ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೆಮುಂದೆ ಬಿತ್ತು ಕುಂಬಳಕಾಯಿ, ನಿಂಬೆಹಣ್ಣು, ಕುಂಕುಮ! ವಾಮಚಾರ?

A case of black magic using pumpkin, lemon and kumkum has been suspected near the house of puruppemane gram panchayat president in Hosanagara taluk

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೆಮುಂದೆ ಬಿತ್ತು ಕುಂಬಳಕಾಯಿ, ನಿಂಬೆಹಣ್ಣು, ಕುಂಕುಮ! ವಾಮಚಾರ?

SHIVAMOGGA NEWS / ONLINE / Malenadu today/ Nov 23, 2023 NEWS KANNADA

Shivamogga  | ripponpete |  Malnenadutoday.com |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ  ಪುರಪ್ಪೆಮನೆ  ಗ್ರಾಮ ಪಂಚಾಯಿತಿ ಅಧ್ಯಕ್ಷೆಯವರ ಮನೆಯ‘ ಸುತ್ತಮುತ್ತ ವಾಮಚಾರ ಮಾಡಲಾಗಿದೆ ಎಂಬ ಮಾಹಿತಿಯಿದೆ. 

ಏನಿದು ಘಟನೆ ?

ಮೊನ್ನೆ ಮಂಗಳವಾರ ರಾತ್ರಿ ಈ ಕೃತ್ಯವೆಸಗಲಾಗಿದ್ದು, ಬುಧವಾರ ಬೆಳಗ್ಗೆ ವಿಷಯ ಗೊತ್ತಾಗಿದೆ. ಮನೆಯ ಅಂಗಳದಲ್ಲಿ ಬಲಿ ಹಾಕಿದ ರೀತಿಯಲ್ಲಿ ಕುಂಕುಮ, ನಿಂಬೆಹಣ್ಣು ಹಾಗೂ ಕುಂಬಳಕಾಯಿ ಯನ್ನ ಎಸೆಯಲಾಗಿದೆ. 

ಕುಂಬಳಕಾಯಿಯನ್ನ ಅಡ್ಡಡ್ಡ ಕತ್ತರಿಸಿರುವಂತೆ ಇಟ್ಟಿದ್ದು ಅದರ ಸುತ್ತಲು ಕುಂಕುಮವನ್ನು ಸುರಿಯಲಾಗಿದೆ. ಕುಂಬಳಕಾಯಿ ಮಧ್ಯದಲ್ಲಿಯು ಕುಂಕುಮ ಎರಚಲಾಗಿದ್ದು, ಕತ್ತರಿಸಿದ ನಿಂಬೆಹಣ್ಣುಗಳನ್ನ ಕುಂಕುಮದಲ್ಲಿ ಅದ್ದಿ ಎಸೆದಂತಿದೆ. 

READ : ಸಚಿವರ PA ಎನ್ನುತ್ತಾ! ಸರ್ಕಾರಿ ಅಧಿಕಾರಿಯಿಂದ ₹20 ಸಾವಿರ Google pay ಮಾಡಿಸಿಕೊಂಡ್ರು! ಆಮೇಲೇನಾಯ್ತು ಗೊತ್ತಾ?

ಮೇಲ್ನೋಟಕ್ಕೆ ಇದೊಂದು ಕುತಂತ್ರಿ ಕೆಲಸ ಎನಿಸಿದ್ದು ವಾಮಚಾರದ ಪೂಜೆಗಳು ನಡೆದಿರುವ ಸಾಧ್ಯತೆ ಇಲ್ಲ. ಸಾಮಾನ್ಯವಾಗಿ ಮಲೆನಾಡಿನಲ್ಲಿ ಕೆಲವು ಕುತಂತ್ರಿಗಳು ತಮಗೆ ಆಗದವರ ಮನೆ ಮುಂದೆ ಈ ರೀತಿಯಲ್ಲಿ ನಿಂಬೆಹಣ್ಣು ತುಂಡು ಮಾಡಿ ಎರಡು ದಿಕ್ಕಿ ಎಸೆಯುವಂತಹ ಕೃತ್ಯ ಮಾಡುತ್ತಾರೆ. ಕೆಲವರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮತ್ತೆ ಕೆಲವರು ಮಾನಸಿಕವಾಗಿ ನೊಂದುಕೊಳ್ಳುತ್ತಾರೆ. 

ಸದ್ಯ ಪುರಪ್ಪೆಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆ ಸುತ್ತ ಕಂಡು ಬಂದಿರುವ ದೃಶ್ಯ ಇದೇ ರೀತಿಯದ್ದಾಗಿದ್ದು, ಅಕ್ರಮ ಮರಳು ಸಾಗಾಣಿಕೆಯನ್ನು ತಡೆದಿದ್ದಕ್ಕೆ ಈ ಥರ ಹೆದರಿಸಿರುವ ಕೆಲಸ ಮಾಡಿರಬಹುದು ಎಂದು ಅನುಮಾನಿಸಲಾಗಿದೆ. 

ಘಟನೆ ಸಂಬಂಧ ಹೊಸನಗರ ಪೊಲೀಸ್ ಸ್ಟೇಷನ್​ (hosanagara police station ) ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಕೃತ್ಯವೆಸಗಿದವರನ್ನ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