ಕ್ಲಾಸ್​ನಲ್ಲಿ ಬ್ಯಾಗ್​ ಓಪನ್​ ಮಾಡಿದ ವಿದ್ಯಾರ್ಥಿಗೆ ಕಾದಿತ್ತು ಶಾಕ್! ಬ್ಯಾಗ್​ನಲ್ಲಿದ್ದ ನಾಗರ ಹಾವಿನಿಂದ ಬಚಾವ್ ಮಾಡಿದ ಫ್ರೆಂಡ್​!

A cobra was found in a student's school bag in a school in Hosanagar taluk Balurಹೊಸನಗರ ತಾಲ್ಲೂಕು ಬಾಳೂರು ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್​ನಲ್ಲಿ ನಾಗರ ಹಾವೊಂದು ಪತ್ತೆಯಾಗಿದೆ

ಕ್ಲಾಸ್​ನಲ್ಲಿ ಬ್ಯಾಗ್​ ಓಪನ್​ ಮಾಡಿದ ವಿದ್ಯಾರ್ಥಿಗೆ ಕಾದಿತ್ತು ಶಾಕ್! ಬ್ಯಾಗ್​ನಲ್ಲಿದ್ದ ನಾಗರ ಹಾವಿನಿಂದ ಬಚಾವ್ ಮಾಡಿದ ಫ್ರೆಂಡ್​!

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (Hosnagar taluk) ಬಾಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಸ್ಕೂಲ್​ ಬ್ಯಾಗ್​ನಲ್ಲಿ ನಾಗರ ಹಾವೊಂದು ಸೇರಿಕೊಂಡು ಆತಂಕ ಮೂಡಿಸಿತ್ತು.

ಈ ಘಟನೆ ಶುಕ್ರವಾರ ನಡೆದಿದ್ದು ನಿನ್ನೆ ಬೆಳಕಿಗೆ ಬಂದಿದೆ. ಸ್ಕೂಲ್ ಆರಂಭವಾಗುತ್ತಲೇ  ಶಿಕ್ಷಕರು ಪುಸ್ತಕ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಆಗ ವಿದ್ಯಾರ್ಥಿಯೊಬ್ಬ ಬ್ಯಾಗ್​ ಜಿಪ್ ಓಪನ್​ ಮಾಡಿ ನೋಡಿದ್ದಾನೆ. ಆಗ ಬ್ಯಾಗ್​ನಲ್ಲಿ ಹಾವು ಇರುವುದು ಗೊತ್ತಾಗಿದೆ. 

ತಕ್ಷಣವೇ ಪಕ್ಕದಲ್ಲಿದ್ದ ವಿದ್ಯಾರ್ಥಿಗೆ ಹೇಳಿದ್ಧಾರೆ. ಆತ ಸಮಯ ಪ್ರಜ್ಞೆ ತೋರಿ ಬ್ಯಾಗ್ ಜಿಪ್ ಹಾಕಿದ್ದಾನೆ. ಹೀಗಾಗಿ ಹಾವು ಹೊರಕ್ಕೆ ಬರುವುದು ತಪ್ಪಿದೆ. ಇನ್ನೂ ಬಳಿಕ ಶಿಕ್ಷಕರಿಗೆ ವಿಷಯ ತಿಳಿದು , ಸುತ್ತಮುತ್ತಲಿನವರನ್ನ ಸೇರಿಸಿದ್ದಾರೆ. ಕೊನೆಗೆ ಹಾವನ್ನು ಸಮೀಪದ ಕಾಡಿಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ. 

ಇನ್ನೂ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್​ನಲ್ಲಿ ಹಾವು ಹೇಗೆ ಹೋಯ್ತು ಎಂಬುದು ಅಚ್ಚರಿ ಮೂಡಿಸುತ್ತಿದ್ದು, ಈ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ವಿಚಾರಿಸಿದ್ದಾರೆ.


ಇನ್ನಷ್ಟು ಸುದ್ದಿಗಳು