ಭದ್ರಾ ಎಡದಂಡೆ, ಭದ್ರಾ ಬಲದಂಡೆಗೆ ನೀರು ಬಿಡುಗಡೆ ! ವೇಳಾಪಟ್ಟಿ ಇಲ್ಲಿದೆ!

Water released to Bhadra left bank, Bhadra right bank Here's the schedule!

ಭದ್ರಾ ಎಡದಂಡೆ, ಭದ್ರಾ ಬಲದಂಡೆಗೆ ನೀರು ಬಿಡುಗಡೆ ! ವೇಳಾಪಟ್ಟಿ ಇಲ್ಲಿದೆ!
Water released to Bhadra left bank, Bhadra right bank Here's the schedule!

SHIVAMOGGA |  Jan 12, 2024 8:00 AM GMT+5:30  |  ಭದ್ರಾ ಎಡದಂಡೆ-ಬಲದಂಡೆ ನಾಲೆಗಳಿಗೆ ನೀರು ಹರಿಸುವ ಸಂಬಂಧ ಕೆಲವೊಂದು ವಿವರಗಳನ್ನು ಪ್ರಕಟಣೆಯ ರೂಪದಲ್ಲಿ ವಾರ್ತಾ ಇಲಾಖೆ ಮೂಲಕ ನೀಡಲಾಗಿದೆ. ವಿವರಗಳನ್ನು ನೋಡುವುದಾದರೆ, 2023-24 ನೇ ಸಾಲಿನ ಭದ್ರಾ ಜಲಾಶಯ ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭತ್ತ, ಕಬ್ಬು, ಅರೆ ನೀರಾವರಿ ಬೆಳೆ ಮುಂತಾದ ಯಾವುದೇ ರೀತಿಯ ಬೆಳೆಗಳಿಗೆ ನೀರನ್ನು ಹರಿಸದಿರಲು ಹಾಗೂ ಬೆಳೆದು ನಿಂತಿರುವ ಬೆಳೆ, ಜನ-ಜಾನುವಾರು, ಕುಡಿಯುವ ನೀರು ಮತ್ತು ಪರಿಸರ ಸಮತೋಲನ ಕಾಪಾಡಿಕೊಳ್ಳಲು ಆನ್ ಅಂಡ್ ಆಫ್ ಪದ್ದತಿಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿದೆ. 

ಭದ್ರಾ ಜಲಾಶಯದಿಂದ ನೀರು

ಬಲದಂಡೆ ನಾಲೆಗೆ ದಿ:15-01-2024 ರಿಂದ ಒಟ್ಟು 53 ದಿನಗಳಿಗೆ ಹಾಗೂ ಎಡದಂಡೆ ನಾಲೆಗೆ ದಿ: 10.01.2024 ರಿಂದ ಒಟ್ಟು 70 ದಿನಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. 

ಭದ್ರಾ ಎಡದಂಡೆ ನಾಲೆ

ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಭದ್ರಾ ಎಡದಂಡೆ ನಾಲೆಯಲ್ಲಿ ಜ.10 ರಿಮದ 25 ರವರೆಗೆ 16 ದಿನ ನೀರು ಹರಿಸುವುದು, ಜ.26 ರಿಂದ ಫೆ.9 ರವರೆಗೆ 15 ದಿನ ನೀರು ನಿಲ್ಲಿಸುವುದು.

 ಫೆ.10 ರಿಂದ 26 ರವರೆಗೆ 17 ದಿನ ನೀರು ಹರಿಸುವುದು, ಫೆ.27 ರಿಂದ ಮಾ.12 ರವರೆಗೆ 15 ದಿನ ನೀರು ನಿಲ್ಲಿಸುವುದು. ಮಾ.3 ರಿಂದ 30 ರವರೆಗೆ 18 ನೀರು ಹರಿಸುವುದು ಮಾ.31 ರಿಂದ ಏ.14 ರವರೆಗೆ 15 ದಿನ ನೀರು ನಿಲ್ಲಿಸುವುದು. ಏ.15 ರಿಂದ ಮೇ.3 ರವರೆಗೆ 19 ದಿನಗಳ ನೀರು ಹರಿಸಲಾಗುವುದು.

ಭದ್ರಾ ಬಲದಂಡೆ ನಾಲೆ 

ಭದ್ರಾ ಬಲದಂಡೆ ನಾಲೆಯಲ್ಲಿ ಜ.15 ರಿಂದ 26 ರವರೆಗೆ 12 ದಿನ ನೀರು ಹರಿಸುವುದು, ಜ.27 ರಿಂದ ಫೆ.15 ರವರೆಗೆ 20 ದಿನ ನೀರು ನಿಲ್ಲಿಸುವುದು. ಫೆ.16 ರಿಂದ 28 ರವರೆಗೆ 13 ದಿನ ನೀರು ಹರಿಸುವುದು, 

ಫೆ.29 ರಿಂದ ಮಾ.19 ರವರೆಗೆ 20 ದಿನ ನೀರು ನಿಲ್ಲಿಸುವುದು. ಮಾ.20 ರಿಂದ ಏ.2 ರವರೆಗೆ 14 ದಿನ ನೀರು ಹರಿಸುವುದು, ಏ.3 ರಿಂದ 22 ರವರೆಗೆ 20 ದಿನಗಳಿಗೆ ನೀರು ನಿಲ್ಲಿಸುವುದು. ಏ.23 ರಿಂದ ಮೇ 5 ರವರೆಗೆ 14 ದಿನಗಳ ನೀರು ಹರಿಸಲಾಗುವುದು ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.