್ಯಾಕ್ಸ್ ಲಸಿಕೆ Corbivax vaccine  ಬಗ್ಗೆ ಆರೋಗ್ಯ ಇಲಾಖೆಯ ಪ್ರಕಟಣೆ

Shimoga citizens notice | Health Department's announcement about Corbivax vaccine Corbivax vaccine

ಶಿವಮೊಗ್ಗ ನಾಗರಿಕರ ಗಮನಕ್ಕೆ |  ಕೋರ್ಬಿವ್ಯಾಕ್ಸ್  ಲಸಿಕೆ Corbivax vaccine  ಬಗ್ಗೆ ಆರೋಗ್ಯ ಇಲಾಖೆಯ ಪ್ರಕಟಣೆ
ಕೋರ್ಬಿವ್ಯಾಕ್ಸ್ ಲಸಿಕೆ, Corbivax vaccin

SHIVAMOGGA  |  Jan 2, 2024  |   ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಿರಿ / Corbivax vaccine 

Corbivax vaccine /ಕೋರ್ಬಿವ್ಯಾಕ್ಸ್ ಲಸಿಕೆ

ಕೋವಿಡ್-19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೇ ಉಳಿದಿರುವ 60 ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಈ ಹಿಂದೆ ಕೋವಿಡ್-19 ಲಸಿಕೆ ಪಡೆಯದೇ ಇರುವ ಆರೋಗ್ಯ ಕಾರ್ಯಕರ್ತೆಯರು ಮತ್ತು ಈ ಗುಂಪಿಗೆ ಸೇರಿದ ಫಲಾನುಭವಿಗಳು ಜಿಲ್ಲಾಸ್ಪತ್ರೆ ಅಥವಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋರ್ಬಿವ್ಯಾಕ್ಸ್ ಲಸಿಕೆ ಪಡೆದುಕೊಳ್ಳಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಹೆಚ್​ಒ ಡಾ.ರಾಜೇಶ್ ಸುರಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್ – 19 ಲಸಿಕಾಕರಣ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ. ಆದರೆ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಪಡೆದೇ ಇರುವ ಫಲಾನುಭವಿಗಳು ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕು. ಜಿಲ್ಲೆಗೆ 820 ಡೋಸ್ ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆ ಸರಬರಾಜಾಗಿದ್ದು ಮುನ್ನೆಚ್ಚರಿಕೆ ಡೋಸ್ ಆಗಿ ಬಳಸಲು ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ. 

READ: ಅಪ್ರಾಪ್ತ ಪ್ರೇಮ? ರೈಲಿನಡಿ ಸಿಲುಕಿ ಸ್ಕೂಲ್ ಬಸ್​​ ಡ್ರೈವರ್ ಹಾಗೂ ವಿದ್ಯಾರ್ಥಿನಿ ಸಾವು!

ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆಯನ್ನು ವಿಜಾತಿ(ಹೆಟೆರೊಲಾಗಸ್)ಮುನ್ನೆಚ್ಚರಿಕೆ ಡೋಸ್ ಆಗಿ ನೀಡಬಹುದಾಗಿರುತ್ತದೆ. ಆದ್ದರಿಂದ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2 ಡೋಸ್ ಲಸಿಕೆ ಪಡೆದು 06 ತಿಂಗಳುಗಳು ಅಥವಾ 26 ವಾರಗಳನ್ನು ಪೂರೈಸಿದ 18 ವರ್ಷ ಮೇಲ್ಪಟ್ಟವರು ಮುನ್ನೆಚ್ಚರಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲಾನುಭವಿಗಳು ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಬಹುದಾಗಿರುತ್ತದೆ ಎಂದು ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಹಾಗೂ ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ್‍ನಾಯ್ಕ್ ತಿಳಿಸಿದ್ದಾರೆ.