BIG NEWS / ತುಂಗಾ ಅಣೆಕಟ್ಟಿನಿಂದ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ! ಎಲ್ಲಿವರೆಗೂ ಅವಕಾಶ ? ಇಲ್ಲಿದೆ ಪೂರ್ತಿ ವಿವರ

Water released from Tunga dam to right bank and left bank canals How long is the opportunity? Here's the full details

BIG NEWS /  ತುಂಗಾ ಅಣೆಕಟ್ಟಿನಿಂದ  ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ  ನೀರು ಬಿಡುಗಡೆ! ಎಲ್ಲಿವರೆಗೂ  ಅವಕಾಶ ? ಇಲ್ಲಿದೆ ಪೂರ್ತಿ ವಿವರ

KARNATAKA NEWS/ ONLINE / Malenadu today/ Jul 13, 2023 SHIVAMOGGA NEWS

ಶಿವಮೊಗ್ಗ 2023-24 ನೇ ಸಾಲಿನ ಮುಂಗಾರು ಬೆಳಗಳಿಗಾಗಿ ತುಂಗಾ ಅಣೆಕಟ್ಟು ಯೋಜನೆಯ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ಜುಲೈ 13 ರಿಂದ ನವೆಂಬರ್ 30ರವರೆಗೆ ನೀರು ಹರಿಸಲಾಗುವುದು ಎಂದು ತುಂಗಾ ಯೋಜನಾ ನೀರಾವರಿ ಅಧಿಕಾರಿ ಮತ್ತು ಕಾರ್ಯಪಾಲಕ ಇಂಜಿನಿಯರ್ ಬಿ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ನೀರಾವರಿ ಕಾಯ್ದೆ 1976(31), (1) ರ ಅದಿನಿಯಮದನ್ವಯ ಬೆಳೆ ಮಾದರಿಯನ್ನು ಉಲ್ಲಂಘಿಸುವವರು, ನೀರಾವರಿ ಕಾಲುವೆ ಕಟ್ಟಡಗಳನ್ನು ಜಖಂಗೊಳಿಸುವವರು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮ ಒಳಗಾಗುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಹಾಲಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಅನುಸೂಚಿಯಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ಉದ್ದೇಶಿಸಲಾಗಿರುತ್ತದೆ. ಪ್ರಕಟಿತ ಬೆಳೆಗಳನ್ನು ಬೆಳೆಯದೆ  ಬೇರೆ ಬೆಳೆಗಳನ್ನು ಬೆಳೆದು ಬೆಳೆ ಉಲ್ಲಂಘನೆ ಮಾಡಿ ನಷ್ಟ ಅನುಭವಿಸಿದಲ್ಲಿ ಇದಕ್ಕೆ ಸಂಬಂಧಪಟ್ಟ ರೈತರೇ ಹೊಣೆಗಾರರಾಗಿದ್ದು, ಜಲಸಂಪನ್ಮೂಲ ಇಲಾಖೆಯು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ. ರೈತ ಬಾಂಧವರು ನೀರಿನ ಸದ್ಬಳಕೆಗೆ ಸಹಕಾರ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------------