ವೋಟು ಹಾಕಿ ಬಂದ ಅಜ್ಜಿ ಸಾವು | ಸುಟ್ಟಗಾಯಗಳಿಂದ ಬಳಲುತ್ತಿರುವ ವ್ಯಕ್ತಿಯಿಂದ ಮತದಾನ |

The old woman who came home after casting her vote died Voting by a person suffering from burns |Shimoga Election, Shimoga Lok Sabha Voting, Shimoga Voting.

ವೋಟು ಹಾಕಿ ಬಂದ ಅಜ್ಜಿ ಸಾವು |  ಸುಟ್ಟಗಾಯಗಳಿಂದ ಬಳಲುತ್ತಿರುವ ವ್ಯಕ್ತಿಯಿಂದ ಮತದಾನ |
Shimoga Election, Shimoga Lok Sabha Voting, Shimoga Voting.

SHIVAMOGGA | MALENADUTODAY NEWS | May 7, 2024  

 

ಶಿವಮೊಗ್ಗ ಲೋಕಸಭಾ ಚುನಾವಣೆ ಮತದಾನದ ದಿನ ಹಲವಷ್ಟು ಘಟನೆಗಳು ನಡೆದಿವೆ. ಕೆಲವು ಘಟನೆಗಳು ನೋವು ತಂದರೆ ಮತ್ತೆ ಕೆಲವು ಘಟನೆಗಳು ವಿಶೇಷ ಎನ್ನಿಸುತ್ತಿವೆ

 

ಶಿಕಾರಿಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಭದ್ರಾವತಿ ವ್ಯಕ್ತಿ ಸಾವನ್ನಪ್ಪಿದರೆ, ಅತ್ತ ಸೊರಬ ತಾಲ್ಲೂಕು ಗ್ರಾಮವೊಂದರಲ್ಲಿ  96 ವರ್ಷದ ಮಹಿಳೆಯೊಬ್ಬರು  ಮತದಾನ ಮಾಡಿ ಬಂದ ಬಳಿಕ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯಿದೆ. 

 

ಅತ್ತ ತೀರ್ಥಹಳ್ಳಿಯಲ್ಲಿ ಮಹಿಳೆಯೊಬ್ಬರು ತಮ್ಮ ಪತಿ ಸಾವಿಗೂ ಮೊದಲೇ ಹೇಳಿದ ಮಾತಿನ ಹಾಗೆ ಅವರ ಇಷ್ಟದ ಅಭ್ಯರ್ಥಿಗೆ ಮತಚಲಾವಣೆ ಮಾಡಿದ್ದಾರೆ. ಅವರ ಪತಿ ಇವತ್ತು ಬೆಳಗ್ಗೆ ಸಾವನ್ನಪ್ಪಿದ್ದರು. ಪತಿ ಅಗಲಿಗೆ ದುಃಖದ ನಡುವೆ ಮಹಿಳೆ ವೋಟು ಚಲಾಯಿಸಿದ್ದಾರೆ. 

 

ಇನ್ನೊಂದೆಡೆ ಶಿವಮೊಗ್ಗದ ಬೊಮ್ಮನಕಟ್ಟೆ ಸಿಲಿಂಡರ್ ಬ್ಲಾಸ್ಟ್ ನಲ್ಲಿ ಶೇಕಡಾ 76ರಷ್ಟು ಸುಟ್ಟ ಗಾಯಗಳಿಂದ ಗಾಯಗೊಂಡು ಇದೀಗ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ಹೊಸಮನೆ ಬೂತ್ ನಂಬರ್ 77 ರಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು.