ಬೈಕ್ನಲ್ಲಿ ಹೋಗ್ತಿದ್ದವರ ಮೇಲೆ ಜೇನುನೊಣಗಳ ದಾಳಿ, 10 ಮಂದಿಗೆ ಪೆಟ್ಟು! ಒಮಿನಿ-ಟಿಪ್ಪರ್ ಡಿಕ್ಕಿ , ಆರು ಮಂದಿ ಗಂಭೀರ
Bees attacked those who were going on bikes, 10 people were injured! Omni-tipper collision in Hosanagar
Shivamogga Feb 24, 2024 ಒಮಿನಿ ಟಿಪ್ಪರ್ ಡಿಕ್ಕಿ 6 ಮಂದಿ ಗಾಯ
ಶಿವಮೊಗಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಗುಡ್ಡೆಕೊಪ್ಪ ಗ್ರಾಮದ ಬಳಿ ಟಿಪ್ಪರ್ ಹಾಗೂ ಒಮಿನಿ ಡಿಕ್ಕಿಯಾಗಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.‘ಕಾರಿನಲ್ಲಿ 4 ಜನ ಮಹಿಳೆಯರು, 2 ಮಂದಿ ಪುರುಷರು, 4 ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಪ್ರಯಾಣ ಮಾಡುತ್ತಿದ್ದರು
ವಾಹನ ಸವಾರರ ಮೇಲೆ ಜೇನುನೊಣಗಳ ದಾಳಿ
ಇನ್ನೊಂದೆಡೆ ರಿಪ್ಪನ್ ಪೇಟೆ ಸಮೀಪ ಮೂಗೂಡ್ತಿಯಲ್ಲಿ ಜೇನುನೊಣಗಳ ಎದ್ದು ವಾಹನ ಸವಾರರ ಮೇಲೆ ದಾಳಿ ಮಾಡಿ ಮುಳ್ಳಿನ ಪೆಟ್ಟುಕೊಟ್ಟ ಘಟನೆ ನಡೆದಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಮಂದಿಗೆ ಜೇನು ಕಚ್ಚಿದೆ. ಒಬ್ಬರು ಗಂಭೀರವಾಗಿದ್ದಾರೆ . ಗಾಯಾಳುಗಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಓರ್ವರನ್ನ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.