ಇನ್ನು ಗ್ಯಾರಂಟಿ! Shivamogga Airport ಬಗ್ಗೆ ಮತ್ತೊಂದು ಬಿಗ್ ನ್ಯೂಸ್! ಬೆಂಗಳೂರು-ಶಿವಮೊಗ್ಗ ವಿಮಾನ ಟೈಮಿಂಗ್ಸ್ ಏನು? ಡಿಸಿ ಹೇಳಿದ್ದೇನು?

ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಇದೇ ಆಗಸ್ಟ್ 11 ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು ಮೊದಲ ಫ್ಲೈಟ್ ಬೆಂಗಳೂರಿನಿಂದ ಬಂದಿಳಿಯಲಿದೆ. Guaranteed now! Another big news about Shivamogga Airport! Do you know what was the decision taken at the district administration meeting on flights?

ಇನ್ನು ಗ್ಯಾರಂಟಿ!  Shivamogga Airport  ಬಗ್ಗೆ  ಮತ್ತೊಂದು ಬಿಗ್ ನ್ಯೂಸ್! ಬೆಂಗಳೂರು-ಶಿವಮೊಗ್ಗ ವಿಮಾನ ಟೈಮಿಂಗ್ಸ್ ಏನು? ಡಿಸಿ ಹೇಳಿದ್ದೇನು?

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS 

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 11 ರಿಂದ ವಿಮಾನ ಹಾರಾಟ ಕೈಗೊಳ್ಳುವ ಸಂಬಂಧ ಶಿವಮೊಗ್ಗ ಜಿಲ್ಲಾಡಳಿತ ವಿಶೇಷ ಸಭೆ ನಡೆದಿದೆ. ಸಭೆಯಲ್ಲಿ ಚರ್ಚಿಸಲಾದ ಅಂಶಗಳನ್ನು ನೋಡುವುದಾದರೆ,  ಸೋಗಾನೆ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 11 ರಿಂದ ವಿಮಾನ ಹಾರಾಟ ಕಾರ್ಯಾಚರಣೆ ಹಿನ್ನೆಲೆ ಅಗತ್ಯ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರು ಮಾತನಾಡುತ್ತಾ,  ವಿಮಾನ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು. ಇಂಡಿಗೋ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಚರ್ಚಿಸಿ ಅವರು ವೀಕ್ಷಣೆ ವೇಳೆ ನೀಡಿರುವ ಅಂಶಗಳು ಹಾಗೂ ಹೆಚ್ಚುವರಿ ಸೌಕರ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 

78 ಆಸನದ ವಿಮಾನ

78 ಆಸನ ವ್ಯವಸ್ಥೆಯುಳ್ಳ ಎಟಿಆರ್-72 ಇಂಡಿಗೋ ವಿಮಾನ ಆ.11 ರಂದು ಕಾರ್ಯಾಚರಣೆ ನಡೆಸಲಿದ್ದು, ಅವರು ಅಬ್ಸರ್ವೇಷನ್ ನಲ್ಲಿ ಕೇಳಿರುವ ಸೌಕರ್ಯಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯುಡಿ ಅಧಿಕಾರಿಗಳು ಮತ್ತು ವಿಮಾಣ ನಿಲ್ದಾಣ ನಿರ್ದೇಶಕರಿಗೆ ಸೂಚಿಸಿದರು.

ಅಧಿಕೃತ ವೆಬ್​ಸೈಟ್​ ಶೀಘ್ರದಲ್ಲಿಯೇ ಜಾರಿ

ವಿಮಾನ ನಿಲ್ದಾಣದ ಅಧಿಕೃತ ವೆಬ್‍ಸೈಟ್ ನ್ನು ಅಭಿವೃದ್ದಿಪಡಿಸಿ ಅಂದು ಗಣ್ಯರಿಂದ ಲೋಕಾರ್ಪಣೆ ಮಾಡಿಸಬೇಕು. ಗಣ್ಯರ ಸ್ವಾಗತ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದರು. 

ಅಗತ್ಯ ಮೂಲಭೂತ ಸೌಕರ್ಯ

ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಾಹನಗಳ ಸೌಕರ್ಯ, ಕಾಫಿ-ತಿಂಡಿ ಮಳಿಗೆಗಳು, ಅಗತ್ಯ ಆಂಬುಲೆನ್ಸ್ ಹಾಗೂ ಜಿಲ್ಲಾ ಪ್ರವಾಸೋದ್ಯಮಕ್ಕೆ ಒಂದು ಪ್ರತ್ಯೇಕ ಮಳಿಗೆಯನ್ನು ಸಿದ್ದಪಡಿಸುವಂತೆ ತಿಳಿಸಿದರು.

ಬಫರ್​ಜೋನ್​ಗೆ ಕ್ರಮ

ವಿಮಾನದ ನಿಲ್ದಾಣದ ಸುತ್ತಮುತ್ತ ನಿಯಮಾನುಸಾರ ಬಫರ್‍ಝೋನ್ ಅಧಿಸೂಚನೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು ಅಂದು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಎಲ್ಲ ಅಂಶಗಳ ಕುರಿತು ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ವಿಮಾನ ಹಾರಾಟ ಆರಂಭದ ವೇಳಾಪಟ್ಟಿ

ಶಿವಮೊಗ್ಗ ವಿಮಾನ ನಿಲ್ದಾಣ ನಿರ್ದೇಶಕ ಕ್ಯಾಪ್ಟನ್  ಶಮಂತ್ ಮಾತನಾಡಿ, ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ.ಪಾಟೀಲ್ ರವರು

ಆ.11 ರ ಬೆಳಿಗ್ಗೆ 9.30 ಕ್ಕೆ ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ  ಹೊರಟು ಬೆಳಿಗ್ಗೆ 11 ಕ್ಕೆ ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ಆಗಮಿಸುವರು. 

