ಅಪ್ರಾಪ್ತ ಪ್ರೇಮ? ರೈಲಿನಡಿ ಸಿಲುಕಿ ಸ್ಕೂಲ್ ಬಸ್​​ ಡ್ರೈವರ್ ಹಾಗೂ ವಿದ್ಯಾರ್ಥಿನಿ ಸಾವು!

This Article Written by / Malenadu Today / ಜನವರಿ 2, 2024

SHIVAMOGGA  |  Jan 2, 2024  |  ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪ್ರಾಪ್ತ ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿದೆ. ಈ ಸಂಬಂಧ ರಾಜ್ಯದ ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದು, ಆ ವರದಿಯನ್ನು ನಂಬುವುದಾದರೆ, ಪ್ರಕರಣದಲ್ಲಿ ಸ್ಕೂಲ್​ ಬಸ್​ ಡ್ರೈವರ್ ಹಾಗೂ ಶಾಲೆಯ ವಿದ್ಯಾರ್ಥಿನಿಯೊಬ್ಬರು ರೈಲಿನಡಿ ಬಿದ್ದು ಸಾವನ್ನಪ್ಪಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆ ತಾಲ್ಲೂಕು ಒಂದರಲ್ಲಿ ಈ ಘಟನೆ ಸಂಭವಿಸಿದೆ. ಸ್ಕೂಲ್​ವೊಂದರ  ಸ್ಕೂಲ್ ವ್ಯಾನ್​ ಡ್ರೈವರ್ ಆಗಿದ್ದ ವ್ಯಕ್ತಿಯು ಅದೇ ಸ್ಕೂಲ್​ನ ವಿದ್ಯಾರ್ಥಿನಿಯನ್ನ ಪ್ರೀತಿಸ್ತಿದ್ದ ಎನ್ನಲಾಗಿದೆ. ಹೊಸವರ್ಷದ ಪಾರ್ಟಿಗೆ ಹೋಗುವುದಾಗಿ ವಿದ್ಯಾರ್ಥಿನಿ ಹೊರಕ್ಕೆ ಹೋಗಿದ್ದು, ಬಳಿಕ ಆಕೆಯ ಶವ ಡ್ರೈವರ್​ ನ ಶವದ ಜೊತೆಗೆ ಪತ್ತೆಯಾಗಿದೆ. ರೈಲಿನಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಿಲ್ಲ. 

READ : ಚಳಿಯ ನಡುವೆ ಮಳೆಯ ಆಗಮನ! ಹವಾಮಾನ ಇಲಾಖೆ ನೀಡಿದೆ ಮನ್ಸೂಚನೆ

ಇಬ್ಬರ ನಡುವಿನ ಪ್ರೇಮ ಕಾರಣವಾಯ್ತಾ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಆದರೆ ಸ್ನೇಹಿತರ ಜೊತೆಗೆ ಪಾರ್ಟಿಗೆ ಹೋಗುವುದಾಗಿ ವಿದ್ಯಾರ್ಥಿನಿ ಡ್ರೈವರ್ ಜೊತೆಗೆ ಹೋಗಿದ್ದು ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ. 

ಮುಂದಿನ ಸುದ್ದಿ ಒದಿ

Leave a Comment