Bhadra dam ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ! ವೇಳಾಪಟ್ಟಿ ಇಲ್ಲಿದೆ! ಎಷ್ಟು ನೀರು ಹರಿಸಲಾಗುತ್ತೆ? ಎಚ್ಚರಿಕೆ ಸಂದೇಶವೇನು ? ವಿವರ ಓದಿ

Water released into river from Bhadra reservoir Here's the schedule! How much water is released? What is a warning message? Read details

Bhadra dam ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ! ವೇಳಾಪಟ್ಟಿ ಇಲ್ಲಿದೆ! ಎಷ್ಟು ನೀರು ಹರಿಸಲಾಗುತ್ತೆ? ಎಚ್ಚರಿಕೆ ಸಂದೇಶವೇನು ? ವಿವರ ಓದಿ
Bhadra dam

shivamogga  Mar 26, 2024 Bhadra dam    ಭದ್ರಾ ಜಲಾಶಯದಿಂದ ಬೇಸಿಗೆ ಅವಧಿಯ ನೀರು ಬಿಡಲಾಗುತ್ತಿದೆ. ಈ ಸಂಬಂಧ ವೇಳಾಪಟ್ಟಿಯನ್ನು ಕರ್ನಾಟಕ ನೀರಾವರಿ ನಿಗಮ , ಭದ್ರಾ ಯೋಜನಾ ವೃತ್ತ ಬಿಡುಗಡೆ ಗೊಳಿಸಲಿದೆ. ಪ್ರತಿದಿನ ಮೂರು ಸಾವಿರ ಟಿಎಂಸಿಯಂತೆ ಇದೇ ತಿಂಗಳ ದಿನಾಂಕ:29.03.2024 ರಿಂದ ದಿನಾಂಕ 06.04.2024 ರಾತ್ರಿಯವರೆಗೂ‌ ನೀರು ಹರಿಸಲಾಗುವುದು ಎಂದು ತಿಳಿಸಲಾಗಿದೆ. ಈ ಸಂಬಂಧ ಇಲಾಖೆಯ ಪ್ರಕಟಣೆಯ ವಿವರ ಇಲ್ಲಿದೆ 

ಭದ್ರಾ ಜಲಾಶಯದಿಂದ ಬೃಹತ್/ಮಧ್ಯಮ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ನದಿಯ ಮೂಲಕ ನೀರು ಹರಿಸುವ ಬಗ್ಗೆ.ಉಲ್ಲೇಖ: ಪ್ರಾದೇಶಿಕ ಆಯುಕ್ತರು, ಮೈಸೂರು, ವಿಭಾಗ ಮೈಸೂರು ಇವರ ಅಧ್ಯಕ್ಷತೆಯಲ್ಲಿ ದಿ:21.03.2024ರಂದು ನಡೆದ ಕುಡಿಯುವ ನೀರಿನ ಸಭೆಯ ನಡವಳಿಗಳು.

ಉಲ್ಲೇಖದ ಆದೇಶದಂತೆ. 2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ಬೃಹತ್/ಮಧ್ಯಮ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ನದಿಯ ಮೂಲಕ ದಿನಾಂಕ:29.03.2024 ರಿಂದ ದಿ:06.04.2024ರವರೆಗೆ ಈ ಕೆಳಕಂಡಂತೆ ನೀರನ್ನು ಹರಿಸಲಾಗುವುದು.



ನೀರು ಹರಿಸುವ ದಿನಾಂಕ

ದಿನಾಂಕ:29.03.2024 ರಾತ್ರಿಯಿಂದ

ದಿನಾಂಕ:30.03.2024

ದಿನಾಂಕ:31.03.2024

ದಿನಾಂಕ:01.04.2024

ದಿನಾಂಕ:02.04.2024

ದಿನಾಂಕ:03.04.2024

ದಿನಾಂಕ:04.04.2024

ದಿನಾಂಕ:05.04.2024

ದಿನಾಂಕ 06.04.2024 ರಾತ್ರಿಯವರೆಗೂ‌

ಒಟ್ಟಾರೆ

ನೀರಿನ ಪ್ರಮಾಣ (ಕ್ಯೂಸೆಕ್)

-

3000

3000

3000

3000

3000

3000

3000

2200

23,200 (2.00 ಟಿಎಂಸಿ)

  ಎಚ್ಚರಿಕೆ 

ನದಿ ಪಾತ್ರದಲ್ಲಿ ಮೇಲ್ಕಂಡ ದಿನಾಂಕಗಳಂದು ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲಿ ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೇಲೆ ತಿಳಿಸಿದ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳಿಂದ ನೀರೆತ್ತುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಲು ಕೋರಿದೆ.