ಬೆಳಿಗ್ಗೆ 11.20 ಕ್ಕೆ ವಿಮಾನ ಪ್ರಯಾಣಿಕರೊಂದಿಗೆ ಶಿವಮೊಗ್ಗದಿಂದ ನಿರ್ಗಮಿಸಿ, ಮಧ್ಯಾಹ್ನ 12.15 ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪುವ ಯೋಜನೆ ಇದೆ ಎಂದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ(ಪ್ರಭಾರ) ಮೇಘನಾ ಆರ್, ಶಿವಮೊಗ್ಗ ಎಸಿ ರವಿಚಂದ್ರನ್‍ನಾಯಕ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಸಂಪತ್‍ಕುಮಾರ್ ಪಿಂಗಳೆ, ಪೊಲೀಸ್ ಪಡೆ ಅಸಿಸ್ಟೆಂಟ್ ಕಮಾಂಡೆಂಟ್ ಚಂದ್ರಶೇಖರ್, ಕೆಎಸ್‍ಐಐಡಿಸಿ ಅಧಿಕಾರಿಗಳು, ಇತರೆ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು. 


ತೀರ್ಥಹಳ್ಳಿ ರೋಡ್​ ಅಟ್ಯಾಕ್ ಕೇಸ್! ಐವರು ಆರೋಪಿಗಳು ಅರೆಸ್ಟ್!

ತೀರ್ಥಹಳ್ಳಿ ಆಗುಂಬೆ ಸರ್ಕಲ್​ನಲ್ಲಿ ಹೊಡೆದಾಟ ನಡೆಸಿ ಮಾರಕಾಸ್ತ್ರದಿಂದ ಅಟ್ಟಾಡಿಸಿದ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ಕೇಸ್ ದಾಖಲಿಸಿದ್ದ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ಧಾರೆ. ನಡೆದ ಘಟನೆ ಸಂಬಂಧ  ಮಲೆನಾಡು ಟುಡೆಯ ವರದಿ ಇಲ್ಲಿದೆ ಕ್ಲಿಕ್​ ಮಾಡಿ  ತೀರ್ಥಹಳ್ಳಿ ಪಟ್ಟಣಕ್ಕೆ ಏನಾಗಿದೆ!? ನಿನ್ನೆ ಆಗುಂಬೆ ಸರ್ಕಲ್​ನಲ್ಲಿ ಆಗಿದ್ದೇನು? ತಾಗಿದ್ಯಾರು? ಪೊಲೀಸರ ಖಾಯಂ ಅತಿಥಿ ಕಿರಿಕ್​ನ ಕಂಪ್ಲೀಟ್ ರಿಪೋರ್ಟ್!?

ದೀವಿತ್, ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬವರ ಜೊತೆಗೆ ಕಿರಿಕ್​ ತೆಗೆದಿದ್ದ ಚೋರ್ ಸಮೀರ್ ಎಂಬಾತ ಮತ್ತು ಆತನ ಗ್ಯಾಂಗ್ ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿತ್ತು. ಆನಂತರ ಚೋರ್ ಸಮೀರ್​ ಮಚ್ಚು ಹಿಡಿದು ಅಲ್ಲಿದ್ದವರನ್ನ ಅಟ್ಟಾಡಿಸಿದ್ದ. ಈ ಘಟನೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೇ ವಿಚಾರವಾಗಿ ತೀರ್ಥಹಳ್ಳಿ ಪೊಲೀಸರು, IPC 1860 (U/s-143,144,147,148,341,323,324,307,504,149) ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಸದ್ಯ ಘಟನೆ ಸಂಬಂಸ ಎ2 ಸಫಾನ್ ಸೇರಿ ಒಟ್ಟು ಐವರನ್ನ ಬಂಧಿಸಿದೆ. ಆದರೆ ಚೋರ್ ಸಮೀರ್ ಇನ್ನೂ ಮಾತ್ರ ಪೊಲೀಸರಿಗೆ ಪತ್ತೆಯಾಗಿಲ್ಲ! 

ಶಿವಮೊಗ್ಗ ಸಿಟಿಯಲ್ಲಿ ವೀಲಿಂಗ್! ಕಾಲೇಜುಗಳ ಬಳಿಯಲ್ಲಿ ಬೈಕ್​ ಸ್ಟಂಟ್ ಮಾಡ್ತಿದ್ದ ಯುವಕರಿಗೆ ಪೊಲೀಸರು ನೀಡಿದ್ರು ಶಾಕ್

ಸಾಗರ ತಾಲ್ಲೂಕಿನ ಐಗಿನಬೈಲ್​ನಲ್ಲಿ ಅಪಘಾತಕ್ಕೀಡಾಡ ಖಾಸಗಿ ಬಸ್​! ಅನುಮಾನಕ್ಕೂ ಕಾರಣವಾಯ್ತು ಮಾಂಸದ ಮೂಟೆ!

ಅಧಿಕಾರಿಗಳ ಆಟ, ಜನಪ್ರತಿನಿಧಿಗಳಿಗೆ ಜೀವ ಸಂಕಟ! ಹೊಸನಗರದಲ್ಲಿ ಇದೆಂಥಾ ಅವಸ್ಥೆ ಮಾರಾಯ್ರೆ

!ಶಿವಮೊಗ್ಗಕ್ಕೂ ಬಂದ ಕೃತಕ ಸುಂದರಿ! ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಸೃಷ್ಟಿಯಾದ ಗೀತಾ? ಯಾರಿವಳು ಸಹ್ಯಾದ್ರಿ ನ್ಯೂಸ್ ಆ್ಯಂಕರ್​ ಗೊತ್ತಾ?