ಪಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ | ವಿಡಿಯೋ ಷೇರ್‌ ಮಾಡಿದರೇ ಬೀಳುತ್ತೆ ಕೇಸ್‌

Pajwal Revanna Pen Drive Case | Warning of legal action for sharing the video. Hassan Pen Drive Case ,Hassan Pen Drive Video Link , Prajwal Sex Sandal Case, Pen Drive Case SIT

ಪಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ | ವಿಡಿಯೋ ಷೇರ್‌ ಮಾಡಿದರೇ ಬೀಳುತ್ತೆ ಕೇಸ್‌
Hassan Pen Drive Case ,Hassan Pen Drive Video Link , Prajwal Sex Sandal Case, Pen Drive Case SIT

SHIVAMOGGA | MALENADUTODAY NEWS | May 6, 2024  

ಬೆಂಗಳೂರು |  ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ವಿಡಿಯೋಗಳನ್ನು ಷೇರ್‌ ಮಾಡಿದರೇ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಸಿದೆ. ವಿಕೃತವಾಗಿ ಸೋಶಿಯಲ್‌ ಮೀಡಿಯಾಗಳಲ್ಲಿ ವಿಡಿಯೋಗಳನ್ನು ಹಂಚಿಕೆ ಮಾಡುತ್ತಿರುವುದನ್ನ ತಪ್ಪಿಸಲು ಎಸ್‌ಐಟಿ ಮುಂದಾಗಿದ್ದು, ಈ ಸಂಬಂಧ ಗೌಪ್ಯವಾಗಿ ಕಾರ್ಯನಿರ್ವಹಿಸಲು ಆರಂಭಿಸಿದೆ. 

ಅಶ್ಲೀಲ ವಿಡಿಯೋಗಳನ್ನು ವಾಟ್ಸ್‌ಆ್ಯಪ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ  ವಿಶೇಷ ತನಿಖಾ ತಂಡ(ಎಸ್‌ಐಟಿ) ಎಚ್ಚರಿಸಿದೆ.  

ವಾಟ್ಸ್‌ಆ್ಯಪ್ ಸೇರಿ‌ ಇನ್ನಿತರ ಆ್ಯಪ್​​ಗಳ ಮುಖಾಂತರ ವಿಡಿಯೋ ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 69 (ಎ) ಹಾಗೂ 228 (ಎ) 1, 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಈ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಐಟಿ ತಿಳಿಸಿದೆ. 

ಇನ್ನೂ  ಹೆಲ್ಪ್‌ ಲೈನ್‌ ಆರಂಭಿಸಿದ ಬೆನ್ನಲ್ಲೆ ಕೆಲವು ಮಹಿಳೆಯರು ಕರೆ ಮಾಡಿ ಮಾಹಿತಿ ನೀಡಿದ್ದಾರಂತೆ. ಅವರನ್ನ ಸಂಪರ್ಕಿಸುವ ಪ್ರಯತ್ನ ನಡೆಸಲಿದೆ ಎಂದು ಹೇಳಲಾಗುತ್ತಿದೆ.