ಯಾರಿಗೂ ಸಿಗದ ಅಜ್ಜಿ ಕಾಡಿಂದ ಕೂಗಿ ಕರೆದಳು! 3 ದಿನ ಅರಣ್ಯದಲ್ಲಿ ಹೇಗಿದ್ದಳು 85 ವರ್ಷದವಳು! ಹೊಸನಗರದಲ್ಲಿ ಅಚ್ಚರಿ

An 85-year-old grandmother who went missing in Hosanagar ಹೊಸನಗರದಲ್ಲಿ ನಾಪತ್ತೆಯಾಗಿದ್ದ ೮೫ ವರ್ಷದ ಅಜ್ಜಿ ಪತ್ತೆಯಾಗಿದ್ದಾಳೆ

ಯಾರಿಗೂ ಸಿಗದ ಅಜ್ಜಿ  ಕಾಡಿಂದ ಕೂಗಿ ಕರೆದಳು! 3 ದಿನ ಅರಣ್ಯದಲ್ಲಿ ಹೇಗಿದ್ದಳು 85 ವರ್ಷದವಳು! ಹೊಸನಗರದಲ್ಲಿ ಅಚ್ಚರಿ

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS

hosanagara | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಾದಗಲ್​ ಸಮೀಪ, ಕಳೇದ ಬಾನುವಾರದಿಂದ ಒಟ್ಟು 3 ದಿನಗಳಿಂದ ನಾಪತ್ತೆಯಾಗಿದ್ದ 85 ವರ್ಷದ ಅಜ್ಜಿ ಜೀವಂತವಾಗಿ ಕಾಡಿನಲ್ಲಿ ಪತ್ತೆಯಾಗಿದ್ದಾಳೆ. ಮೂರು ದಿನ ಕಾಡಿನಲ್ಲಿ ಅನ್ನ ಆಹಾರ ಇಲ್ಲದೇ ಹೇಗಿದ್ದಳು ಎಂಬುದು ಇದೀಗ ಅಚ್ಚರಿ ಮೂಡಿಸ್ತಿದೆ. 

READ : ತೋಟಕ್ಕೆ ಹೋಗಿದ್ದ ಅಜ್ಜಿ ನಿಗೂಢ ನಾಪತ್ತೆ| 48 ಗಂಟೆ ಕಳೆದರೂ ಸಿಗದ ಕ್ಲ್ಯೂ| ಹೊಸನಗರದಲ್ಲಿ ವೃದ್ಧೆಗಾಗಿ ಕೂಂಬಿಂಗ್!



ನಗರ  ಹೋಬಳಿಯ ಸಾದಗಲ್ ವೃದ್ಧೆಶಾರದಮ್ಮ ಮಂಗಳವಾರ ಸಂಜೆ ಸಾವೇಹಕ್ಲು ಬಳಿಯ ಕಬ್ಬಿನ  ಹಿತ್ತಲು ಕಾಡಿನಲ್ಲಿ ಪತ್ತೆಯಾಗಿದ್ದಾರೆ. ಬಾನುವಾರ ತೋಟಕ್ಕೆ ಹೋಗಿದ್ದ ಶಾರದಮ್ಮ ನಾಪತ್ತೆಯಾಗಿದ್ದರು. ಆ ಬಳಿಕ ಮಂಗಳವಾರ ಅವರಿಗಾಗಿ ನಗರ ಪಿಎಸ್‌ಐ ರಮೇಶ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆದಿತ್ತು.

READ K ಮನೆ ಬೀಗದ ಕೀ ತೆಗೆದುಕೊಂಡು ಹೋಗುವಾಗ ಈ ಬಾಲಕಿಗೆ ಆಗಿದ್ದೇನು? ಜೀವಕ್ಕೆ ಹೊಣೆಯಾರು?

ನಿನ್ನೆ ಸಂಜೆ ಸಾದಗಲ್ ಗ್ರಾಮ  ದಿಂದ 6 ಕಿ.ಮೀ. ದೂರದ ಕಬ್ಬಿನ ಹಿತ್ತಲು ಗ್ರಾಮದ  ಕಾಡಿನಲ್ಲಿ ಕಾಡಿನಲ್ಲಿ ಯಾರೋ ಕಿರುಚಿತ್ತಿರುವ ಶಬ್ದ ಕೇಳಿಬಂದಿದೆ. ಅದನ್ನ ಆಲಿಸಿದ  ಸ್ಥಳೀಯರು ಕಾಡಿಗೆ ಹೋಗಿ ನೋಡಿದಾಗ ಶಾರದಮ್ಮ ಪತ್ತೆಯಾಗಿದ್ದಾರೆ.. 



ವಿಶೇಷ ಅಂದರೆ ಶಾರದಮ್ಮರಿಗೆ ಸ್ಥಳೀಯರು ಸಿಕ್ಕಾಗಿ ಗಾಬರಿಯಾಗಬೇಡಿ ಎಂತಾಗಿಲ್ಲ. ಇಂಬಳ ಕಚ್ಚಿದೆಯಷ್ಟೆ ಎಂದಿದ್ದಾರೆ. ಇದನ್ನ ಕೇಳಿದ ಅಜ್ಜಿಯ ಆರೋಗ್ಯದ ಗುಟ್ಟು ನೋಡಿ ಅಚ್ಚರಿ ಪಟ್ಟಿದ್ದಾರೆ. ಮೂರು ದಿನ ಕಾಡಿನಲ್ಲಿ  ಏನೂ ಇಲ್ಲದೆ ಇದ್ದಾಳಲ್ಲ ಗಟ್ಟಿಗಿತ್ತಿ ಎಂದುಕೊಂಡು ಮೊದಲು ಆಕೆಯನ್ನ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ.. 

ಸದ್ಯ  ಆಕೆ  ಮೂರು ದಿನ ಕಾಡಿನಲ್ಲಿ ವೃದ್ಧೆ ಹೇಗೆ ಇದ್ದರು, ತೋಟಕ್ಕೆ ಹೋದ ಅವರು ಕಾಡಿಗೆ ಏಕೆ ಹೋಗಿದ್ದರು ಎಂಬುದು ಗೊತ್ತಾಗಬೇಕಿದೆ. ಅದರ ಬಗ್ಗೆ ವಿಚಾರಣೆ ನಡೆಯುತ್ತಿದೆ.