ಸಚಿವರ PA ಎನ್ನುತ್ತಾ! ಸರ್ಕಾರಿ ಅಧಿಕಾರಿಯಿಂದ ₹20 ಸಾವಿರ Google pay ಮಾಡಿಸಿಕೊಂಡ್ರು! ಆಮೇಲೇನಾಯ್ತು ಗೊತ್ತಾ?

The Kodagu police have arrested two persons for allegedly making Google Pay of Rs 20,000 from a government official claiming to be the minister's personal assistant

ಸಚಿವರ PA  ಎನ್ನುತ್ತಾ! ಸರ್ಕಾರಿ ಅಧಿಕಾರಿಯಿಂದ ₹20 ಸಾವಿರ  Google pay  ಮಾಡಿಸಿಕೊಂಡ್ರು! ಆಮೇಲೇನಾಯ್ತು ಗೊತ್ತಾ?

SHIVAMOGGA NEWS / ONLINE / Malenadu today/ Nov 23, 2023 NEWS KANNADA

Kodagu |  Malnenadutoday.com | ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರ ಆಪ್ತ ಸಹಾಯಕರು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ

READ : Shivamogga airport | ಸ್ಟಾರ್ ಏರ್​, ಇಂಡಿಗೋ ನಂತರ ಇನ್ನೆರಡು ಸಂಸ್ಥೆಗಳಿಂದ ಶಿವಮೊಗ್ಗದಲ್ಲಿ ವಿಮಾನ ಸಂಚಾರ!

ಏನಿದು ಕೇಸ್​ ? 

ಮೈಸೂರು ನಿವಾಸಿಗಳಾದ ರಘುನಾಥ (34) ಮತ್ತು ಶಿವಮೂರ್ತಿ (35) ಬಂಧಿತರು. ಕುಶಾಲನಗರ ತಾಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎನ್. ಸಂತೋಷ್ ಎಂಬುವರ ಮೊಬೈಲ್ ಗೆ ನ.19 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಇವರು ಕರೆ ಮಾಡಿ, ತಾವು ಸಚಿವರ ಆಪ್ತ ಸಹಾಯಕರು. ತಮಗೆ ತುರ್ತಾಗಿ 20 ಸಾವಿರ ರೂ. ಹಣದ ಅವಶ್ಯಕತೆಯಿದ್ದು, ಗೂಗಲ್ ಪೇ ಮೂಲಕ ಕಳುಹಿಸಿಕೊಡು. ಹಣವನ್ನು ಆದಷ್ಟು ಬೇಗ ಹಿಂತಿರುಗಿಸುತ್ತೇವೆ ಎಂದು ಹೇಳಿದ್ದರು.

ಅವರ ಮಾತನ್ನು ನಂಬಿದ ಕಂದಾಯ ನಿರೀಕ್ಷಕ ಸಂತೋಷ್, 20 ಸಾವಿರವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದರು. ಮರುದಿನ ಹಣದ ವಿಚಾರವಾಗಿ ಸಂತೋಷ್ ಅವರು ಸಚಿವರ ಕಚೇರಿಯಲ್ಲಿ ಪ್ರಸ್ತಾಪಿಸಿದಾಗ ಹಣ ಪಡೆದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಬಳಿಕ, ತಾವು ವಂಚನೆಗೊಳಗಾಗಿರುವುದನ್ನು ಅರಿತ ಅಧಿಕಾರಿ ಸಂತೋಷ್, ಪೊಲೀಸರಿಗೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.